ನೆಟ್‌ಫ್ಲಿಕ್ಸ್‌ನಲ್ಲಿ ಈಗ ‘ದಿ ಗ್ರೇಟೆಸ್ಟ್ ರೈವಲರಿ: ಇಂಡಿಯಾ vs ಪಾಕಿಸ್ತಾನ್’ ಡಾಕ್ಯುಮೆಂಟರಿ ಸರಣಿ ಪ್ರಸಾರ ಕಾಣಲು ರೆಡಿ ಆಗುತ್ತಿದೆ. ಫೆಬ್ರವರಿ 7ರಂದು ಈ ಸೀರಿಸ್ ಪ್ರಸಾರ ಕಾಣಲಿದೆ. ಭಾರತ ಹಾಗೂ ಪಾಕಿಸ್ತಾನದ ವೈರತ್ವದ ಕಥೆಯನ್ನು ಈ ಡಾಕ್ಯುಮೆಂಟರಿ ಸೀರಿಸ್ ಹೇಳಲಿದೆ. ಅನೇಕ ಕ್ರಿಕೆಟಿಗರು ಇದರಲ್ಲಿ ಭಾಗಿ ಆಗಿ ಹಳೆಯ ಕಥೆಗಳು, ಘಟನೆಗಳು ಹಾಗೂ ಅಪರೂಪದ ವಿಚಾರಗಳನ್ನು ಹೇಳಿಕೊಳ್ಳಲಿದ್ದಾರೆ.
ಸದ್ಯ ನೆಟ್ಫ್ಲಿಕ್ಸ್ ಕಡೆಯಿಂದ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ‘ಎರಡು ರಾಷ್ಟ್ರ. ಒಂದು ವೈರತ್ವ ಹಾಗೂ 160 ಕೋಟಿ ಆಟಗಾರರು. ಫೆಬ್ರವರಿ 7ರಂದು ನೆಟ್‌ಫ್ಲಿಕ್ಸ್‌ನಲ್ಲಿ ‘ದಿ ಗ್ರೇಟೆಸ್ಟ್ ರೈವಲರಿ: ಇಂಡಿಯಾ vs ಪಾಕಿಸ್ತಾನ್’ ಪ್ರಸಾರ ಕಾಣಲಿದೆ’ ಎಂದು ಬರೆಯಲಾಗಿದೆ.
ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿ ಆಯಿತು ಎಂದರೆ ಅದಕ್ಕಿಂತ ದೊಡ್ಡ ವಿಚಾರ ಬೇರೆನೂ ಇರುವುದಿಲ್ಲ. ಥ್ರಿಲ್ ಕೊಡುವ ಮ್ಯಾಚ್ಗಳು ಕೂಡ ನಡೆದು ಹೋಗಿವೆ. ಹೀಗಾಗಿ, ಈ ರೀತಿಯ ಸರಣಿಯ ಅದ್ಭುತ ಫಿನಿಶ್, ಮರೆಯಲಾರದ ಸಿಕ್ಸ್ ಹಾಗೂ ಮೈದಾನಾದಲ್ಲಿ ನಡೆದ ದೊಡ್ಡ ದೊಡ್ಡ ಡ್ರಾಮಾಗಳು ಈ ಸರಣಿಯಲ್ಲಿ ಇರಲಿದೆ.
ಭಾರತ ಹಾಗೂ ಪಾಕಿಸ್ತಾನದ ಪಂದ್ಯದ ವೇಳೆ ನಡೆದ ಮರೆಯಲಾರದ ಘಟನೆಗಳನ್ನು ಮಾಜಿ ಕ್ರಿಕೆಟಿಗರ್ಗಳಾದ ವಿರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ, ಸುನೀಲ್ ಗವಾಸ್ಕರ್, ರವಿಚಂದ್ರನ್ ಅಶ್ವಿನ್ ಮೊದಲಾದವರು ವಿವರಿಸಲಿದ್ದಾರೆ. ಅದೇ ರೀತಿ ಶೋಯಿಬ್ ಅಖ್ತರ್ ಹಾಗೂ ಇತರ ಪಾಕ್ ಆಟಗಾರರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ನೆಟ್ಫ್ಲಿಕ್ಸ್ ಮಾಡಿದ ಅಚಾತುರ್ಯದಿಂದ ರಿವೀಲ್ ಆಯ್ತು ‘ಸ್ಕ್ವಿಡ್ ಗೇಮ್ 3’ ರಿಲೀಸ್ ದಿನಾಂಕ
‘ಯಾವಾಗಲಾದರೂ ಭಾರತ ಹಾಗೂ ಪಾಕಿಸ್ತಾನ ಆಟ ಆಡಿತು ಎಂದರೆ ಅದು ಯುದ್ಧ ಭೂಮಿ ಇದ್ದಂತೆ. ಎರಡೂ ತಂಡಗಳು ವಿನ್ ಆಗಬೇಕು ಎಂದು ಬಯಸುತ್ತಾರೆ’ ಎಂದಿದ್ದಾರೆ ವೀರೇಂದ್ರ ಸೆಹವಾಗ್. ಫೆಬ್ರವರಿ 7ರಂದು ಸರಣಿ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.