Reliance Jio: ಜಿಯೋದಿಂದ ಮತ್ತೊಮ್ಮೆ ಅತ್ಯಾಕರ್ಷಕ ಪ್ಲಾನ್ – ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ 2 ಪ್ರೀಮಿಯಂ ಯೋಜನೆಗಳು ಲಭ್ಯ

| Updated By: ಸಾಧು ಶ್ರೀನಾಥ್​

Updated on: Feb 24, 2022 | 9:10 AM

ಡಿಸ್ನಿ+ ಹಾಟ್‌ಸ್ಟಾರ್‌ನೊಂದಿಗೆ ಜಿಯೋ ಬಳಕೆದಾರರು ಅನಿಯಮಿತ ಲೈವ್ ಕ್ರೀಡೆಗಳನ್ನು ನೋಡಬಹುದಾಗಿದೆ. ಇದಲ್ಲದೇ ಟಿವಿಗಿಂತ ಮೊದಲು ಹಾಟ್‌ಸ್ಟಾರ್ ವಿಶೇಷತೆಗಳು ಮತ್ತು ಧಾರಾವಾಹಿಗಳು ಹಾಗೂ ಚಲನಚಿತ್ರಗಳನ್ನು ವಿಕ್ಷೀಸಬಹುದು.

Reliance Jio: ಜಿಯೋದಿಂದ ಮತ್ತೊಮ್ಮೆ ಅತ್ಯಾಕರ್ಷಕ ಪ್ಲಾನ್ - ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ 2 ಪ್ರೀಮಿಯಂ ಯೋಜನೆಗಳು ಲಭ್ಯ
ಜಿಯೋದಿಂದ ಮತ್ತೊಮ್ಮೆ ಅತ್ಯಾಕರ್ಷಕ ಪ್ಲಾನ್: ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ 2 ಪ್ರೀಮಿಯಂ ಯೋಜನೆಗಳು ಲಭ್ಯ
Follow us on

ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋ ಸಂಸ್ಥೆಯು, ಡಿಸ್ನಿ+ ಹಾಟ್‌ಸ್ಟಾರ್ ಜೊತೆಯಾಗಿ ಹೊಸದಾಗಿ ಎರಡು ಯೋಜನೆಗಳನ್ನು ಲಾಂಚ್ ಮಾಡಲಿದೆ. ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆ ಹೊಂದಿರುವ ₹1,499 ಮತ್ತು ₹4,199 ಬೆಲೆಯ ತನ್ನ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಯೋಜನೆಯು ಜಿಯೋ ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ, ಡಿಸ್ನಿ+ ಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನ ಅತ್ಯಂತ ವಿಶೇಷ ಸದಸ್ಯತ್ವವನ್ನು ಒದಗಿಸಲು ಅನುವು ಮಾಡಿಕೊಡುತ್ತದೆ. ಡಿಸ್ನಿ+ ಹಾಟ್‌ಸ್ಟಾರ್‌ನ ಪ್ರೀಮಿಯಂ ಚಂದಾದಾರಿಕೆಯು ಬಳಕೆದಾರರಿಗೆ ಒಂದೇ ಸಮಯದಲ್ಲಿ 4 ಸಾಧನಗಳಲ್ಲಿ ತಮ್ಮ ನೆಚ್ಚಿನ ವಿಷಯವನ್ನು 4K ನಲ್ಲಿ ಆನಂದಿಸಲು ಅನುವು ಮಾಡಿಕೊಡುತ್ತದೆ. ಈ ಸೇವೆಯನ್ನು ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸಂಪರ್ಕಿತ ಟಿವಿಗಳಲ್ಲಿ ಬಳಸಬಹುದು.

ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಸಬ್‌ಸ್ಕ್ರಿಪ್ಶನ್‌ ಪ್ರಯೋಜನಗಳು:
ಡಿಸ್ನಿ+ ಹಾಟ್‌ಸ್ಟಾರ್‌ನೊಂದಿಗೆ ಜಿಯೋ ಬಳಕೆದಾರರು ಅನಿಯಮಿತ ಲೈವ್ ಕ್ರೀಡೆಗಳನ್ನು ನೋಡಬಹುದಾಗಿದೆ. ಇದಲ್ಲದೇ ಟಿವಿಗಿಂತ ಮೊದಲು ಹಾಟ್‌ಸ್ಟಾರ್ ವಿಶೇಷತೆಗಳು ಮತ್ತು ಧಾರಾವಾಹಿಗಳು ಹಾಗೂ ಚಲನಚಿತ್ರಗಳನ್ನು ವಿಕ್ಷೀಸಬಹುದು. ಜೊತೆಗೆ ಡಿಸ್ನಿ+ ಚಲನಚಿತ್ರಗಳು (ಇಂಗ್ಲಿಷ್ + ಡಬ್ ಮಾಡಲಾದ) ಸಿನಿಮಾಗಳನ್ನು ಹಾಗೂ ಡಿಸ್ನಿ + ಓರಿಜಿನಲ್ಸ್ ಅನ್ನು ಯಾವುದೇ ಅಡೆತಡೆ ಇಲ್ಲದೇ ಆನಂದಿಸಬಹದು. ಮತ್ತೂ 4 ಕೆ ಗುಣಮಟ್ಟದಲ್ಲಿ 4 ಸ್ಕ್ರೀನ್‌ಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌ ನೋಡುವ ಅವಕಾಶ ದೊರೆಯಲಿದೆ.

2 ಹೊಸ ಜಿಯೋ ಯೋಜನೆಗಳ ವಿವರಗಳು:

₹1,499 ಪ್ಲಾನ್:
· ₹1499 ಮೌಲ್ಯದ 1 ವರ್ಷದ ಡಿಸ್ನಿ+ ಹಾಟ್‌ಸ್ಟಾರ್‌ ಪ್ರೀಮಿಯಂ ಚಂದಾದಾರಿಕೆ. ಕಾಂಪ್ಲಿಮೆಂಟರಿ ಜಿಯೋ ₹ 719 ಯೋಜನೆ: ದಿನ 2 GB ಡೇಟಾದೊಂದಿಗೆ 84 ದಿನದ ವ್ಯಾಲಿಡಿಟಿ ದೊರೆಯಲಿದೆ. ಜೊತೆಗೆ ಅನಿಯಮಿತ ಕಾಲಿಂಗ್, ದಿನ 100 SMS ಮತ್ತು ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ.

₹4199 ಪ್ಲಾನ್:
· ₹1499 ಮೌಲ್ಯದ 1 ವರ್ಷದ ಡಿಸ್ನಿ+ ಹಾಟ್‌ಸ್ಟಾರ್‌ ಪ್ರೀಮಿಯಂ ಚಂದಾದಾರಿಕೆ. ಕಾಂಪ್ಲಿಮೆಂಟರಿ ಜಿಯೋ ₹4,199 ಯೋಜನೆ: ದಿನ 3 GB ಡೇಟಾದೊಂದಿಗೆ 365 ದಿನದ ವ್ಯಾಲಿಡಿಟಿ ದೊರೆಯಲಿದೆ. ಜೊತೆಗೆ ಅನಿಯಮಿತ ಕಾಲಿಂಗ್, ದಿನ 100 SMS ಮತ್ತು ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ.

₹1499 ಅಥವಾ ₹4199 ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿದ ನಂತರ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಸಬ್‌ಸ್ಕ್ರಿಪ್ಶನ್ ಅನ್ನು ಹೇಗೆ ಸಕ್ರಿಯಗೊಳಿಸುವುದು:

1. ಒಮ್ಮೆ ನೀವು ₹ 1499 ಅಥವಾ ₹ 4199 ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿದರೆ ನಿಮ್ಮ ಮೈ ಜಿಯೋ ಖಾತೆಯಲ್ಲಿ ನೀವು ಅನನ್ಯವಾದ ಡಿಸ್ನಿ+ ಹಾಟ್‌ಸ್ಟಾರ್‌ ಪ್ರೀಮಿಯಂ ಕೂಪನ್ ಕೋಡ್ ಅನ್ನು ಸ್ವೀಕರಿಸುತ್ತೀರಿ.

2. ಒಂದು ವರ್ಷದ Disney+ Hotstar ಪ್ರೀಮಿಯಂ ಸದಸ್ಯತ್ವವನ್ನು ಪಡೆಯಲು ನೀವು ಈ ಕೂಪನ್ ಕೋಡ್ ಅನ್ನು ಬಳಸಬಹುದು.

3. ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಯನ್ನು ಸಕ್ರಿಯಗೊಳಿಸಲು:
a) ಭೇಟಿ ನೀಡಿ: https://www.hotstar.com/in/subscribe/promo
b) ನಿಮ್ಮ ಜಿಯೋ ಸಂಖ್ಯೆಯೊಂದಿಗೆ ಸೈನ್ ಇನ್ ಮಾಡಿ ಮತ್ತು OTP ಅನ್ನು ನಮೂದಿಸಿ
c) ನಂತರ ಅನನ್ಯ ಕೂಪನ್ ಕೋಡ್ ಅನ್ನು ನಮೂದಿಸಿ
d) ದೃಢೀಕರಣವನ್ನು ಒದಗಿಸಿ ಮತ್ತು ನಿಮ್ಮ ಚಂದಾದಾರಿಕೆಯನ್ನು ಸಕ್ರಿಯಗೊಳಿಸಲಾಗಿದೆ

Also Read:
ಬಿಎಂಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕಾಗಿ ಆಗ್ರಹ, ಬಜೆಟ್‌ನಲ್ಲಿ ಗುಡ್‌ನ್ಯೂಸ್‌ ಕೊಡ್ತಾರಾ ಸಿಎಂ ಬೊಮ್ಮಾಯಿ?

Also Read:
ಮೇಕೆದಾಟು 2.0ಗೆ ಕಾಂಗ್ರೆಸ್ ಸಜ್ಜು, ಟಕ್ಕರ್ ಕೊಡಲು ಕೇಸರಿ ಪಡೆ ಡಿಫರೆಂಟ್ ಪ್ಲ್ಯಾನ್!

Published On - 9:09 am, Thu, 24 February 22