ಒಟಿಟಿಗೆ ಬರಲು ರೆಡಿ ಆಯ್ತು ‘ಏಳುಮಲೆ’ ಸಿನಿಮಾ; ಅಧಿಕೃತ ಘೋಷಣೆ

‘ಸು ಫ್ರಮ್ ಸೋ’ ಸಿನಿಮಾ ಆಗತಾನೇ ಯಶಸ್ಸು ಕಂಡು ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿ ಆಗಿತ್ತು. ಆ ಬಳಿಕ ರಿಲೀಸ್ ಆಗುವ ಚಿತ್ರಗಳ ಮೇಲೆ ನಿರೀಕ್ಷೆಗಳು ಹೆಚ್ಚುವಂತೆ ಆದವು. ಆ ಸಮಯದಲ್ಲಿ ತೆರೆಗೆ ಬಂದಿದ್ದು ‘ಏಳುಮಲೆ’ ಚಿತ್ರ. ರಕ್ಷಿತಾ ಪ್ರೇಮ್ ಅವರ ಸಹೋದರ ರಾಣ ಅವರು ಈ ಚಿತ್ರದಲ್ಲಿ ನಟಿಸಿದರು ಮತ್ತು ದೊಡ್ಡ ಮಟ್ಟದಲ್ಲಿ ಗೆಲುವು ಕಂಡರು. ಈ ಸಿನಿಮಾ ಒಟಿಟಿಯಲ್ಲಿ ಬರಲು ಸಿದ್ಧವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಒಟಿಟಿಗೆ ಬರಲು ರೆಡಿ ಆಯ್ತು ‘ಏಳುಮಲೆ’ ಸಿನಿಮಾ; ಅಧಿಕೃತ ಘೋಷಣೆ
ಏಳುಮಲೆ
Updated By: ಮಂಜುನಾಥ ಸಿ.

Updated on: Oct 07, 2025 | 9:15 AM

‘ಏಳುಮಲೆ’ ಸಿನಿಮಾ (Elumale Movie) ಚಿತ್ರಮಂದಿರದಲ್ಲಿ ಸೆಪ್ಟೆಂಬರ್ 5ರಂದು ಚಿತ್ರಮಂದಿರದಲ್ಲಿ ರಿಲೀಸ್ ಆಯಿತು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ತರುಣ್ ಸುಧೀರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುವ ಜವಾಬ್ದಾರಿ ತೆಗೆದುಕೊಂಡಿದ್ದರು. ಈಗ ಸಿನಿಮಾ ಒಟಿಟಿಯಲ್ಲಿ ಬರಲು ಸಿದ್ಧವಾಗಿದೆ. ಜೀ5 ಒಟಿಟಿ ಮೂಲಕ ಸಿನಿಮಾ ರಿಲೀಸ್ ಆಗಲಿದೆ ಎಂಬ ಮಾಹಿತಿಯನ್ನು ವಾಹಿನಿಯವರ ಕಡೆಯಿಂದ ಸಿಕ್ಕಿದೆ ಎಂಬುದು ವಿಶೇಷ.

‘ಸು ಫ್ರಮ್ ಸೋ’ ಸಿನಿಮಾ ಆಗತಾನೇ ಯಶಸ್ಸು ಕಂಡು ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿ ಆಗಿತ್ತು. ಆ ಬಳಿಕ ರಿಲೀಸ್ ಆಗುವ ಚಿತ್ರಗಳ ಮೇಲೆ ನಿರೀಕ್ಷೆಗಳು ಹೆಚ್ಚುವಂತೆ ಆದವು. ಆ ಸಮಯದಲ್ಲಿ ತೆರೆಗೆ ಬಂದಿದ್ದು ‘ಏಳುಮಲೆ’ ಚಿತ್ರ. ರಕ್ಷಿತಾ ಪ್ರೇಮ್ ಅವರ ಸಹೋದರ ರಾಣ ಅವರು ಈ ಚಿತ್ರದಲ್ಲಿ ನಟಿಸಿದರು ಮತ್ತು ದೊಡ್ಡ ಮಟ್ಟದಲ್ಲಿ ಗೆಲುವು ಕಂಡರು. ಈ ಸಿನಿಮಾ ಒಟಿಟಿಯಲ್ಲಿ ಬರಲು ಸಿದ್ಧವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

‘ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಮತ್ತು ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಏಳುಮಲೆ ಅಕ್ಟೋಬರ್ 17 ರಂದು ನಿಮ್ಮ ಕನ್ನಡ Z5ನಲ್ಲಿ ಪ್ರಸಾರ ಆಗಲಿದೆ’ ಎಂದು ಜೀ ಕನ್ನಡ ಮಾಹಿತಿ ನೀಡಿದೆ. ಇದಾದ ಬಳಿಕ ಸಿನಿಮಾ ಜೀ ಕನ್ನಡದಲ್ಲಿ ಪ್ರಸಾರ ಕಾಣುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ. ಈ ವಿಷಯ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಥಿಯೇಟರ್​ನಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ವೀಕ್ಷಿಸಬಹುದು.

‘ಏಳುಮಲೆ’ ಚಿತ್ರವನ್ನು ಪುನೀತ್ ರಂಗಸ್ವಾಮಿ ನಿರ್ದೇಶನ ಮಾಡಿದ್ದಾರೆ. ರಾಣ, ಪ್ರಿಯಾಂಕಾ ಆಚಾರ್, ಜಗಪತಿ ಬಾಬು, ಕಿಶೋರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಅವಧಿ ಎರಡು ಗಂಟೆ 13 ನಿಮಿಷ ಇದೆ.

ಇದನ್ನೂ ಓದಿ: ‘ಸು ಫ್ರಮ್ ಸೋ’ ಬಳಿಕ ಮತ್ತೊಂದು ಹಿಟ್ ಚಿತ್ರ; ‘ಏಳುಮಲೆ’ ಸಿನಿಮಾ ಕಲೆಕ್ಷನ್ ಎಷ್ಟು?

ಕರ್ನಾಟಕ ಮತ್ತು ತಮಿಳುನಾಡು ನಡುವಿನ ಗಡಿ ಪ್ರದೇಶಗಳಲ್ಲಿ ಈ ಕಥೆ ನಡೆಯುತ್ತದೆ. ಈ ಚಿತ್ರವು ಚಾಮರಾಜನಗರದ ಕ್ಯಾಬ್ ಚಾಲಕ ಹರೀಶ್ ಮತ್ತು ಸೇಲಂನ ಶ್ರೀಮಂತ ಯುವತಿಯಾದ ರೇವತಿ ಸುತ್ತ ಸಾಗುತ್ತದೆ. ಇವರ ಪ್ರೇಮ ಕಥೆ ಕಳ್ಳಸಾಗಣೆದಾರರು ಮತ್ತು ದೊಡ್ಡ ರಾಜಕೀಯ ಒಳಹರಿವುಗಳೊಂದಿಗೆ ಸಿಕ್ಕಿಹಾಕಿಕೊಳ್ಳುತ್ತದೆ. ಇದು ನೈಜ ಘಟನೆ ಆಧರಿಸಿದ ಸಿನಿಮಾ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.