ಒಟಿಟಿಯಲ್ಲಿ ಈ ವಾರ ರಿಲೀಸ್ ಆಗುತ್ತಿವೆ ಹಲವು ಸಿನಿಮಾಗಳು; ಇಲ್ಲಿದೆ ವಿವರ

|

Updated on: Sep 16, 2024 | 9:45 PM

ಚಿಯಾನ್ ವಿಕ್ರಮ್ ಅವರು ಆಗಸ್ಟ್ 15ರಂದು ಥಿಯೇಟರ್​ನಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಕರ್ನಾಟಕದ ಕೋಲಾರ ಚಿನ್ನದ ಗಣಿಯ ಕಥೆಯನ್ನು ಹೊಂದಿದೆ. ಈ ಸಿನಿಮಾ ಸೆಪ್ಟೆಂಬರ್ 20ರಂದು ನೆಟ್​ಫ್ಲಿಕ್ಸ್​ ಒಟಿಟಿಯಲ್ಲಿ ರಿಲೀಸ್ ಆಗಲಿದೆ.

ಒಟಿಟಿಯಲ್ಲಿ ಈ ವಾರ ರಿಲೀಸ್ ಆಗುತ್ತಿವೆ ಹಲವು ಸಿನಿಮಾಗಳು; ಇಲ್ಲಿದೆ ವಿವರ
ಒಟಿಟಿಯಲ್ಲಿ ಈ ವಾರ ರಿಲೀಸ್ ಆಗುತ್ತಿವೆ ಹಲವು ಸಿನಿಮಾಗಳು; ಇಲ್ಲಿದೆ ವಿವರ
Follow us on

ದಿನ ಕಳೆದಂತೆ ಒಟಿಟಿ ವ್ಯಾಪ್ತಿ ಹಿರಿದಾಗುತ್ತಲೇ ಇದೆ. ದೊಡ್ಡ ದೊಡ್ಡ ಸಿನಿಮಾಗಳು ಒಟಿಟಿಯಲ್ಲಿ ಬಿಡುಡಗೆ ಕಾಣುತ್ತಿವೆ. ಈ ವಾರವೂ ಒಟಿಟಿ ಪ್ರಿಯರಿಗೆ ಗುಡ್​ನ್ಯೂಸ್ ಇದೆ. ಹೌದು, ಈ ವಾರ ಅನೇಕ ಭಾಷೆಯ ಚಿತ್ರಗಳು ಹಾಗೂ ಸೀರಿಸ್ ವಿವಿಧ ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಪ್ರಸಾರ ಕಾಣುತ್ತಿವೆ. ಆ ಬಗ್ಗೆ ಈ ಸ್ಟೋರಿಯಲ್ಲಿ ಇದೆ ಉತ್ತರ.

ಪಂಚಾಯತ್

ಹಿಂದಿಯಲ್ಲಿ ‘ಪಂಚಾಯತ್’ ಸೀರಿಸ್ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಪಡೆಯಿತು. ಇದರ ತಮಿಳ ರಿಮೇಕ್ ರಿಲೀಸ್ ಆಗುತ್ತಿದೆ. ‘ದಳೈವೆತ್ತಿಯಾನ್ ಪಾಲಯಂ’ ಸೀರಿಸ್ ಸೆಪ್ಟೆಂಬರ್ 20ರಂದು ರಿಲೀಸ್ ಆಗಲಿದೆ. ಈ ಸೀರಿಸ್​ನಲ್ಲಿ ಜಿತೇಂದ್ರ ಕುಮಾರ್ ಪಾತ್ರವನ್ನು ಅಭಿಷೇಕ್ ಕುಮಾರ್ ನಟಿಸುತ್ತಿದ್ದಾರೆ.

ತಂಗಳಾನ್

ಚಿಯಾನ್ ವಿಕ್ರಮ್ ಅವರು ಆಗಸ್ಟ್ 15ರಂದು ಥಿಯೇಟರ್​ನಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಕರ್ನಾಟಕದ ಕೋಲಾರ ಚಿನ್ನದ ಗಣಿಯ ಕಥೆಯನ್ನು ಹೊಂದಿದೆ. ಈ ಸಿನಿಮಾ ಸೆಪ್ಟೆಂಬರ್ 20ರಂದು ನೆಟ್​ಫ್ಲಿಕ್ಸ್​ ಒಟಿಟಿಯಲ್ಲಿ ರಿಲೀಸ್ ಆಗಲಿದೆ.

ಲಾಲ್ ಸಲಾಂ

ರಜನಿಕಾಂತ್ ಅವರ ನಟನೆಯ ‘ಲಾಲ್ ಸಲಾಂ’ ಸಿನಿಮಾ ಫೆಬ್ರವರಿ 9ರಂದು ಥಿಯೇಟರ್​ನಲ್ಲಿ ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ರಜನಿಕಾಂತ್ ಪ್ರಮುಖ ಅತಿಥಿ ಪಾತ್ರ ಮಾಡಿದ್ದರು. ಈ ಸಿನಿಮಾಗೆ ರಜನಿಕಾಂತ್ ಮಗಳು ಐಶ್ವರ್ಯಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಕೊನೆಗೂ ಒಟಿಟಿ ಬಾಗಿಲು ಓಪನ್ ಆಗಿದೆ. ಸನ್​ ಎನ್​ಎಕ್ಸ್​ಟಿ ಮೂಲಕ ಸಿನಿಮಾ ಸೆಪ್ಟೆಂಬರ್ 20ರಂದು ಬಿಡುಗಡೆ ಕಾಣುತ್ತಿದೆ.

ಮಾರುತಿ ನಗರ್ ಸುಬ್ರಮಣ್ಯಂ

ಆಗಸ್ಟ್ 23ರಂದು ‘ಮಾರುತಿ ನಗರ್ ಸುಬ್ರಮಣ್ಯಂ’ ಚಿತ್ರಮಂದಿರದಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಕಾಮಿಡಿ ಡ್ರಾಮಾ ರೀತಿಯಲ್ಲಿ ಮೂಡಿ ಬಂತು. ಈ ಚಿತ್ರ ಆಹಾದಲ್ಲಿ ರಿಲೀಸ್ ಆಗಲಿದೆ.

ಇದನ್ನೂ ಓದಿ: ತಮಿಳಿನ ‘ಕೆಜಿಎಫ್’ ಕತೆ ‘ತಂಗಲಾನ್’ ಒಟಿಟಿ ಬಿಡುಗಡೆ ಯಾವಾಗ?

1000 ಬೇಬಿಸ್

ರೆಹಮಾನ್ ಅವರ ಮಲಯಾಂ ಸೀರಿಸ್ ‘1000 ಬೇಬಿಸ್’ ಪ್ರಸಾರ ಆಗುತ್ತಿದೆ. ಕೇರಳದ ಪಟ್ಟಣ ಒಂದರಲ್ಲಿ ಸಾಮೂಹಿಕ ಶಿಶುಹತ್ಯೆಯ ಮೇಲೆ ಈ ಕಥೆ ಇದೆ. ಈ ಸೀರಿಸ್​ನಲ್ಲಿ ನೀನಾ ಗುಪ್ತಾ, ಸಂಜು ಶಿವರಾಮ್, ಅಶ್ವಿನ್ ಕುಮಾರ್ ಮೊದಲಾದವರು ನಟಿಸಿದ್ದಾರೆ. ಈ ಸೀರಿಸ್​ ಮಲಯಾಳಂ, ತೆಲುಗು, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಸೆಪ್ಟೆಂಬರ್ 20ರಂದು ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.