ತಿರುಪತಿ ಲಡ್ಡು ವಿವಾದ ತೆಲುಗು ರಾಜ್ಯ ಮಾತ್ರವಲ್ಲದೆ ಇಡೀ ದೇಶಾದ್ಯಂತ ಚರ್ಚೆ ಆಗುತ್ತಿದೆ. ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗುತ್ತಿದೆ ಎಂಬ ಆರೋಪ ಇದೆ. ಇದನ್ನು ಕೆಲವರು ಗೇಲಿ ಮಾಡಿದ್ದರು. ಈ ವಿಚಾರದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಟೀಕೆ ಮಾಡಿದ್ದಾರೆ. ತಮಿಳು ನಟ ಕಾರ್ತಿ ನಾಯಕನಾಗಿ ನಟಿಸುತ್ತಿರುವ ‘ಮೆಯಿಳಾಗನ್’ ಸಿನಿಮಾದ ಕಾರ್ಯಕ್ರಮದಲ್ಲಿ ಲಡ್ಡು ಬಗ್ಗೆ ಆ್ಯಂಕರ್ ಮಾಡಿದ ಕಾಮೆಂಟ್‌ಗಳಿಗೆ ಕಾರ್ತಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದರು. ಇದಕ್ಕೆ ಪವನ್ ಸಿಟ್ಟಿಗೆದ್ದಿದ್ದರು. ಅವರು ಕಾರ್ತಿಗೆ ಎಚ್ಚರಿಕೆ ಕೂಡ ನೀಡಿದ್ದರು. ಆ ಬಳಿಕ ಕಾರ್ತಿ ಕ್ಷಮೆ ಕೇಳಿದ ಬಳಿಕ ಪವನ್ ಖುಷಿಯಿಂದ ಕಾರ್ತಿ ಸಿನಿಮಾಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದಾರೆ.
ಸಿನಿಮಾ ಪ್ರಚಾರದ ವೇಳೆ ಆ್ಯಂಕರ್ ‘ಲಡ್ಡು ಬೇಕಾ’ ಎಂದು ಕೇಳಿದ್ದರು. ಈ ಬಗ್ಗೆ ಮಾತನಾಡಿದ್ದ ಕಾರ್ತಿ ಅವರು, ‘ಲಡ್ಡು ವಿಷಯ ಈಗ ಬೇಡ, ಅದು ಬಹಳ ಸೆನ್ಸಿಟಿವ್ (ಸೂಕ್ಷ್ಮ) ವಿಷಯ. ಲಡ್ಡು ಈಗ ಬೇಡ’ ಎಂದು ನಗುತ್ತಾ ಹೇಳಿದ್ದರು. ಈ ಬಗ್ಗೆ ಪವನ್ ಕಲ್ಯಾಣ್ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಇದಕ್ಕೆ ಕಾರ್ತಿ ಟ್ವೀಟ್ ಮಾಡಿ ಕ್ಷಮೆ ಯಾಚಿಸಿದ್ದಾರೆ. ‘ಕ್ಷಮಿಸಿ, ಯಾವುದೇ ದುರುದ್ದೇಶದಿಂದ ಹೇಳಿಲ್ಲ. ನನ್ನ ಕಾಮೆಂಟ್ನ ತಪ್ಪಾಗಿ ತೆಗೆದುಕೊಳ್ಳಲಾಗಿದೆ’ ಎಂದು ಕಾರ್ತಿ ಸ್ಪಷ್ಟಪಡಿಸಿದ್ದಾರೆ.
Dear @Karthi_Offl garu,
I sincerely appreciate your kind gesture and swift response, as well as the respect you’ve shown towards our shared traditions. Matters concerning our sacred institutions, like Tirupati and its revered laddus, carry deep emotional weight for millions of…
— Pawan Kalyan (@PawanKalyan) September 24, 2024
ಕಾರ್ತಿ ಟ್ವೀಟ್‌ಗೆ ಪವನ್ ಕಲ್ಯಾಣ್ ಪ್ರತಿಕ್ರಿಯಿಸಿದ್ದಾರೆ. ‘ಆತ್ಮೀಯ ಕಾರ್ತಿ ಅವರೇ ನಿಮ್ಮ ತಕ್ಷಣದ ಪ್ರತಿಕ್ರಿಯೆ ಹಾಗೂ ನಮ್ಮ ಸಂಪ್ರದಾಯಗಳ ಬಗ್ಗೆ ನಿಮಗೆ ಇರುವ ಗೌರವವನ್ನು ನಾನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ. ತಿರುಪತಿಯಂತಹ ನಮ್ಮ ಪವಿತ್ರ ಸ್ಥಳಗಳಿಗೆ ಸಂಬಂಧಿಸಿದ ವಿಷಯಗಳು ಮತ್ತು ಲಡ್ಡುಗಳು ಲಕ್ಷಾಂತರ ಭಕ್ತರ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುತ್ತವೆ’ ಎಂದಿದ್ದಾರೆ ಪವನ್.
ಇದನ್ನೂ ಓದಿ: ಪವನ್ ಕಲ್ಯಾಣ್ ಎಚ್ಚರಿಕೆಗೆ ವಿನಮ್ರ ಪ್ರತಿಕ್ರಿಯೆ ನೀಡಿದ ನಟ ಕಾರ್ತಿ
‘ಇಂತಹ ವಿಷಯಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಅದು ನಮಗೆಲ್ಲರಿಗೂ ಅತ್ಯಗತ್ಯ. ಅಲ್ಲದೇ ಸೂರ್ಯ ಮತ್ತು ಜ್ಯೋತಿಕಾ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಕಾರ್ತಿ ಅವರ ಹೊಸ ನಿಮ್ಮ ಚಿತ್ರ ಯಶಸ್ವಿಯಾಗಲಿ’ ಎಂದು ಪವನ್ ಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:03 am, Wed, 25 September 24