
ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ಗೂ ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ಗೂ ಅಜಗಜಾಂತರ ವ್ಯತ್ಯಾಸವಿದೆ. ಟಿವಿಯಲ್ಲಾದರೆ ಕೆಲವೊಂದಷ್ಟು ಕಟ್ಟುಪಾಡುಗಳು ಎದುರಾಗುತ್ತವೆ. ಆದರೆ, ಒಟಿಟಿಯಲ್ಲಿ ಈ ರೀತಿಯ ನಿರ್ಬಂಧಗಳಿಲ್ಲ. ಇದರ ಲಾಭ ಪಡೆಯೋಕೆ ಸ್ಪರ್ಧಿಗಳು ಮುಂದಾಗಿದ್ದಾರೆ. ಇತ್ತೀಚೆಗೆ ಹಿಂದಿ ಬಿಗ್ ಬಾಸ್ ಒಟಿಟಿಯಲ್ಲಿ ಸ್ಪರ್ಧಿಗಳು ಪರಸ್ಪರ ಚುಂಬಿಸಿದ ದೃಶ್ಯ ವೈರಲ್ ಆಗಿತ್ತು. ಈಗ ಬಿಗ್ ಬಾಸ್ ಮನೆಯಲ್ಲಿದ್ದ ಕ್ಯಾಮೆರಾ ಎದುರೇ ಲೈಂಗಿಕ ಕ್ರಿಯೆ ನಡೆದಿದೆ ಎಂದು ಸ್ಪರ್ಧಿಯೊಬ್ಬರು ಆರೋಪಿಸಿದ್ದಾರೆ.
ಊರ್ಫಿ ಜಾವೇದ್ ಈ ರೀತಿಯ ಆರೊಪ ಮಾಡಿದವರು. ಅವರು ಈಗಾಗಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಾಗಿದೆ. ಆದರೆ, ಅವರು ದೊಡ್ಮನೆಯಲ್ಲಿದ್ದಾಗ ನೀಡಿದ ಹೇಳಿಕೆಯ ವಿಡಿಯೋ ಒಂದು ಈಗ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಇದನ್ನು ಕೇಳಿದ ವೀಕ್ಷಕರು ನಿಜಕ್ಕೂ ಅಚ್ಚರಿಗೊಂಡಿದ್ದಾರೆ.
‘ಬಿಗ್ ಬಾಸ್ ಒಟಿಟಿ ಮನೆಯಲ್ಲಿ ಸೆ* ನಡೆದಿದೆ. ಆದರೆ ಅದನ್ನು ನಿಮಗೆ ತೋರಿಸಿದ್ದಾರೋ ಇಲ್ಲವೋ ಎಂಬುದು ನಮಗೆ ಗೊತ್ತಿಲ್ಲ. ಆದರೆ, ಕ್ಯಾಮೆರಾ ಎದುರೇ ಅದು ನಡೆದಿದ್ದಂತೂ ನಿಜ’ ಎಂದು ಕ್ಯಾಮೆರಾ ಎದುರು ಬಂದು ಊರ್ಫಿ ಹೇಳಿದ್ದಾರೆ. ಈ ವೇಳೆ ಅಲ್ಲೆ ಇದ್ದ ಮತ್ತೋರ್ವ ಸ್ಪರ್ಧಿ ಪ್ರತೀಜ್ ಸೆಹಜ್ಪಾಲ್ ಶಾಕ್ಗೆ ಒಳಗಾಗಿದ್ದಾರೆ. ಅಲ್ಲದೆ, ಅಚ್ಚರಿಯಿಂದ ‘ಏನು’ ಎಂದು ಕೇಳಿದ್ದಾರೆ.
ಆಗ ಊರ್ಫಿ, ‘ಮನೆಯಲ್ಲಿ ಸೆ* ನಡೆದಿದ್ದನ್ನು ನೀನು ನೋಡಿಲ್ಲವಾ? ಕ್ಯಾಮೆರಾ ಎದುರೇ ಅದು ನಡೆದಿದೆ’ ಎಂದಿದ್ದಾರೆ. ಇದನ್ನು ಕೇಳಿದ ಪ್ರತೀಜ್ ತಲೆಕೆಡಿಸಿಕೊಂಡಿದ್ದಾರೆ. ನನಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಅವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಊರ್ಫಿ ದೊಡ್ಮನೆಯಿಂದ ಹೊರ ಬಂದು ಒಂದು ವಾರದ ನಂತರದಲ್ಲಿ ಈ ಹೇಳಿಕೆ ವೈರಲ್ ಆಗಿರೋದು ಅಚ್ಚರಿಯ ವಿಚಾರ.
ಊರ್ಫಿ ಬಿಗ್ ಬಾಸ್ ಸೇರಿದ ನಂತರದಲ್ಲಿ ಎಲ್ಲರ ಗಮನ ಸೆಳೆಯೋಕೆ ಪ್ರಯತ್ನ ನಡೆಸಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಸ್ನೇಹಿತ ಜೀಶಾನ್ ಖಾನ್ ಜೊತೆ ಅವರ ಆಪ್ತವಾಗಿದ್ದರು. ಆದರೆ ಜೀಶಾನ್ ಅವರಿಂದಲೇ ಊರ್ಫಿಗೆ ಬೆಂಬಲ ಸಿಗಲಿಲ್ಲ. ಹಾಗಾಗಿ ಅವರು ಎಲಿಮಿಮೇಟ್ ಆಗಬೇಕಾಯಿತು. ಬಿಗ್ ಬಾಸ್ನಿಂದ ಹೊರ ಬರುವುದಕ್ಕೂ ಮುನ್ನ ಅವರು ಜೀಶಾನ್ಗೆ ಹಿಗ್ಗಾಮುಗ್ಗ ಬೈಯ್ದು ಕೋಪ ತೀರಿಸಿಕೊಂಡಿದ್ದರು.
ಇದನ್ನೂ ಓದಿ: 17ನೇ ವಯಸ್ಸಿಗೆ ‘ಪೋರ್ನ್ ಸ್ಟಾರ್’ ಎಂಬ ಅಪವಾದ; ಮಾನಸಿಕ ಹಿಂಸೆ ನೀಡಿದ್ದ ತಂದೆ: ಬಿಗ್ಬಾಸ್ ಸ್ಪರ್ಧೆಯ ದಾರುಣ ಕತೆಯಿದು
ಕಸದ ಚೀಲವನ್ನೇ ಕಾಸ್ಟ್ಯೂಮ್ ಮಾಡಿಕೊಂಡಿದ್ದ ನಟಿ ಊರ್ಫಿ ಬಿಗ್ ಬಾಸ್ನಿಂದ ಔಟ್; ನಿಲ್ಲದ ಕಣ್ಣೀರು
Published On - 7:50 am, Sun, 22 August 21