‘ಕಾಂತಾರ 1’ ಇನ್ನೂ ಹಲವು, ಈ ವಾರ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳು

Updated on: Nov 01, 2025 | 8:51 AM

Ott release this week: ಈ ವಾರ ಒಟಿಟಿಯಲ್ಲಿ ಸಿನಿಮಾ ವೀಕ್ಷಿಸುವವರಿಗೆ ಹಬ್ಬವೋ ಹಬ್ಬ. ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳು ಈ ವಾರ ಒಟಿಟಿಗೆ ಬಂದಿವೆ. ‘ಕಾಂತಾರ: ಚಾಪ್ಟರ್ 1’, ‘ಲೋಕಃ’ ಸೇರಿದಂತೆ ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳು ಒಟಿಟಿಗೆ ಲಗ್ಗೆ ಇಟ್ಟಿವೆ. ಈ ವಾರದಿಂದ ಸ್ಟ್ರೀಮಿಂಗ್ ಆರಂಭಿಸಿದ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ...

1 / 6
ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವಾಗಲೇ ಏಕಾ-ಏಕಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಒಟಿಟಿಗೆ ಬಂದಿದೆ. ಅಕ್ಟೋಬರ್ 2 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಈ ಸಿನಿಮಾ ತಿಂಗಳು ಕಳೆಯುವ ಮುಂಚೆ ಅಂದರೆ ನಿನ್ನೆ (ಅಕ್ಟೋಬರ್ 3) ಒಟಿಟಿ ಬಂದಿದೆ. ಅಮೆಜಾನ್ ಪ್ರೈಂನಲ್ಲಿ ಸಿನಿಮಾ ಅನ್ನು ವೀಕ್ಷಿಸಬಹುದಾಗಿದೆ.

2 / 6
ಕನ್ನಡದಲ್ಲಿ ವೆಬ್ ಸರಣಿಗಳ ಕೊರತೆ ಇದೆ ಎನ್ನುವ ದೂರಿನ ನಡುವೆ ಈಗಾಗಲೇ ‘ಅಯ್ಯನ ಮನೆ’ ಗಮನ ಸೆಳೆದಿದೆ. ಇದೀಗ ‘ಮಾರುಗಲ್ಲು’ ಹೆಸರಿನ ಮತ್ತೊಂದು ಕನ್ನಡ ವೆಬ್ ಸರಣಿ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಅಶ್ವಿನಿ ಪುನೀತ್ ರಾಜ್​​ಕುಮಾರ್ ನಿರ್ಮಿಸಿರುವ ಈ ವೆಬ್ ಸರಣಿ ಜೀ 5 ನಲ್ಲಿ ವೀಕ್ಷಣೆಗೆ ಲಭ್ಯವಿದೆ.

3 / 6
‘ಲೋಕಃ’ ಇತ್ತೀಚೆಗೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆದ ಮಲಯಾಳಂ ಸಿನಿಮಾಗಳು. ಕಲ್ಯಾಣಿ ಪ್ರಿಯದರ್ಶನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಲೇಡಿ ಸೂಪರ್ ಹೀರೋ ಸಿನಿಮಾ. ಸಿನಿಮಾದ ಕತೆ ನಡೆಯುವುದು ಬೆಂಗಳೂರಿನಲ್ಲಿ. ಮಲಯಾಳಂ ಚಿತ್ರರಂಗದಲ್ಲಿ ದಾಖಲೆಗಳನ್ನು ಬರೆದ ಈ ಸಿನಿಮಾವನ್ನು ಹಾಟ್​​ಸ್ಟಾರ್​​​ನಲ್ಲಿ ಹಲವು ಭಾಷೆಗಳಲ್ಲಿ ವೀಕ್ಷಿಸಬಹುದಾಗಿದೆ.

4 / 6
ಧನುಶ್ ನಟಿಸಿ ನಿರ್ದೇಶನವನ್ನೂ ಮಾಡಿರುವ ‘ಇಡ್ಲಿ ಕಡೈ’ ಸಿನಿಮಾ ಅಕ್ಟೋಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ‘ಕಾಂತಾರ’ ಎದುರು ಚಿತ್ರಮಂದಿರಗಳಲ್ಲಿ ಮಂಕಾದರೂ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಒಳ್ಳೆಯ ಫೀಲ್ ಗುಡ್ ಸಿನಿಮಾ ಆಗಿ ಗಮನ ಸೆಳೆದ ಈ ಸಿನಿಮಾವನ್ನು ಈಗ ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

5 / 6
ಟೈಗರ್ ಶ್ರಾಫ್ ಮುಖ್ಯ ಪಾತ್ರದಲ್ಲಿ ನಟಿಸಿ ಕನ್ನಡಿಗ ಹರ್ಷ ನಿರ್ದೇಶನ ಮಾಡಿರುವ ‘ಭಾಗಿ 4’ ಸಿನಿಮಾ ಸೆಪ್ಟೆಂಬರ್ 05 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಆದರೆ ಸಿನಿಮಾ ನಿರೀಕ್ಷಿತ ಪ್ರದರ್ಶನ ಕಂಡಿರಲಿಲ್ಲ. ಇದೀಗ ಸಿನಿಮಾ ಒಟಿಟಿಗೆ ಬಂದಿದ್ದು ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

6 / 6
ಹಾಲಿವುಡ್​ನ ಬಲು ಭಯಾನಕ ಹಾರರ್ ಸಿನಿಮಾ ಸರಣಿಗಳಲ್ಲಿ ಒಂದಾದ ‘ಐಟಿ’ಯ ಹೊಸ ಸಿನಿಮಾ ‘ಐಟಿ: ವೆಲ್​​ಕಮ್ ಟು ಡೆರ್ರಿ’ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಈ ಸಿನಿಮಾ ಜಿಯೋ ಹಾಟ್​​ಸ್ಟಾರ್​​ನಲ್ಲಿ ಈ ವಾರದಿಂದ ವೀಕ್ಷಣೆಗೆ ಲಭ್ಯವಿದೆ.