ಒಟಿಟಿಗೆ ಕಾಲಿಡೋಕೆ ರೆಡಿ ಆದ ಶಿವರಾಜ್​ಕುಮಾರ್ ನಟನೆಯ ‘ವೇದ’ ಚಿತ್ರ; ಇಲ್ಲಿದೆ ವಿವರ

Vedha On Zee 5: ಶಿವರಾಜ್​ಕುಮಾರ್ ಅವರ ‘ವೇದ’ ಹಲವು ಕಾರಣಗಳಿಂದ ವಿಶೇಷ ಎನಿಸಿಕೊಂಡಿದೆ. ಇದು ಶಿವರಾಜ್​ಕುಮಾರ್ ಅವರ 125ನೇ ಚಿತ್ರ. ಗೀತಾ ಶಿವರಾಜ್​ಕುಮಾರ್ ನಿರ್ಮಾಣದ ಮೊದಲ ಸಿನಿಮಾ.

ಒಟಿಟಿಗೆ ಕಾಲಿಡೋಕೆ ರೆಡಿ ಆದ ಶಿವರಾಜ್​ಕುಮಾರ್ ನಟನೆಯ ‘ವೇದ’ ಚಿತ್ರ; ಇಲ್ಲಿದೆ ವಿವರ
ಶಿವರಾಜ್​ಕುಮಾರ್
Follow us
|

Updated on:Feb 01, 2023 | 1:46 PM

ಶಿವರಾಜ್​ಕುಮಾರ್ (Shivarajkumar) ನಟನೆಯ ‘ವೇದ’ ಸಿನಿಮಾ ಕ್ರಿಸ್​​ಮಸ್​ ಪ್ರಯುಕ್ತ ಕಳೆದ ವರ್ಷ ಡಿಸೆಂಬರ್ 23ರಂದು ಥಿಯೇಟರ್​ಗೆ ಕಾಲಿಟ್ಟಿತು. ಶಿವರಾಜ್​ಕುಮಾರ್ ಅವರು ರಗಡ್ ಪಾತ್ರದಲ್ಲಿ ಗಮನ ಸೆಳೆದರು. ‘ವೇದ’ (Vedha Movie) ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನಕಂಡ ಬೆನ್ನಲ್ಲೇ ಈಗ ಚಿತ್ರ ಒಟಿಟಿಗೆ ಕಾಲಿಡಲು ರೆಡಿ ಆಗಿದೆ. ಚಿತ್ರತಂಡದ ಕಡೆಯಿಂದ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಈ ವಿಚಾರ ಕೇಳಿ ಶಿವರಾಜ್​ಕುಮಾರ್ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇತ್ತೀಚೆಗೆ ಒಟಿಟಿ ವ್ಯಾಪ್ತಿ ಹಿರಿದಾಗುತ್ತಿದೆ. ಅನೇಕರು ಥಿಯೇಟರ್​ಗಿಂತ ಒಟಿಟಿಯಲ್ಲಿ ಚಿತ್ರವನ್ನು ನೋಡಲು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ, ಒಂದು ಸಿನಿಮಾ ರಿಲೀಸ್ ಆದ ನಂತರದಲ್ಲಿ ಅದು ಒಟಿಟಿಗೆ ಯಾವಾಗ ಕಾಲಿಡುತ್ತದೆ ಎನ್ನುವ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಅದೇ ರೀತಿ ‘ವೇದ’ ಸಿನಿಮಾ ಯಾವಾಗ ಒಟಿಟಿ ಹಾದಿ ಹಿಡಿಯಲಿದೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಇತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಫೆಬ್ರವರಿ 10ರಂದು ಈ ಚಿತ್ರ ಜೀ 5 ಮೂಲಕ ಪ್ರಸಾರ ಕಾಣಲಿದೆ.

ಶಿವರಾಜ್​ಕುಮಾರ್ ಅವರ ‘ವೇದ’ ಹಲವು ಕಾರಣಗಳಿಂದ ವಿಶೇಷ ಎನಿಸಿಕೊಂಡಿದೆ. ಇದು ಶಿವರಾಜ್​ಕುಮಾರ್ ಅವರ 125ನೇ ಚಿತ್ರ. ಗೀತಾ ಶಿವರಾಜ್​ಕುಮಾರ್ ನಿರ್ಮಾಣದ ಮೊದಲ ಸಿನಿಮಾ. ಎ. ಹರ್ಷ ಹಾಗೂ ಶಿವರಾಜ್​ಕುಮಾರ್ ಅವರದ್ದು ಹಿಟ್ ಕಾಂಬಿನೇಷನ್. ‘ಭಜರಂಗಿ’ ಅಂತಹ ಹಿಟ್ ಚಿತ್ರಗಳನ್ನು ಈ ಜೋಡಿ ನೀಡಿದೆ. ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್​ನಲ್ಲಿ ಮೂಡಿಬಂದ 4ನೇ ಚಿತ್ರ ಇದಾಗಿದೆ. ಈ ಎಲ್ಲಾ ಕಾರಣದಿಂದಲೂ ಚಿತ್ರಕ್ಕೆ ಸಾಕಷ್ಟು ಹೈಪ್ ಸಿಕ್ಕಿತ್ತು.

ಇದನ್ನೂ ಓದಿ
Image
Vedha Movie: ‘ವೇದ’ ವಿಜಯ ಯಾತ್ರೆಯಲ್ಲಿ ಮಾತಾಡಲೂ ಬಿಡದೇ ಜೈಕಾರ ಹಾಕಿದ ಫ್ಯಾನ್ಸ್​; ಶಿವರಾಜ್​ಕುಮಾರ್​ ಗರಂ
Image
Vedha Movie: ‘ವೇದ’ ಸಿನಿಮಾ ಯಶಸ್ಸಿನ ಯಾತ್ರೆಯಲ್ಲಿ ರಥ ಬಿಟ್ಟು ಕೆಳಗಿಳಿದ ಶಿವರಾಜ್​ಕುಮಾರ್​
Image
Mangaluru: ಕೊರಗಜ್ಜನ ಆದಿಸ್ಥಳಕ್ಕೆ ಕುಟುಂಬದ ಜತೆಗೆ ಭೇಟಿ ನೀಡಿದ ಶಿವಣ್ಣ
Image
‘ಡಾ. ಶಿವರಾಜ್​ಕುಮಾರ್​ ವೃತ್ತ’: ಮಾನ್ಯತಾ ರೆಸಿಡೆನ್ಸಿ ಸರ್ಕಲ್​ಗೆ ಶಿವಣ್ಣನ ಹೆಸರಿಟ್ಟ ನಿವಾಸಿಗಳು

ಶಿವರಾಜ್​ಕುಮಾರ್ ಜೊತೆ ಗಾನವಿ ಲಕ್ಷ್ಮಣ್, ಅದಿತಿ ಸಾಗರ್, ಶ್ವೇತಾ ಚೆಂಗಪ್ಪ ಮೊದಲಾದವರು ‘ವೇದ’ ಚಿತ್ರದಲ್ಲಿ ನಟಿಸಿದ್ದಾರೆ. ಅವರು ತಮ್ಮ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಈಗ ಒಟಿಟಿ ರಿಲೀಸ್ ದಿನಾಂಕ ರಿವೀಲ್ ಆಗಿರುವ ವಿಚಾರದ ಬಗ್ಗೆ ಸಿನಿಪ್ರಿಯರಿಗೆ ಖುಷಿ ಇದೆ.

ಇದನ್ನೂ ಓದಿ: Ghost Movie: ಶಿವರಾಜ್​ಕುಮಾರ್​ ನಟನೆಯ ‘ಘೋಸ್ಟ್​’ ಮೋಷನ್​ ಪೋಸ್ಟರ್​ ರಿಲೀಸ್​; ಹೊಸ ವರ್ಷಕ್ಕೆ ಶ್ರೀನಿ ಗಿಫ್ಟ್​

ಒಟಿಟಿ ರಿಲೀಸ್ ಜತೆಗೆ ಮತ್ತೊಂದು ಖುಷಿ ಸುದ್ದಿ. ‘ವೇದ’ ಸಿನಿಮಾ ತೆಲುಗು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಇದಕ್ಕೆ ಸಿದ್ಧತೆ ನಡೆದಿದೆ. ಚಿತ್ರತಂಡ ಪ್ರಮೋಷನ್ ಕಾರ್ಯ ಆರಂಭಿಸಿದೆ. ನಿರ್ಮಾಪಕ ವಿಆರ್​ ಕೃಷ್ಣ ಅವರು ತೆಲುಗು ಅವತರಣಿಕೆ ಹಂಚಿಕೆ ಹಕ್ಕನ್ನು ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ರಿಲೀಸ್ ದಿನಾಂಕ ಘೋಷಣೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:34 pm, Wed, 1 February 23