ಸಮಂತಾ ಜೊತೆ ನಟಿಸಬೇಡ ಎಂದಿದ್ದರು: ಶಾಕಿಂಗ್ ವಿಷಯ ಹೇಳಿದ ವರುಣ್ ಧವನ್

ಬಾಲಿವುಡ್ ನಟ ವರುಣ್ ಧವನ್ ಮತ್ತು ಸಮಂತಾ ನಟಿಸಿರುವ ‘ಸಿಟಾಡೆಲ್: ಹನಿ-ಬನಿ’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ವೆಬ್ ಸರಣಿಯ ಪ್ರಚಾರದ ವೇಳೆ ಮಾತನಾಡಿರುವ ವರುಣ್ ಧವನ್, ‘ಸಮಂತಾ ಜೊತೆ ನಟಿಸದಂತೆ ಕೆಲವರು ಎಚ್ಚರಿಕೆ ನೀಡಿದ್ದರು’ ಎಂದಿದ್ದಾರೆ.

ಸಮಂತಾ ಜೊತೆ ನಟಿಸಬೇಡ ಎಂದಿದ್ದರು: ಶಾಕಿಂಗ್ ವಿಷಯ ಹೇಳಿದ ವರುಣ್ ಧವನ್
Follow us
ಮಂಜುನಾಥ ಸಿ.
|

Updated on: Oct 19, 2024 | 4:11 PM

ಸಮಂತಾ ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಬಾಲಿವುಡ್​ನಲ್ಲಿಯೂ ಸಹ ಸಖತ್ ಬೇಡಿಕೆ ಹೊಂದಿದ್ದಾರೆ. ಸಮಂತಾ, ಬಾಲಿವುಡ್​ನ ಸ್ಟಾರ್ ನಟ ವರುಣ್ ಧವನ್ ಜೊತೆ ನಟಿಸಿರುವ ‘ಸಿಟಾಡೆಲ್: ಹನಿ ಬನಿ’ ಕೆಲವೇ ದಿನಗಳಲ್ಲಿ ಅಮೆಜಾನ್​ನಲ್ಲಿ ಬಿಡುಗಡೆ ಆಗಲಿದೆ. ವೆಬ್ ಸರಣಿಯ ಪ್ರಚಾರ ಕಾರ್ಯದಲ್ಲಿ ಸಮಂತಾ ಮತ್ತು ವರುಣ್ ಧವನ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ವರುಣ್ ಧವನ್, ಸಮಂತಾ ಬಗ್ಗೆ ಕೆಲವರು ಋಣಾತ್ಮಕವಾಗಿ ಮಾತನಾಡಿದ್ದ ವಿಷಯ ಹೇಳಿದ್ದಾರೆ.

‘ನಾನು ಸಮಂತಾರ ‘ದಿ ಪ್ಯಾಮಿಲಿ ಮ್ಯಾನ್’ ನೋಡಿ ಖುಷಿ ಪಟ್ಟಿದ್ದೆ. ಸಮಂತಾ ಜೊತೆಗೆ ನಟಿಸಬೇಕು ಎಂದು ನಾನು ಮೊದಲೇ ನಿಶ್ಚಯಿಸಿದ್ದೆ. ‘ಸಿಟಾಡೆಲ್’ ಆಫರ್ ಬಂದಾಗ ಸಹಜವಾಗಿಯೇ ಖುಷಿಯಾಗಿತ್ತು. ಆದರೆ ಆ ಸಮಯದಲ್ಲಿ ಕೆಲವರು ನನ್ನ ಬಳಿ ಸಮಂತಾ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದರು. ಸಮಂತಾ ಜೊತೆ ಕೆಲಸ ಮಾಡಬೇಡ, ಆಕೆಗೆ ಆಟಿಟ್ಯೂಡ್, ಆರೋಗ್ಯ ಸಮಸ್ಯೆ ಇದೆ, ಚಿತ್ರೀಕರಣ ಪೂರ್ಣ ಮಾಡುವುದಿಲ್ಲ. ನಿಮ್ಮ ಜೋಡಿ ಸಹ ಸರಿಹೊಂದುವುದಿಲ್ಲ’ ಎಂದೆಲ್ಲ ಹೇಳಿದ್ದರು’ ಆದರೂ ಸಹ ನಾನು ಸಮಂತಾ ಜೊತೆ ಕೆಲಸ ಮಾಡಿದೆ’ ಎಂದಿದ್ದಾರೆ.

‘ಸಿಟಾಡೆಲ್’ ವೆಬ್ ಸರಣಿಯ ಚಿತ್ರೀಕರಣ ಪ್ರಾರಂಭವಾಗಿ ಬಹಳ ಕಾಲವಾಯಿತು. ಅಸಲಿಗೆ ಸಮಂತಾರ ಅನಾರೋಗ್ಯದಿಂದಲೇ ವೆಬ್ ಸರಣಿಯ ಚಿತ್ರೀಕರಣ ತಡವಾಯ್ತು. ಸಾಕಷ್ಟು ಸಮಯ ಮುಂದೂಡಿದ ಬಳಿಕವಷ್ಟೆ ವೆಬ್ ಸರಣಿಯ ಚಿತ್ರೀಕರಣ ಮುಗಿಸಲಾಯ್ತು. ಚಿತ್ರೀಕರಣ ಪ್ರಾರಂಭವಾದ ಸುಮಾರು ಮೂರು ವರ್ಷಗಳ ಬಳಿಕ ಈಗ ‘ಸಿಟಾಡೆಲ್: ಹನಿ-ಬನಿ’ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ:‘ನಾನು ಒಳ್ಳೆಯ ನಟಿಯಲ್ಲ’: ಎಲ್ಲರ ಎದುರು ಒಪ್ಪಿಕೊಂಡ ಸಮಂತಾ

‘ಸಿಟಾಡೆಲ್’ ಇಂಗ್ಲೀಷ್ ಕಾದಂಬರಿಯನ್ನು ರೋಸ್ ಸಹೋದರರು ಇಂಗ್ಲೀಷ್​ನಲ್ಲಿ ವೆಬ್ ಸರಣಿ ಮಾಡಿದರು. ಅದರಲ್ಲಿ ಪ್ರಿಯಾಂಕಾ ಚೋಪ್ರಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಅದೇ ವೆಬ್ ಸರಣಿ ಇಟಲಿ ಭಾಷೆಯಲ್ಲಿಯೂ ನಿರ್ಮಾಣಗೊಂಡು ಬಿಡುಗಡೆ ಆಯ್ತು. ಇದೀಗ ಅದೇ ವೆಬ್ ಸರಣಿ ಹಿಂದಿಯಲ್ಲಿಯೂ ಬಿಡುಗಡೆ ಆಗುತ್ತದೆ. ಕತೆಯನ್ನು ಹಾಗೆಯೇ ಉಳಿಸಿಕೊಂಡು ಭಾರತದ ನೇಟಿವಿಟಿಗೆ ತಕ್ಕಂತೆ ಕೆಲ ಬದಲಾವಣೆಗಳನ್ನು ನಿರ್ದೇಶಕರಾದ ರಾಜ್ ಆಂಡ್ ಡಿಕೆ ಮಾಡಿಕೊಂಡಿದ್ದಾರೆ. ಈ ವೆಬ್ ಸರಣಿ ನವೆಂಬರ್ 7ರಿಂದ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ