ಚಿತ್ರಮಂದಿರದಲ್ಲಿ ಸದ್ದು ಮಾಡಿದ ‘ಆರ್ಟಿಕಲ್ 370’ ಸಿನಿಮಾ ಈಗ ಒಟಿಟಿ (OTT) ಅಂಗಳಕ್ಕೆ ಕಾಲಿಟ್ಟಿದೆ. ಇಂದಿನಿಂದ (ಏಪ್ರಿಲ್ 19) ಈ ಸಿನಿಮಾ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಿದೆ. ನೆಟ್ಫ್ಲಿಕ್ಸ್ (Netflix) ಮೂಲಕ ‘ಆರ್ಟಿಕಲ್ 370’ ಸಿನಿಮಾವನ್ನು ಪ್ರೇಕ್ಷಕರು ವೀಕ್ಷಿಸಬಹುದು. ಪೊಲಿಟಿಕಲ್ ಡ್ರಾಮಾ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ನಟಿ ಯಾಮಿ ಗೌತಮ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ನಟಿ ಪ್ರಿಯಾಮಣಿ ಕೂಡ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಮಂದಿರದಲ್ಲಿ ‘ಆರ್ಟಿಕಲ್ 370’ (Article 370 Movie) ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದವರು ಈಗ ಒಟಿಟಿಯಲ್ಲಿ ನೋಡಿ ಎಂಜಾಯ್ ಮಾಡಬಹುದು.
‘ಆರ್ಟಿಕಲ್ 370’ ಸಿನಿಮಾ ಫೆಬ್ರವರಿ 23ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ಆದಿತ್ಯ ಸುಹಾನ್ ಜಾಂಬಳೆ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ಬಾಕ್ಸ್ ಆಫೀಸ್ನಲ್ಲಿ ಸ್ಲೀಪರ್ ಹಿಟ್ ಆದ ಈ ಸಿನಿಮಾ 50 ದಿನಗಳ ಕಾಲ ಪ್ರದರ್ಶನ ಕಂಡಿದೆ.
Meet Zooni Haksar – She is fierce, sharp, lethal and will let nothing deter her from her mission.
Watch Article 370, now streaming on Netflix! pic.twitter.com/0U6KMhDBc0— Netflix India (@NetflixIndia) April 19, 2024
ಈ ಸಿನಿಮಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪತ್ರವನ್ನು ಅರುಣ್ ಗೋವಿಲ್ ನಿಭಾಯಿಸಿದ್ದಾರೆ. ಈ ಮೊದಲು ‘ರಾಮಾಯಣ’ ಸೀರಿಯಲ್ನಲ್ಲಿ ರಾಮನ ಪಾತ್ರ ಮಾಡಿದ್ದ ಅರುಣ್ ಗೋವಿಲ್ ಅವರಿಗೆ ಈಗ ಮೋದಿ ಪಾತ್ರ ಮಾಡುವ ಅವಕಾಶ ಸಿಕ್ಕಿತು. ಈಗ ಅವರು ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಮೀರತ್ ಲೋಕಸಭಾ ಕ್ಷೇತ್ರದಿಂದ ಅವರಿಗೆ ಟಿಕೆಟ್ ಸಿಕ್ಕಿದೆ.
ಇದನ್ನೂ ಓದಿ: ನಟ ದ್ವಾರಕೀಶ್ ನಿಧನಕ್ಕೆ ನರೇಂದ್ರ ಮೋದಿ ಸಂತಾಪ; ಪ್ರಧಾನಿ ಹೇಳಿದ್ದೇನು?
ನರೇಂದ್ರ ಮೋದಿ ಅವರು ‘ಆರ್ಟಿಕಲ್ 370’ ಸಿನಿಮಾದ ರಿಲೀಸ್ ಸಂದರ್ಭದಲ್ಲಿ ಮಾತನಾಡಿದ್ದರು. ‘ಈ ವಾರ ಆರ್ಟಿಕಲ್ 370 ಸಿನಿಮಾ ಬಿಡುಗಡೆ ಆಗಲಿದೆ. ಜನರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ಈ ಸಿನಿಮಾ ಸಹಕಾರಿ ಆಗಲಿದೆ’ ಎಂದು ಅವರು ಹೇಳಿದ್ದರು. ಚಿತ್ರಮಂದಿರದಲ್ಲಿ ನೋಡಿದ ಪ್ರೇಕ್ಷಕರು ಈ ಸಿನಿಮಾಗೆ ಮೆಚ್ಚುಗೆ ನೀಡಿದರು. ಭಾರತದಲ್ಲಿ ಈ ಸಿನಿಮಾ 82 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಒಟಿಟಿಯಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಕೂಡ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.