
ಇತ್ತೀಚೆಗೆ ರನ್ಯಾ ರಾವ್ ಪ್ರಕರಣ ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು. ನಟಿ ಹಾಗೂ ಪೊಲೀಸ್ ಅಧಿಕಾರಿ ಮಗಳಾಗಿರೋ ಅವರು ವಿದೇಶದಿಂದ ಭಾರತಕ್ಕೆ ಚಿನ್ನವನ್ನು ತರುತ್ತಿದ್ದರು. ಅಕ್ರಮವಾಗಿ ಸಾಕಷ್ಟು ಚಿನ್ನವನ್ನು ಭಾರತಕ್ಕೆ ಸೇರಿಸಿದ್ದರು. ಈ ಸಂದರ್ಭದಲ್ಲಿ ಚಿನ್ನ ಕಳ್ಳ ಸಾಗಣೆಯ ಕುರಿತು ಈಗ ವೆಬ್ ಸೀರಿಸ್ ಒಂದು ಬಂದಿದೆ. ಅದುವೇ ‘ಟಾಸ್ಕ್ರೀ: ದಿ ಸ್ಮಗ್ಲರ್ಸ್ ವೆಬ್’. ಇಮ್ರಾನ್ ಹಶ್ಮಿ (Emraan Hashmi ) ನಟನೆಯ ಈ ವೆಬ್ ಸೀರಿಸ್ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲಿ ಸರಣಿ ಲಭ್ಯವಿದೆ. ಕನ್ನಡ ಭಾಷೆಯಲ್ಲಿ ಚಿತ್ರ ಇಲ್ಲ.
ಬೇರೆ ಬೇರೆ ದೇಶಗಳಿಂದ ಭಾರತಕ್ಕೆ ಚಿನ್ನ, ಡ್ರಗ್ಸ್, ದುಬಾರಿ ಬ್ಯಾಗ್, ವಾಚ್ಗಳನ್ನು ಅಕ್ರಮವಾಗಿ ತರಲಾಗುತ್ತದೆ. ಟ್ಯಾಕ್ಸ್ ಕಟ್ಟದೆ ಅದನ್ನು ಭಾರತದ ಮಾರುಕಟ್ಟೆಗೆ ಸೇರಿಸುವ ದೊಡ್ಡ ಜಾಲವೇ ಇದೆ. ಈ ಜಾಲ ಹೇಗೆ ಕೆಲಸ ಮಾಡುತ್ತದೆ ಎಂಬುದರ ಐಡಿಯಾ ಯಾರಿಗೂ ಇರೋದಿಲ್ಲ. ಇದನ್ನು ತೋರಿಸುವ ಉದ್ದೇಶದಿಂದಲೇ ‘ಟಾಸ್ಕ್ರೀ’ ವೆಬ್ ಸರಣಿ ಬಂದಿದೆ.
ಅರ್ಜುನ್ (ಇಮ್ರಾನ್ ಹಷ್ಮಿ) ಓರ್ವ ಪ್ರಾಮಾಣಿಕ ಕಸ್ಟಮ್ ಅಧಿಕಾರಿ. ಅಲ್ಲಿ ಅವರು ಸುಪರಿಡಂಟ್ ಸ್ಥಾನ ಅಲಂಕರಿಸಿದ್ದಾರೆ. ಅವರ ರೀತಿಯೇ ಕೆಲವು ಪ್ರಾಮಾಣಿಕ ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲ ಅಪ್ರಾಮಾಣಿಕ ಅಧಿಕಾರಿಗಳು ಇದ್ದಾರೆ. ಇವರು ಒಂದು ದೊಡ್ಡ ಚಿನ್ನ ಅಕ್ರಮ ಸಾಗಾಣೆಯ ಜಾಲ ಪತ್ತೆ ಹಚ್ಚುತ್ತಾರೆ. ಅಲ್ಲಿಂದ ತೆರೆದುಕೊಳ್ಳುತ್ತದೆ ಕಥೆ. ಕೆಲವು ಕಡೆಗಳಲ್ಲಿ ಟ್ವಿಸ್ಟ್ಗಳನ್ನು ಇಡಲಾಗಿದೆ. ಕಥೆ ಹಾಗೂ ನಿರೂಪಣೆ ವಿಷಯದಲ್ಲಿ ಇನ್ನಷ್ಟು ಗಟ್ಟಿತನ ಬೇಕಿತ್ತು. ಚಿನ್ನ ಕಳ್ಳ ಸಾಗಣೆ ಹೇಗೆಲ್ಲ ನಡೆಯಬಹುದು ಎಂಬುದನ್ನು ತಿಳಿದುಕೊಳ್ಳಲು ಇದೊಂದು ಒಳ್ಳೆಯ ಸರಣಿ.
ಇದನ್ನೂ ಓದಿ: ಇಮ್ರಾನ್ ಹಶ್ಮಿ ಜೊತೆಗೆ ದಿಶಾ ಪಟಾನಿ ಸಿನಿಮಾ, ತಾಳಲಿದ್ದಾರೆ ಹಾಟ್ ಅವತಾರ
ಇಮ್ರಾನ್ ಹಶ್ಮಿ, ಶರದ್ ಕೇಲ್ಕರ್, ನಂದೀಶ್ ಸಂಧು ಸೇರಿದಂತೆ ಅನೇಕರು ಈ ಸರಣಿಯಲ್ಲಿ ನಟಿಸಿದ್ದಾರೆ. ‘ಎ ವೆಡ್ನೆಸ್ಡೇ’, ‘ಧೋನಿ’ ರೀತಿಯ ಸಿನಿಮಾಗಳನ್ನು ನೀಡಿದ ನೀರಜ್ ಪಾಂಡೆ ಇದನ್ನು ನಿರ್ದೇಶನ ಮಾಡಿದ್ದಾರೆ. ಅವರು ಇತ್ತೀಚೆಗೆ ವೆಬ್ ಸರಣಿ ಲೋಕದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ‘ಸ್ಪೆಷಲ್ ಆಪರೇಷನ್’, ‘ಖಾಕೀ’ ರೀತಿಯ ಸರಣಿಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಈ ಸರಣಿ ಐಂಡಿಬಿಯಲ್ಲಿ 7.1 ರೇಟಿಂಗ್ (ಜನವರಿ 24, ಮುಂಜಾನೆಎ 7 ಗಂಟೆವರೆಗೆ) ಪಡೆದುಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.