ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಬಿಗ್ ಬಾಸ್ ಮನೆಯಲ್ಲಿ ನಾಲ್ಕು ವಾರ ಕಳೆದಿದ್ದಾರೆ. ಈ ವಾರ ಅವರು ನಾಮಿನೇಷನ್ ಲಿಸ್ಟ್ನಲ್ಲಿದ್ದಾರೆ. ಕಡಿಮೆ ವೋಟ್ ಬಿದ್ದರೆ ಅವರು ಮನೆಯಿಂದ ಹೊರಹೋಗೋದು ಪಕ್ಕಾ. ಅದಕ್ಕೂ ಮೊದಲು ‘ಬಿಗ್ ಬಾಸ್’ ಮನೆಯಲ್ಲಿ ಸೋನು ಕಳಪೆ ಪಟ್ಟ ಪಡೆದುಕೊಂಡಿದ್ದಾರೆ. ಈ ಕಾರಣಕ್ಕೆ ಸೋನು ಶ್ರೀನಿವಾಸ್ ಗೌಡ ಜೈಲಿಗೆ ಹೋಗಿದ್ದಾರೆ. ಒಂದು ದಿನ ಅವರು ಜೈಲಿನಲ್ಲಿ ಕಳೆದುಬರಬೇಕಿದೆ.
ಬಿಗ್ ಬಾಸ್ ಮನೆಯಲ್ಲಿ ಪ್ರತಿ ವೀಕೆಂಡ್ಗೂ ಒಂದು ದಿನ ಮೊದಲು ‘ಬಿಗ್ ಬಾಸ್’ ಮನೆಯಲ್ಲಿ ಕಳಪೆ ಹಾಗೂ ಉತ್ತಮ ಯಾರು ಎಂಬ ಆಯ್ಕೆ ನಡೆಯುತ್ತದೆ. ಎಲ್ಲಾ ಸ್ಪರ್ಧಿಗಳು ಕಳಪೆ ಯಾರು ಹಾಗೂ ಉತ್ತಮ ಯಾರು ಎಂದು ಹೇಳಬೇಕು. ಅತೀ ಹೆಚ್ಚು ವೋಟ್ ಪಡೆದವರಿಗೆ ಈ ಎರಡು ಪಟ್ಟ ಸಿಗುತ್ತದೆ. ಈ ವಾರ ಸೋನು ಶ್ರೀನಿವಾಸ್ ಗೌಡ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ. ಮನೆಯ ಬಹುತೇಕರು ಸೋನು ಹೆಸರನ್ನು ತೆಗೆದುಕೊಂಡಿದ್ದಾರೆ.
ಸೋನು ಶ್ರೀನಿವಾಸ್ ಗೌಡ ಮನೆಯಲ್ಲಿ ಎಲ್ಲರನ್ನೂ ಎಂಟರ್ಟೇನ್ ಮಾಡುತ್ತಿದ್ದಾರೆ ನಿಜ. ಆದರೆ, ಟಾಸ್ಕ್ ವಿಚಾರದಲ್ಲಿ ಅವರು ಅಷ್ಟಾಗಿ ಪರ್ಫಾರ್ಮೆನ್ಸ್ ತೋರಿಸುತ್ತಿಲ್ಲ. ಇನ್ನು, ಮನೆಯ ಕೆಲಸದ ವಿಚಾರದಲ್ಲಿ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಮನೆಯ ಕ್ಲೀನಿಂಗ್, ಪಾತ್ರೆ ತೊಳೆಯುವ ವಿಚಾರದಲ್ಲಿ ಸೋನು ಶ್ರೀನಿವಾಸ್ ಗೌಡ ಅಂತರ ಕಾಯ್ದುಕೊಳ್ಳುತ್ತಲೇ ಬಂದಿದ್ದರು.
ಸೋನುಗೆ ಅಡುಗೆ ಮಾಡೋಕೆ ಬರುತ್ತದೆ ಎಂಬ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಅವರು ಅಡುಗೆ ಮಾಡೋಕೆ ಬಂದ ಹೊರತಾಗಿಯೂ ಒಂದೇ ಒಂದು ದಿನವೂ ಕಿಚನ್ ಕಡೆ ಮುಖ ಮಾಡಿರಲಿಲ್ಲ. ಬಿಗ್ ಬಾಸ್ ಆದೇಶದ ಹಿನ್ನೆಲೆಯಲ್ಲಿ ಅವರು ಒಂದು ದಿನ ಅಡುಗೆ ಮಾಡಬೇಕಾಗಿ ಬಂದಿತ್ತು. ಈ ವೇಳೆ ಅವರಿಗೆ ಅಡುಗೆ ಬರುತ್ತದೆ ಎಂಬ ವಿಚಾರ ಗೊತ್ತಾಗಿತ್ತು. ಈ ಕಾರಣದಿಂದಲೂ ಮನೆ ಮಂದಿ ಅವರಿಗೆ ಕಳಪೆ ನೀಡಿದ್ದಾರೆ.
ಇದನ್ನೂ ಓದಿ: ನಾಮಿನೇಷನ್ನಿಂದ ಈವಾರ ಸೇಫ್ ಆದ ರೂಪೇಶ್; ಸಂಕಷ್ಟದಲ್ಲಿ ಸೋನು ಶ್ರೀನಿವಾಸ್ ಗೌಡ
ಕಳಪೆ ಪಟ್ಟ ಪಡೆದುಕೊಂಡ ವ್ಯಕ್ತಿ ಒಂದು ದಿನ ಜೈಲಿನಲ್ಲಿ ಕಳೆಯಬೇಕು. ಕೇವಲ ರಾಗಿಗಂಜಿ ಊಟ ಮಾಡಿಕೊಂಡು ಜೀವನ ನಡೆಸಬೇಕು. ಹೊರಗಿನ ಯಾವುದೇ ಸೌಲಭ್ಯವನ್ನು ಅವರು ಬಳಕೆ ಮಾಡುವಂತಿಲ್ಲ. ಹೀಗಾಗಿ, ಇದು ಸ್ಪರ್ಧಿಗಳಿಗೆ ಕೊಂಚ ಕಷ್ಟವೇ.