AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ, ದರ್ಶನ್​​ಗೂ ಶಾಕ್

ವಿಶೇಷವಾಗಿ ಪ್ರದೋಶ್, ಮಾಫಿ ಸಾಕ್ಷಿಯಾಗಿ ಬದಲಾದ ಬಳಿಕವಂತೂ ಈ ಪ್ರಕರಣ ಸಾಕಷ್ಟು ಕುತೂಹಲ ಕೆರಳಿಸಿದೆ, ದೇಶದ ಗಮನ ಸೆಳೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಅರ್ಜಿಗಳು ಸಲ್ಲಿಕೆ ಆಗುತ್ತಲೇ ಇವೆ. ವಿಚಾರಣೆ ನಡೆಯುತ್ತಲೇ ಇದೆ. ಇದೇ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ 59ನೇ ಸಿಸಿಎಚ್ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ, ದರ್ಶನ್​​ಗೂ ಶಾಕ್
Darshan Pavithra
ಮಂಜುನಾಥ ಸಿ.
|

Updated on: Sep 26, 2026 | 7:26 PM

Share

ರೇಣುಕಾ ಸ್ವಾಮಿ ಕೊಲೆ ಪ್ರಕರಣ ಕಳೆದ ಕೆಲ ವಾರದಿಂದ ಚುರುಕು ಪಡೆದುಕೊಂಡಿದೆ. ವಿಶೇಷವಾಗಿ ಪ್ರದೋಶ್, ಮಾಫಿ ಸಾಕ್ಷಿಯಾಗಿ ಬದಲಾದ ಬಳಿಕವಂತೂ ಈ ಪ್ರಕರಣ ಸಾಕಷ್ಟು ಕುತೂಹಲ ಕೆರಳಿಸಿದೆ, ದೇಶದ ಗಮನ ಸೆಳೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಅರ್ಜಿಗಳು ಸಲ್ಲಿಕೆ ಆಗುತ್ತಲೇ ಇವೆ. ವಿಚಾರಣೆ ನಡೆಯುತ್ತಲೇ ಇದೆ. ಇದೇ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ 59ನೇ ಸಿಸಿಎಚ್ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಕೆಲ ದಿನಗಳ ಹಿಂದೆ ಜಾಮೀನು ಅರ್ಜಿ ಸಲ್ಲಿಸಿದ್ದ ಪವಿತ್ರಾ ಗೌಡ ಪರ ವಕೀಲರು, ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿದಿರುವುದನ್ನು ಪರಿಗಣಿಸುವಂತೆ ಹೇಳಿದ್ದರು. ಅಲ್ಲದೆ ಪವಿತ್ರಾ ಗೌಡ ಅವರು ಸಿಂಗಲ್ ಮದರ್ ಆಗಿದ್ದು, ಮಗಳ ಶಿಕ್ಷಣ, ಆರೋಗ್ಯ, ಮಗಳ ಭವಿಷ್ಯವನ್ನು ಪರಿಗಣಿಸಿ ಮಾನವೀಯ ನೆಲೆಯಲ್ಲಿ ಪವಿತ್ರಾ ಗೌಡಗೆ ಜಾಮೀನು ನೀಡಬೇಕು ಎಂದು ಅವರ ಪರ ವಕೀಲರಾದ ಬಾಲನ್ ವಾದ ಮಂಡಿಸಿದ್ದರು. ಈ ಅರ್ಜಿಯ ತೀರ್ಪು ನಿನ್ನಿಯೇ (ಶುಕ್ರವಾರ) ಬರುವ ನಿರೀಕ್ಷೆ ಇತ್ತು. ಆದರೆ ಶನಿವಾರ ತೀರ್ಪು ಹೊರಬಿದ್ದಿದ್ದು, ಪವಿತ್ರಾ ಅವರ ಜಾಮೀನು ಅರ್ಜಿಯನ್ನು ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ವಜಾಗೊಳಿಸಿದ್ದಾರೆ.

ದರ್ಶನ್​​ ಅರ್ಜಿಯೂ ತಿರಸ್ಕಾರ

ಪ್ರದೋಶ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ಮಾಫಿ ಸಾಕ್ಷಿಯನ್ನು ತಡೆಯಲು ದರ್ಶನ್ ಪರ ವಕೀಲರು ಇನ್ನಿಲ್ಲದ ಯತ್ನ ಮಾಡುತ್ತಿದ್ದಾರೆ. ಈಗಾಗಲೇ ಹೈಕೋರ್ಟ್​​ಗೆ ಅರ್ಜಿ ಹಾಕಿ ಅಲ್ಲಿಯೂ ಹಿನ್ನಡೆ ಅನುಭವಿಸಿದ್ದಾರೆ. 59ನೇ ಸಿಸಿಎಚ್ ನ್ಯಾಯಾಲಯವು ಸೆಪ್ಟೆಂಬರ್ 28ರ ಸೋಮವಾರದಂದು ಪ್ರದೋಶ್ ಮಾಫಿ ಸಾಕ್ಷಿ ದಾಖಲಿಗೆ ಸಮಯ ನಿಗದಿಪಡಿಸಿದೆ. ಆದರೆ ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆಯನ್ನು ಒಂದು ವಾರ ಮುಂದೂಡಬೇಕು ಎಂದು ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಕುರಿತಾದ ತೀರ್ಪು ಸಹ ಇಂದೇ ಹೊರಬಿದ್ದಿದ್ದು, ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.

ತಮಗೆ ಹೈಕೋರ್ಟ್ ಆದೇಶ ಇನ್ನೂ ಸಿಕ್ಕಿಲ್ಲ ಹಾಗೂ ತಾವು ಪ್ರದೋಶ್ ಮಾಫಿ ಸಾಕ್ಷಿ ವಿರುದ್ಧ ಸುಪ್ರೀಂಕೋರ್ಟ್​​ಗೆ ಹೋಗಬೇಕೆಂದಿದ್ದೇವೆ ಹಾಗಾಗಿ ತಮಗೆ ಒಂದು ವಾರ ಕಾಲಾವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲರು ಕೇಳಿದ್ದರು. ಆದರೆ ಅದಕ್ಕೆ ನಕಾರಿಸಿರುವ ನ್ಯಾಯಾಲಯ ಅರ್ಜಿಯನ್ನು ರದ್ದು ಮಾಡಿದ್ದು, ಸೋಮವಾರದಂದು ಪ್ರದೋಶ್ ಮಾಫಿ ಸಾಕ್ಷಿ ದಾಖಲು ಬಹುತೇಕ ಖಾತ್ರಿ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಾಜಿ ಪ್ರಧಾನಿ ದೇವೇಗೌಡ್ರಿಗೆ ವೀರ ಮಾರ್ತಾಂಡ ಚಾವುಂಡರಾಯ ಪ್ರಶಸ್ತಿ ಪ್ರದಾನ
ಮಾಜಿ ಪ್ರಧಾನಿ ದೇವೇಗೌಡ್ರಿಗೆ ವೀರ ಮಾರ್ತಾಂಡ ಚಾವುಂಡರಾಯ ಪ್ರಶಸ್ತಿ ಪ್ರದಾನ
ಲೋಕಭವನದಲ್ಲಿ ಕನ್ಯಾಪೂಜೆ ನೆರವೇರಿಸಿದ ನೂತನ ರಾಜ್ಯಪಾಲೆ ಡಾ. ಸುಧಾ ಯಾದವ್
ಲೋಕಭವನದಲ್ಲಿ ಕನ್ಯಾಪೂಜೆ ನೆರವೇರಿಸಿದ ನೂತನ ರಾಜ್ಯಪಾಲೆ ಡಾ. ಸುಧಾ ಯಾದವ್
ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್:ನೈಸ್ ರಸ್ತೆಯಲ್ಲಿ 4 ಕಿಲೋಮೀಟರ್ ಟ್ರಾಫಿಕ್
ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್:ನೈಸ್ ರಸ್ತೆಯಲ್ಲಿ 4 ಕಿಲೋಮೀಟರ್ ಟ್ರಾಫಿಕ್
ಆಗುಂಬೆ ಘಾಟ್​ ತಿರುವಿನಲ್ಲಿ ​ಬಸ್ ಮೇಲೆ ಹತ್ತಿಸಲು ಆಗದೆ ಚಾಲಕನ ಹರಸಾಹಸ!
ಆಗುಂಬೆ ಘಾಟ್​ ತಿರುವಿನಲ್ಲಿ ​ಬಸ್ ಮೇಲೆ ಹತ್ತಿಸಲು ಆಗದೆ ಚಾಲಕನ ಹರಸಾಹಸ!
ಹವಾಮಾನ ವೈಪರೀತ್ಯದಿಂದ ಮೊಟಕುಗೊಂಡ ವಾಯುಪಡೆಯ ಏರ್ ಶೋ!
ಹವಾಮಾನ ವೈಪರೀತ್ಯದಿಂದ ಮೊಟಕುಗೊಂಡ ವಾಯುಪಡೆಯ ಏರ್ ಶೋ!
ಹಾಸನದಲ್ಲಿ ದಸರಾ ಗೊಂಬೆಗಳಿಗೆ ಎಚ್.ಡಿ. ಕುಮಾರಸ್ವಾಮಿ ಪೂಜೆ
ಹಾಸನದಲ್ಲಿ ದಸರಾ ಗೊಂಬೆಗಳಿಗೆ ಎಚ್.ಡಿ. ಕುಮಾರಸ್ವಾಮಿ ಪೂಜೆ
ಇಂದಿನಿಂದ 2 ದಿನ ಕಂಬಳ ; ಸುಪ್ರೀಂ ಕೋರ್ಟ್ ನ ಮಾರ್ಗಸೂಚಿ ಪಾಲನೆ ಕಡ್ಡಾಯ
ಇಂದಿನಿಂದ 2 ದಿನ ಕಂಬಳ ; ಸುಪ್ರೀಂ ಕೋರ್ಟ್ ನ ಮಾರ್ಗಸೂಚಿ ಪಾಲನೆ ಕಡ್ಡಾಯ
‘ಸ್ಟಾರ್ ಹೀರೋಗಳು ಹೀಗೆ ಮಾಡಿದರೆ ನಿರ್ಮಾಪಕರು ಸರ್ವನಾಶ’: ಕೆ. ಮಂಜು ಬೇಸರ
‘ಸ್ಟಾರ್ ಹೀರೋಗಳು ಹೀಗೆ ಮಾಡಿದರೆ ನಿರ್ಮಾಪಕರು ಸರ್ವನಾಶ’: ಕೆ. ಮಂಜು ಬೇಸರ
ವಾರದ ರಾಶಿ ಭವಿಷ್ಯ: ಅಕ್ಟೋಬರ್ 19 ರಿಂದ 25ರ ವರೆಗಿನ ದ್ವಾದಶ ರಾಶಿಗಳ ಫಲಾಫಲ
ವಾರದ ರಾಶಿ ಭವಿಷ್ಯ: ಅಕ್ಟೋಬರ್ 19 ರಿಂದ 25ರ ವರೆಗಿನ ದ್ವಾದಶ ರಾಶಿಗಳ ಫಲಾಫಲ
‘ನನಗೆ ಜೋಡಿ ಇಲ್ಲ’: ಸುದೀಪ್ ಎದುರು ದೂರು ಹೇಳಿಕೊಂಡ ಬಿಗ್ ಬಾಸ್ ಪ್ರಶಾಂತ್
‘ನನಗೆ ಜೋಡಿ ಇಲ್ಲ’: ಸುದೀಪ್ ಎದುರು ದೂರು ಹೇಳಿಕೊಂಡ ಬಿಗ್ ಬಾಸ್ ಪ್ರಶಾಂತ್