- Kannada News Photo gallery Radhika Pandit kids Ayra and Yatharv Raksha Bandhan celebration Entertainment news in Kannada
ರಾಧಿಕಾ ಪಂಡಿತ್ ಮನೆಯಲ್ಲಿ ರಕ್ಷಾ ಬಂಧನ ಸೆಲೆಬ್ರೇಷನ್; ಫೋಟೋಸ್ ನೋಡಿ..
ಎಲ್ಲೆಡೆ ರಕ್ಷಾ ಬಂಧನ ಹಬ್ಬವನ್ನು ಖುಷಿಯಿಂದ ಆಚರಿಸಲಾಗಿದೆ. ಸೆಲೆಬ್ರಿಟಿಗಳು ಕೂಡ ಈ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ಸಹೋದರರಿಗೆ ರಾಖಿ ಕಟ್ಟಿ, ಸಿಹಿ ತಿನಿಸಲಾಗಿದೆ. ರಾಧಿಕಾ ಪಂಡಿತ್ ಅವರ ಮನೆಯಲ್ಲಿ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ರಾಖಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಸಹೋದರನನ್ನು ರಾಧಿಕಾ ಮಿಸ್ ಮಾಡಿಕೊಂಡಿದ್ದಾರೆ.
Updated on: Aug 19, 2024 | 10:04 PM

ನಟಿ ರಾಧಿಕಾ ಪಂಡಿತ್ ಅವರು ಅಭಿಮಾನಿಗಳಿಗೆ ರಕ್ಷಾ ಬಂಧನ ಹಬ್ಬದ ಶುಭಾಶಯ ತಿಳಿಸಿದ್ದಾರೆ. ತಮ್ಮ ಮನೆಯಲ್ಲಿ ಈ ವರ್ಷ ರಾಖಿ ಹಬ್ಬದ ಸೆಲೆಬ್ರೇಷನ್ ಹೇಗಿತ್ತು ಎಂಬುದನ್ನು ತಿಳಿಸಲು ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ರಾಖಿ ಹಬ್ಬ ಆಚರಿಸಿದ್ದಾರೆ. ಇಬ್ಬರೂ ತುಂಬ ಕ್ಯೂಟ್ ಆಗಿ ಕಾಣಿಸಿಕೊಂಡ ಈ ಫೋಟೋಗಳಿಗೆ ಅಭಿಮಾನಿಗಳು ಲೈಕ್ ನೀಡಿದ್ದಾರೆ. ಫೋಟೋಸ್ ವೈರಲ್ ಆಗಿವೆ.

ಸಹೋದರ ಯಥರ್ವ್ಗೆ ಆಯ್ರಾ ರಾಖಿ ಕಟ್ಟಿದ್ದಾಳೆ. ಮುದ್ದಾದ ಮಕ್ಕಳ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ರಾಧಿಕಾ ಪಂಡಿತ್ ಅವರು ಎಲ್ಲರಿಗೂ ರಾಖಿ ಹಬ್ಬಕ್ಕೆ ವಿಶ್ ಮಾಡಿದ್ದಾರೆ.

ವಿದೇಶದಲ್ಲಿ ಇರುವ ಸಹೋದರ ಗೌರಂಗ್ ಪಂಡಿತ್ ಅವರನ್ನು ರಾಧಿಕಾ ಮಿಸ್ ಮಾಡಿಕೊಂಡಿದ್ದಾರೆ. ಸಹೋದರನ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಅವರು ಇಲ್ಲಿಂದಲೇ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ರಾಧಿಕಾ ಪಂಡಿತ್ ಅವರು ನಟನೆಯಿಂದ ಸದ್ಯಕ್ಕೆ ದೂರ ಉಳಿದುಕೊಂಡಿದ್ದಾರೆ. ಆದರೆ ಅವರು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಆಗಾಗ ಅವರು ಹೊಸ ಫೋಟೋಸ್ ಹಂಚಿಕೊಳ್ಳುತ್ತಾರೆ.



















