ಅಮ್ಮನಂತೆ ಪೋಸ್ ಕೊಟ್ಟ ಮಗಳು; ರಾಧಿಕಾ-ಆಯ್ರಾಗೆ ನೆಚ್ಚಿನ ವ್ಯಕ್ತಿ ಒಬ್ಬರೇ
ರಾಧಿಕಾ ಪಂಡಿತ್ ಅವರಿಗೆ ಮಕ್ಕಳ ಮೇಲೆ ವಿಶೇಷ ಪ್ರೀತಿ. ಅವರು ಆಗಾಗ ಮಕ್ಕಳ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅವರು ಆಯ್ರಾ ಯಶ್ ಅವರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ರಾಧಿಕಾ ಅವರ ಬಾಲ್ಯದ ಫೋಟೋ ಕೂಡ ಇದೆ.
ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಯ ಮುದ್ದಿನ ಮಗಳು ಆಯ್ರಾಳ ಫೋಟೋಗಳನ್ನು ರಾಧಿಕಾ ಪಂಡಿತ್ ಅವರು ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತವೆ. ಈಗ ರಾಧಿಕಾ ಪಂಡಿತ್ ಅವರು ಒಂದು ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ. ಅಮ್ಮನ ತೋಳಲ್ಲಿ ತಾವಿರುವ ಬಾಲ್ಯದ ಫೋಟೋಗಳನ್ನು ರಾಧಿಕಾ ಪಂಡಿತ್ ಶೇರ್ ಮಾಡಿಕೊಂಡಿದ್ದಾರೆ. ಅದೇ ರೀತಿ ಆಯ್ರಾಳ ಫೋಟೋವನ್ನು ಇದಕ್ಕೆ ಸೇರ್ಪಡೆ ಮಾಡಿದ್ದಾರೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.
ರಾಧಿಕಾ ಪಂಡಿತ್ ಅವರು ಮಗಳನ್ನು ತುಂಬಾನೇ ಹಚ್ಚಿಕೊಂಡಿದ್ದಾರೆ. ಮಗಳ ಫೋಟೋಗಳನ್ನು ಫ್ಯಾನ್ಸ್ಗಾಗಿ ಅವರು ಹಂಚಿಕೊಳ್ಳುತ್ತಾ ಇರುತ್ತಾರೆ. ಮಗಳ ಮೇಲಿನ ಪ್ರೀತಿ ಅವರಿಗೆ ಯಾವಾಗಲೂ ಕಡಿಮೆ ಆಗುವಂಥದ್ದಲ್ಲ. ಈಗ ಅವರು ಹಂಚಿಕೊಂಡಿರುವ ಫೋಟೋ ಸಖತ್ ಗಮನ ಸೆಳೆದಿದೆ. ಚಂದನ್ ಶೆಟ್ಟಿ ಸೇರಿ ಅನೇಕರು ಈ ಫೋಟೋಗೆ ಕಮೆಂಟ್ ಮಾಡಿದ್ದಾರೆ.
ರಾಧಿಕಾ ಪಂಡಿತ್ ತಂದೆ ಕೃಷ್ಣಪ್ರಸಾದ್ ಅವರ ತೋಳಲ್ಲಿ ರಾಧಿಕಾ ಪಂಡಿತ್ ಕುಳಿತು ನಗುತ್ತಿದ್ದಾರೆ. ಅದೇ ರೀತಿ ಆಯ್ರಾ ಕೂಡ ಕೃಷ್ಣಪ್ರಸಾದ್ ತೋಳಲ್ಲಿ ಕುಳಿತು ಸ್ಮೈಲ್ ಮಾಡಿದ್ದಾರೆ. ರಾಧಿಕಾ ಪಂಡಿತ್ ಹಾಗೂ ಆಯ್ರಾ ಮಧ್ಯೆ ಹೋಲಿಕೆ ಇದೆ. ಅವರ ನಗು, ಮುಖದ ಆಕಾರ ಒಂದೇ ರೀತಿ ಇದೆ. ಅನೇಕರು ಫೋಟೋಗೆ ‘ಜೂನಿಯರ್ ರಾಧಿಕಾ ಪಂಡಿತ್’ ಎಂದು ಕಮೆಂಟ್ ಮಾಡಿದ್ದಾರೆ.
‘ನಾನು ಹಾಗೂ ನನ್ನ ಮಿನಿಗೆ ಒಬ್ಬರೇ ಫೇವರಿಟ್ ವ್ಯಕ್ತಿ’ ಎಂದು ರಾಧಿಕಾ ಪಂಡಿತ್ ಕ್ಯಾಪ್ಶನ್ ನೀಡಿದ್ದಾರೆ. ‘ಆಹಾ ಎಂಥ ಅದ್ಭುತ. ಸೇಮ್ ಸೇಮ್.. ಬಟ್ ಡಿಫರೆಂಟ್’ ಎನ್ನುವ ಕಮೆಂಟ್ಗಳು ಕೂಡ ಈ ಫೋಟೋಗೆ ಬಂದಿವೆ.
View this post on Instagram
ಇದನ್ನೂ ಓದಿ: ರಾಧಿಕಾ ಪಂಡಿತ್ ಮನೆಯಲ್ಲಿ ರಕ್ಷಾ ಬಂಧನ ಸೆಲೆಬ್ರೇಷನ್; ಫೋಟೋಸ್ ನೋಡಿ..
ರಾಧಿಕಾ ಪಂಡಿತ್ ಅವರು ನಟನೆಯಿಂದ ದೂರ ಉಳಿದ ಹಲವು ವರ್ಷಗಳು ಕಳೆದು ಹೋಗಿವೆ. ಅವರು ಚಿತ್ರರಂಗಕ್ಕೆ ಮರಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಆದರೆ, ಫ್ಯಾನ್ಸ್ ಆಸೆ ಸದ್ಯಕ್ಕೆ ಈಡೇರೋದು ಅನುಮಾನವೇ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:29 am, Wed, 25 September 24