
ಪ್ರಭಾಸ್ (Prabhas), ಭಾರತದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್. ‘ಬಾಹುಬಲಿ’ ಸಿನಿಮಾ ಸರಣಿಯ ಬಳಿಕ ಪ್ರಭಾಸ್ ರೇಂಜ್ ಬಹಳ ಎತ್ತರಕ್ಕೇರಿದೆ. ಯಾವ ಮಟ್ಟಿಗೆಂದರೆ ಅವರ ಕೆಟ್ಟ ಸಿನಿಮಾಗಳು ಸಹ ನೂರಾರು ಕೋಟಿ ಗಳಿಕೆ ಮಾಡುತ್ತವೆ. ಹಾಗೆಂದ ಮಾತ್ರಕ್ಕೆ ಕೆಟ್ಟ ಸಿನಿಮಾಗಳು ಸೂಪರ್ ಹಿಟ್ ಆಗಿಯೇ ತೀರುತ್ತವೆ ಎಂದೇನೂ ಇಲ್ಲ. ಎಷ್ಟೇ ದೊಡ್ಡ ಸೂಪರ್ ಸ್ಟಾರ್ ಆಗಿದ್ದರು ಸಹ ಕೆಟ್ಟ ಸಿನಿಮಾ ನೀಡಿದರೆ ಸೋಲುವುದು ಖಾತ್ರಿ ಎಂಬುದಕ್ಕೆ ಪ್ರಭಾಸ್ ಅವರ ಇತ್ತೀಚೆಗಿನ ಸಿನಿಮಾ ಉದಾಹರಣೆ ಆಗಿದೆ. ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿತ್ತು, ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಕಂಡಿದೆ.
‘ದಿ ರಾಜಾ ಸಾಬ್’ ಸಿನಿಮಾ ಜನವರಿ 09 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಹಾರರ್, ಕಾಮಿಡಿ, ರೊಮ್ಯಾನ್ಸ್ ಒಳಗೊಂಡಿದ್ದ ಈ ಸಿನಿಮಾಕ್ಕೆ ಭಾರಿ ಪ್ರಚಾರವನ್ನು ಪ್ರಭಾಸ್ ಮಾಡಿದ್ದರು. ಆದರೆ ಸಿನಿಮಾ ಬಿಡುಗಡೆ ಆದ ದಿನ ಮತ್ತು ಅದರ ಮರು ದಿನ ಓಡಿದ್ದು ಬಿಟ್ಟರೆ ಮೂರನೇ ದಿನಕ್ಕೆ ಖಾಲಿ ಚಿತ್ರಮಂದಿರಗಳು ಖಾಲಿ ಆಗಲಾರಂಭಿಸಿದವು. ಇದೀಗ ಈ ಸಿನಿಮಾ ಬಿಡುಗಡೆ ಆದ ಒಂದು ತಿಂಗಳಿಗೂ ಮುಂಚೆಯೇ ಒಟಿಟಿಗೆ ಬರುತ್ತಿದೆ. ಪ್ರಭಾಸ್ ಅವರ ಈ ಹಿಂದಿನ ಇನ್ಯಾವ ಸಿನಿಮಾ ಸಹ ಬಿಡುಗಡೆ ಆಗಿ ಇಷ್ಟು ಬೇಗ ಒಟಿಟಿಗೆ ಬಂದಿದ್ದಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ:ಪ್ರಭಾಸ್ ಸಿನಿಮಾನಲ್ಲಿ ನಟಿಸಲಿರುವ ಸಾಯಿ ಪಲ್ಲವಿ ಆದರೆ ಜೋಡಿ ಆಗಿ ಅಲ್ಲ
ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಫೆಬ್ರವರಿ 06 ರಂದು ಒಟಿಟಿಗೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಬೇರೆ ಬೇರೆ ಭಾಷೆಗಳಲ್ಲಿ ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದಾಗಿದೆ. ಸಿನಿಮಾ ಜನವರಿ 09 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು, ಇದೀಗ ಕೇವಲ 28 ದಿನಗಳಲ್ಲೇ ಒಟಿಟಿಗೆ ಬರುತ್ತಿದೆ. ಜಿಯೋ ಹಾಟ್ಸ್ಟಾರ್ ಈಗಾಗಲೇ ‘ದಿ ರಾಜಾ ಸಾಬ್’ ಒಟಿಟಿ ಬಿಡುಗಡೆಯ ಪ್ರಚಾರ ಮಾಡುತ್ತಿದೆ.
Mana time start ayyindhi 🖤🔥
This Feb 6th, step into the trance of the India’s Biggest Superstar on JioHotstar! 🦖#TheRajaSaabOnJioHotstar #TheRajaSaab #JioHotstar pic.twitter.com/LKZGl5vPh3
— JioHotstar Telugu (@JioHotstarTel_) January 30, 2026
‘ದಿ ರಾಜಾ ಸಾಬ್’ ಸಿನಿಮಾವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಸುಮಾರು 400-500 ಕೋಟಿ ಬಜೆಟ್ ಹೂಡಲಾಗಿದೆ. ಆದರೆ ಸಿನಿಮಾ ಬಜೆಟ್ನ ಅರ್ದದಷ್ಟು ಸಹ ಗಳಿಕೆ ಮಾಡಿಲ್ಲ. ಈ ವರೆಗೆ ಸುಮಾರು 250 ಕೋಟಿ ಹಣವನ್ನಷ್ಟೆ ಸಿನಿಮಾ ಗಳಿಸಿದೆ. ಸಿನಿಮಾನಲ್ಲಿ ಪ್ರಭಾಸ್ ಜೊತೆಗೆ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿದ್ಧಿ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಂಜಯ್ ದತ್, ಬೊಮನ್ ಇರಾನಿ ಇನ್ನೂ ಕೆಲವು ಪ್ರತಿಭಾವಂತ ನಟರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಭಾಸ್ ಈ ಸಿನಿಮಾನಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲದರ ಹೊರತಾಗಿಯೂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಕಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ