Varun Dhawan: ‘ಕೆಟ್ಟ ಸಿನಿಮಾ ಒಟಿಟಿಯಲ್ಲೂ ಉಳಿಯಲ್ಲ’: ನೇರವಾಗಿ ಮಾತನಾಡಿದ ನಟ ವರುಣ್​ ಧವನ್​

|

Updated on: Jul 18, 2023 | 5:51 PM

Bawaal Movie: ‘ಬವಾಲ್​’ ಸಿನಿಮಾಗೆ ನಿತೀಶ್​ ತಿವಾರಿ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ವರುಣ್​ ಧವನ್​ ಮತ್ತು ಜಾನ್ವಿ ಕಪೂರ್​ ಅವರು ಜೋಡಿಯಾಗಿ ನಟಿಸಿದ್ದಾರೆ.

Varun Dhawan: ‘ಕೆಟ್ಟ ಸಿನಿಮಾ ಒಟಿಟಿಯಲ್ಲೂ ಉಳಿಯಲ್ಲ’: ನೇರವಾಗಿ ಮಾತನಾಡಿದ ನಟ ವರುಣ್​ ಧವನ್​
ಜಾನ್ವಿ ಕಪೂರ್​, ವರುಣ್​ ಧವನ್​
Follow us on

ನಟ ವರುಣ್​ ಧವನ್​ (Varun Dhawan) ಅವರಿಗೆ ಬಾಲಿವುಡ್​ನಲ್ಲಿ ಡಿಮ್ಯಾಂಡ್​ ಇದೆ. ಅನೇಕ ಸಿನಿಮಾಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಅವರ ಹೊಸ ಸಿನಿಮಾ ‘ಬವಾಲ್​’ (Bawaal Movie) ನೇರವಾಗಿ ಚಿತ್ರಮಂದಿರದಲ್ಲಿ ರಿಲೀಸ್​ ಆಗುತ್ತಿಲ್ಲ. ಬದಲಿಗೆ, ಒಟಿಟಿ ಮೂಲಕ ಪ್ರೇಕ್ಷಕರ ಎದುರು ಬರುತ್ತಿದೆ. ಜುಲೈ 21ರಂದು ಈ ಸಿನಿಮಾ ರಿಲೀಸ್​ ಆಗಲಿದೆ. ಅಮೇಜಾನ್​ ಪ್ರೈಂ ವಿಡಿಯೋ (Amazon Prime Video) ಮೂಲಕ ಬಿಡುಗಡೆ ಆಗುತ್ತಿರುವ ‘ಬವಾಲ್​’ ಸಿನಿಮಾದಲ್ಲಿ ವರುಣ್​ ಧವನ್​ ಜೊತೆ ಜಾನ್ವಿ ಕಪೂರ್​ ನಟಿಸಿದ್ದಾರೆ. ಈ ಸಿನಿಮಾ ನೇರವಾಗಿ ಒಟಿಟಿಗೆ ಬರುತ್ತಿರುವ ಬಗ್ಗೆ ವರುಣ್​ ಧವನ್​ ಮಾತನಾಡಿದ್ದಾರೆ. ತಮ್ಮ ಅನಿಸಿಕೆಯನ್ನು ಅವರು ಹಂಚಿಕೊಂಡಿದ್ದಾರೆ.

‘ನಿಮ್ಮ ಸಿನಿಮಾ ತುಂಬ ಚೆನ್ನಾಗಿದೆ ಎಂಬುದನ್ನು ನೀವು ಖಚಿತ ಪಡಿಸಿಕೊಳ್ಳಬೇಕು. ಯಾಕೆಂದೆರೆ ಒಟಿಟಿಯಲ್ಲಿ ಕೆಟ್ಟ ಸಿನಿಮಾಗಳು ಉಳಿಯುವುದಿಲ್ಲ. ಇದು ನನ್ನ ಪ್ರಾಮಾಣಿಕ ಅಭಿಪ್ರಾಯ. ಜನರಿಗೆ ಇಲ್ಲಿ ಆಯ್ಕೆ ಇದೆ’ ಎಂದು ವರುಣ್​ ಧವನ್​ ಹೇಳಿದ್ದಾರೆ. ‘ಬವಾಲ್​’ ಸಿನಿಮಾಗೆ ಜನರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಟ್ರೇಲರ್​ ಮೂಲಕ ಈ ಸಿನಿಮಾ ಗಮನ ಸೆಳೆದಿದೆ.

ಇದನ್ನೂ ಓದಿ: Bawaal Teaser: ಗ್ಯಾಸ್​ ಚೇಂಬರ್​ ಹತ್ಯಾಕಾಂಡದ ಕಥೆ ಹೇಳುತ್ತಾ ‘ಬವಾಲ್​’? ವರುಣ್​ ಧವನ್​-ಜಾನ್ವಿ ಕಪೂರ್​ ಚಿತ್ರದ ಟೀಸರ್​ ವೈರಲ್​

‘ಬವಾಲ್​’ ಸಿನಿಮಾಗೆ ನಿತೇಶ್​ ತಿವಾರಿ ಅವರು ನಿರ್ದೇಶನ ಮಾಡಿದ್ದಾರೆ. ‘ದಂಗಲ್​’, ‘ಚಿಚೋರೆ’ ಮುಂತಾದ ಸಿನಿಮಾಗಳನ್ನು ಮಾಡಿ ಗಮನ ಸೆಳೆದ ಅವರು ಈಗ ‘ಬವಾಲ್​’ ಚಿತ್ರದ ಮೂಲಕ ಒಂದು ಡಿಫರೆಂಟ್​ ಆದ ಲವ್​ ಸ್ಟೋರಿಯನ್ನು ಜನರ ಎದುರು ತರುತ್ತಿದ್ದಾರೆ. ಸ್ಟಾರ್​ ನಿರ್ದೇಶಕನಾದರೂ ಕೂಡ ತಮ್ಮ ಸಿನಿಮಾವನ್ನು ಅವರು ಥಿಯೇಟರ್​ ಬದಲಿಗೆ ಒಟಿಟಿಯಲ್ಲಿ ರಿಲೀಸ್​ ಮಾಡುತ್ತಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಕೆಲವು ಬಾಲಿವುಡ್​ ಸಿನಿಮಾಗಳು ಚಿತ್ರಮಂದಿರದಲ್ಲಿ ಸೋಲು ಕಂಡಿವೆ. ಆ ಹಿನ್ನೆಲೆಯಲ್ಲಿ ಅವರು ಒಟಿಟಿ ಮಾರ್ಗ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Nitesh Tiwari: ‘ರಾಮಾಯಣದ ಚಿತ್ರದಿಂದ ನಾನು ಯಾರಿಗೂ ನೋವುಂಟು ಮಾಡಲ್ಲ’: ಆತ್ಮವಿಶ್ವಾಸದಿಂದ ಹೇಳಿದ ನಿರ್ದೇಶಕ ನಿತೇಶ್​​ ತಿವಾರಿ

ವರುಣ್​ ಧವನ್​ ಅವರ ಸಿನಿಮಾ ಒಟಿಟಿಯಲ್ಲಿ ನೇರವಾಗಿ ಬಿಡುಗಡೆ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಅವರು ನಟಿಸಿದ್ದ ‘ಕೂಲಿ ನಂ.1’ ಸಿನಿಮಾ ಕೂಡ ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಅದು ಕೂಡ ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ಪ್ರಸಾರವಾಗಿತ್ತು. ಸದ್ಯ ವರುಣ್​ ಧವನ್​ ಅವರು ‘ಸಿಟಾಡೆಲ್​’ ವೆಬ್​ ಸರಣಿಯ ಇಂಡಿಯನ್​ ವರ್ಷನ್​ನಲ್ಲಿ ಅಭಿನಯಿಸುತ್ತಿದ್ದಾರೆ. ಅದು ಸಹ ‘ಅಮೇಜಾನ್​ ಪ್ರೈಂ ವಿಡಿಯೋ’ದಲ್ಲೇ ಪ್ರಸಾರ ಆಗಲಿದೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.