ನಟ ಪವನ್ ಕಲ್ಯಾಣ್ (Pawan Kalyan) ಸಿನಿಮಾ (Cinema) ಮತ್ತು ರಾಜಕೀಯ ಎರಡನ್ನು ತೂಗಿಸಿಕೊಂಡು ಹೋಗುತ್ತಿದ್ದಾರೆ. ಆಂಧ್ರ ವಿಧಾನಸಭೆ ಚುನಾವಣೆಗೆ ತಯಾರಾಗುತ್ತಿರುವ ಪವನ್ ಕಲ್ಯಾಣ್, ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದು ತಮ್ಮ ಈ ರಾಜಕೀಯ ಪ್ರವಾಸಕ್ಕೆ ವಾರಾಹಿ ಯಾತ್ರೆ ಎಂದು ಹೆಸರಿಟ್ಟಿದ್ದಾರೆ. ಯಾತ್ರೆಯ ಸಮಯ ಹಲವು ಬಹಿರಂಗ ಸಭೆಗಳನ್ನುದ್ದೇಶಿಸಿ ಮಾತನಾಡಿರುವ ಪವನ್, ತೆಲುಗಿನ ಇತರ ಸ್ಟಾರ್ ನಟರ ಅಭಿಮಾನಿಗಳನ್ನು ತಮ್ಮತ್ತ ಓಲೈಸಿಕೊಳ್ಳುವ ಯತ್ನವನ್ನೂ ಮಾಡುತ್ತಿದ್ದಾರೆ. ಇದರ ನಡುವೆ ತಾವೇ ನಟಿಸಿರುವ ‘ಬ್ರೋ’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ನಲ್ಲಿ ಭಾಗಿಯಾಗಿದ್ದ ಪವನ್, ನೆರೆಯ ತಮಿಳು ಚಿತ್ರರಂಗಕ್ಕೆ ಮನವಿಯೊಂದನ್ನು ಮಾಡಿದ್ದಾರೆ.
ಎಲ್ಲರೂ ಒಟ್ಟಾಗಿ, ಒಗ್ಗಟ್ಟಾಗಿ ಸಾಗಬೇಕು ಎಂದು ಸಾರುತ್ತಲೇ ಬಂದಿರುವ ಪವನ್ ಕಲ್ಯಾಣ್, ‘ಬ್ರೋ’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ನಲ್ಲಿ ಮಾತನಾಡಿ, ”ನೆರೆಯ ತಮಿಳು ಚಿತ್ರರಂಗ ಹಲವು ಅತ್ಯುತ್ತಮ ಸಿನಿಮಾಗಳನ್ನು ನೀಡಿದೆ. ಆದರೆ ಇತ್ತೀಚೆಗೆ ಅವರು ತಮ್ಮ ಚಿತ್ರರಂಗಕ್ಕೆ ಗಡಿಗಳನ್ನು ಹಾಕಿಕೊಳ್ಳುವ ಬಗ್ಗೆ ಚರ್ಚಿಸುತ್ತಿದ್ದಾರೆ. ಬೇರೆ ಕಲಾವಿದರನ್ನು ತಮ್ಮ ಸಿನಿಮಾಗಳಿಗೆ ಹಾಕಿಕೊಳ್ಳಬಾರದು ಎಂಬ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ ಅದು ಸರಿಯಲ್ಲ ಎನಿಸುತ್ತದೆ” ಅಂದಿದ್ದಾರೆ.
”ಅದೇ ಸಂದರ್ಭದಲ್ಲಿ ತೆಲುಗು ಚಿತ್ರರಂಗ ಹೊರಗಿನ ಪ್ರತಿಭೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಉತ್ತಮವಾಗಿ ಕತೆ ಹೇಳುತ್ತಿದೆ. ಬೇರೆ ಬೇರೆ ಭಾಷೆಯ, ದೇಶದ ತಂತ್ರಜ್ಞರನ್ನು ತೆಲುಗು ಚಿತ್ರರಂಗ ಸ್ವಾಗತಿಸುತ್ತಿದೆ. ಹಾಗಾಗಿ ತಮಿಳು ಚಿತ್ರರಂಗ ಸಹ ಹೊರ ರಾಜ್ಯಗಳ ಪ್ರತಿಭೆಗಳಿಗೆ ಅವಕಾಶ ನೀಡಿದರೆ ಅದೂ ಸಹ ‘ಆರ್ಆರ್ಆರ್’ ಮಾದರಿಯಲ್ಲಿ ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಿಸಬಹುದಾಗಿದೆ” ಎಂದಿದ್ದಾರೆ.
ಇದನ್ನೂ ಓದಿ:Pawan Kalyan: ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಸಿಹಿ ಸುದ್ದಿ; ‘ಬ್ರೋ’ ಸಿನಿಮಾ ಟಿಕೆಟ್ಗೆ ಆಫರ್
ಕಾರ್ಯಕ್ರಮದಲ್ಲಿ ತೆಲುಗು ಚಿತ್ರರಂಗದ ಬಗ್ಗೆ ವಿಶೇಷವಾಗಿ ರಾಜಮೌಳಿ ಅವರ ಬಗ್ಗೆ ಹೆಮ್ಮೆಯಿಂದ ಪವನ್ ಕಲ್ಯಾಣ್ ಮಾತನಾಡಿದ್ದು, ”ರಾಜಮೌಳಿ ಅಂಥಹವರು ಆರ್ಆರ್ಆರ್ ಸಿನಿಮಾ ಮೂಲಕ ತೆಲುಗು ಚಿತ್ರರಂಗವನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಅವರ ಆರ್ಆರ್ಆರ್ ಸಿನಿಮಾದಂತೆ ಮಹೇಶ್ ಬಾಬು ಜೊತೆಗೆ ಮಾಡುತ್ತಿರುವ ಸಿನಿಮಾ ಸಹ ಬಹಳ ದೊಡ್ಡ ಯಶಸ್ಸನ್ನು ಗಳಿಸಬೇಕೆಂದು ಹಾರೈಸುತ್ತೇನೆ” ಎಂದಿದ್ದಾರೆ.
ಪವನ್ ಕಲ್ಯಾಣ್ ತಮ್ಮ ಸಹೋದರಿಯ ಪುತ್ರ ಸಾಯಿ ಧರಮ್ ತೇಜ್ ಜೊತೆಗೆ ‘ಬ್ರೋ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಪವನ್, ಮಾಡರ್ನ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು ಸಿನಿಮಾದ ರೀಮೇಕ್ ಈ ಸಿನಿಮಾ ಆಗಿದ್ದು, ಮೂಲ ಸಿನಿಮಾ ನಿರ್ದೇಶನ ಮಾಡಿದ್ದ ಸಮುದ್ರಕಿಣಿ ಅವರೇ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾ ಜುಲೈ 28ಕ್ಕೆ ತೆರೆಗೆ ಬರಲಿದ್ದು, ಈಗಾಗಲೇ ಟ್ರೈಲರ್ ಬಿಡುಗಡೆ ಆಗಿ ಸದ್ದು ಮಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:49 pm, Wed, 26 July 23