ಕೋರ್ಟ್‌ಗೆ ಬಂದ ದರ್ಶನ್ ಪರ ವಕೀಲರು; ನಡೆದ ಚರ್ಚೆಗಳೇನು?
ನಟ ದರ್ಶನ್ಗೆ ಹೊಸ ಸಂಕಷ್ಟ ಶುರುವಾಗಿದೆ. ಇಷ್ಟು ದಿನಗಳ ಕಾಲ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ತೀವ್ರ ವಿಚಾರಣೆ ಎದುರಿಸಿದ್ದಾರೆ. ಬಳ್ಳಾರಿ ಕೇಂದ್ರ ಕಾರಗೃಹಕ್ಕೆ ದರ್ಶನ್ ಪರ ವಕೀಲರು ಬಂದಿದ್ದಾರೆ. ಈ ವೇಳೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಲಾಗಿದೆ.
ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 27ಕ್ಕೆ ಮುಂದೂಡಲ್ಪಟ್ಟಿದೆ. ಅವರು ಶತಾಯ-ಗತಾಯ ಜಾಮೀನು ಪಡೆಯಲು ಪ್ರಯತ್ನ ಮಾಡುತ್ತಾ ಇದ್ದಾರೆ. ಈಗ ಅರ್ಜಿ ವಿಚಾರಣೆ ಮುಂದಕ್ಕೆ ಹೋದ ಬೆನ್ನಲ್ಲೇ ದರ್ಶನ್ ಇರುವ ಬಳ್ಳಾರಿ ಕೇಂದ್ರ ಕಾರಗೃಹಕ್ಕೆ ಅವರ ಪರ ವಕೀಲರು ಬಂದಿದ್ದಾರೆ. ಈ ವೇಳೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಲಾಗಿದೆ.
ಜೈಲು ಸಂದರ್ಶಕರ ಕೊಠಡಿಗೆ ಹೈ ಸೆಕ್ಯೂರಿಟಿ ಸೆಲ್ನಿಂದ ದರ್ಶನ್ ಬಂದಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಭೇಟಿ ನಡೆದಿದೆ. ಮೂವರು ವಕೀಲರೊಂದಿಗೆ ದರ್ಶನ್ ಕೇಸ್ ಬಗ್ಗೆ ಚರ್ಚೆ ನಡೆಸಿದ್ದಾರೆ. ಕೋರ್ಟ್ನಲ್ಲಿ ನಡೆದ ವಿಚಾರಣೆಯ ಕುರಿತು ವಕೀಲರ ಜೊತೆ ಅವರು ಚರ್ಚೆ ಮಾಡಿದ್ದಾರೆ.
ಪ್ರಕರಣದ ಸಾಕ್ಷ್ಯ, ಕಾನೂನು ಹೋರಾಟದ ಕುರಿತು ದರ್ಶನ್ ಅವರು ಚರ್ಚೆ ನಡೆಸುತ್ತಾರೆ ಎನ್ನಲಾಗಿದೆ. ಚರ್ಚೆ ಬಳಿಕ ಕೆಲವು ಅರ್ಜಿಗಳಿಗೂ ಸಹಿ ಪಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲ ಸವಲತ್ತು ನೀಡಲು ಕೋರ್ಟ್‌ಗೆ ದರ್ಶನ್ ಮನವಿ ಮಾಡಿದ್ದರು. ಸದ್ಯ ಜೈಲಧಿಕಾರಿ ಅನುಮತಿ ಪಡೆದುಕೊಳ್ಳಿ ಎಂದು ನ್ಯಾಯಾಲಯ ಹೇಳಿದೆ. ಆದರೆ, ದರ್ಶನ್ ಮನವಿಯನ್ನು ಜೈಲಧಿಕಾರಿಗಳು ತಿರಸ್ಕರಿಸಿದ್ದಾರೆ. ಈ ಬಗ್ಗೆ ದರ್ಶನ ಪರ ವಕೀಲರು ಮಾಹಿತಿ ಪಡೆದಿದ್ದಾರೆ.
ಇದನ್ನೂ ಓದಿ: ದರ್ಶನ್ ಮನೆ ಮೇಲೆ ನಡೆಯಲಿದೆ ಐಟಿ ದಾಳಿ; ದಾಸನಿಗೆ ಹೊಸ ಕೇಸ್ ತಲೆಬಿಸಿ ಶುರು
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಜೈಲು ಸೇರಿ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಇದ್ದ ಅವರು ಸದ್ಯ ಬಳ್ಳಾರಿ ಶಿಫ್ಟ್ ಆಗಿದ್ದಾರೆ. ಅಲ್ಲಿ ಅವರಿಗೆ ಸಾಕಷ್ಟು ತೊಂದರೆಗಳು ಎದುರಾಗುತ್ತಿವೆ. ಬೆನ್ನು ನೋವು ಇರುವುದರಿಂದ ದರ್ಶನ್ ತೊಂದರೆ ಅನುಭವಿಸುತ್ತಾ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.