‘ಗೋಪಿಲೋಲ’ ಸಿನಿಮಾಗೆ ಸಾಥ್​ ನೀಡಿದ ಸ್ಯಾಂಡಲ್​ವುಡ್​ ಗಣ್ಯರು; ಅ.4ಕ್ಕೆ ಬಿಡುಗಡೆ

|

Updated on: Sep 24, 2024 | 10:07 PM

ಮಂಜುನಾಥ್​ ಅರಸ್ ಅವರು ‘ಗೋಪಿಲೋಲ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಸ್ಯಾಂಡಲ್​ವುಡ್​ನ ಹಿರಿಯರು ಈ ಚಿತ್ರದ ಟ್ರೇಲರ್​ ಅನಾವರಣ ಮಾಡಿ ಶುಭ ಕೋರಿದ್ದಾರೆ. ನೈಸರ್ಗಿಕ ಕೃಷಿಯ ಬಗ್ಗೆ ಈ ಸಿನಿಮಾದ ಮೂಲಕ ಹೇಳಲಾಗುತ್ತಿದೆ. ಅಕ್ಟೋಬರ್​ 4ರಂದು ಸಿನಿಮಾ ಬಿಡುಗಡೆ ಆಗಲಿದೆ. ಆರ್​. ರವೀಂದ್ರ ಅವರ ನಿರ್ದೇಶನ ಈ ಸಿನಿಮಾಗಿದೆ.

‘ಗೋಪಿಲೋಲ’ ಸಿನಿಮಾಗೆ ಸಾಥ್​ ನೀಡಿದ ಸ್ಯಾಂಡಲ್​ವುಡ್​ ಗಣ್ಯರು; ಅ.4ಕ್ಕೆ ಬಿಡುಗಡೆ
‘ಗೋಪಿಲೋಲ’ ಸಿನಿಮಾ ಟ್ರೇಲರ್​ ಲಾಂಚ್ ಕಾರ್ಯಕ್ರಮ
Follow us on

ಕನ್ನಡ ಚಿತ್ರರಂಗದ ಹಿರಿಯರಾದ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ದೊಡ್ಡಣ್ಣ, ಜೋಸೈಮನ್, ಕೆ. ಮಂಜು, ಎಂ.ಜಿ. ರಾಮಮೂರ್ತಿ, ಕೃಷ್ಣೇಗೌಡ, ಶ್ರೀನಗರ ಕಿಟ್ಟಿ, ಪಿ.ಸಿ. ಶೇಖರ್ ಮತ್ತಿತ್ತರ ಗಣ್ಯರು ಬಂದು ‘ಗೋಪಿಲೋಲ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದರು. ಬಳಿಕ ಚಿತ್ರತಂಡಕ್ಕೆ ಶುಭ ಹಾರೈಸಿದರು. ‘ಸುಕೃತಿ ಚಿತ್ರಾಲಯ’ ಸಂಸ್ಥೆಯ ಮೂಲಕ ಎಸ್​ಆರ್ ಸನತ್ ಕುಮಾರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಮಂಜುನಾಥ್ ಅರಸು ಸಹ-ನಿರ್ಮಾಣ ಮಾಡಿದ್ದಾರೆ. ಆರ್. ರವೀಂದ್ರ ಅವರು ‘ಗೋಪಿಲೋಲ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಈಗಾಗಲೇ ಟೀಸರ್ ಮತ್ತು ಹಾಡುಗಳ‌ನ್ನು ಬಿಡುಗಡೆ ಮಾಡಿದ್ದ ‘ಗೋಪಿಲೋಲ’ ಚಿತ್ರತಂಡ ಈಗ ಟ್ರೇಲರ್​ ಅನಾವರಣ ಮಾಡಿದೆ. ಇತ್ತೀಚೆಗೆ ಟ್ರೇಲರ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತು. ಅಕ್ಟೋಬರ್ 4ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

‘ಎಲ್ಲರಿಗೂ ನಮ್ಮ ಸಿನಿಮಾ ಇಷ್ಟ ಆಗಲಿದೆ ಎನ್ನುವ ನಂಬಿಕೆ ನನಗಿದೆ’ ಎಂದು ನಿರ್ಮಾಪಕ ಎಸ್.ಆರ್. ಸನತ್ ಕುಮಾರ್ ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ‘ಉತ್ತಮ ಅಂಶಗಳು ನಮ್ಮ ಸಿನಿಮಾ ಇವೆ. ನಾನೇ ಕಥೆ ಬರೆದಿದ್ದೇನೆ. ನಮ್ಮದು ಕೃಷಿಕ ಕುಟುಂಬ. ನೈಸರ್ಗಿಕ ಕೃಷಿಗೆ ಸಂಬಂಧಿಸಿದ ಕಥೆಯಿರುವ ಸಿನಿಮಾವನ್ನು ನಿರ್ಮಾಣ ಮಾಡಿದ್ದಕ್ಕೆ ಖುಷಿ ಇದೆ’ ಎಂದು ಅವರು ಹೇಳಿದ್ದಾರೆ.

ಮಿಥುನ್ ಅಶೋಕನ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಒಟ್ಟು 6 ಹಾಡುಗಳು ಇರಲಿವೆ. ‘ಕೃಷಿಯ ಬಗ್ಗೆ ಮಾತ್ರವಲ್ಲದೇ ಒಂದು ಲವ್​ ಸ್ಟೋರಿ ಕೂಡ ಇರುವ ಈ ಚಿತ್ರದ ಮೂಲಕ ಜನರಿಗೆ ಸಂದೇಶವನ್ನೂ ನೀಡುತ್ತಿದ್ದೇವೆ’ ಎಂದು ನಿರ್ದೇಶಕ ಆರ್. ರವೀಂದ್ರ ಹೇಳಿದ್ದಾರೆ. ಸಿನಿಮಾದ ನಾಯಕಿ‌ ನಿಮಿಷಾ, ಹಿರಿಯ ಕಲಾವಿದೆ ಪದ್ಮಾ ವಾಸಂತಿ, ನಟ ಕೆಂಪೇಗೌಡ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಇದನ್ನೂ ಓದಿ: ಸಿನಿಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚನೆಗೆ ವಿರೋಧ: ನೀಡುತ್ತಿರುವ ಸಂದೇಶವೇನು?

ಸಹ-ನಿರ್ಮಾಪಕ ಮಂಜುನಾಥ್ ಅರಸ್ ಅವರೇ ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಇದು ಅವರ ಮೊದಲ ಸಿನಿಮಾ. ‘ಸನತ್ ಕುಮಾರ್ ಒಳ್ಳೆಯ ಕಥೆ ಬರೆದಿದ್ದಾರೆ. ಅದನ್ನು ಅಷ್ಟೇ ಉತ್ತಮವಾಗಿ ರವೀಂದ್ರ ನಿರ್ದೇಶಿಸಿದ್ದಾರೆ. ನನ್ನ ಪಾತ್ರವೂ ಚೆನ್ನಾಗಿದೆ. ಆ್ಯಕ್ಷನ್, ಸಸ್ಪೆನ್ಸ್, ಲವ್ ಮುಂತಾದ ಮನರಂಜನೆಯ ಅಂಶಗಳು ಈ ನಮ್ಮ ಸಿನಿಮಾದಲ್ಲಿ ಇವೆ’ ಎಂದು ಮಂಜುನಾಥ್ ಅರಸ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.