
‘ಪವನ್ ಕಲ್ಯಾಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಫೇಕ್’- ಹೀಗೆಂದು ನಾವು ಹೇಳುತ್ತಿಲ್ಲ. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೀಗೊಂದು ಆರೋಪ ಮಾಡಿದ್ದಾರೆ. ಜನಸೇನಾ ಪಕ್ಷದ ಮುಖ್ಯಸ್ಥ ಹಾಗೂ ಟಾಲಿವುಡ್ ನಟ ಪವನ್ ಕಲ್ಯಾಣ್ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವಿಚಾರದ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ಸರಣಿ ಟ್ವೀಟ್ ಮಾಡಿದ್ದಾರೆ.
ಪವನ್ ಕಲ್ಯಾಣ್ ಅವರ ಜತೆ ಇದ್ದ ಸಿಬ್ಬಂದಿಗೆ ಕೊವಿಡ್ ಪಾಸಿಟಿವ್ ವರದಿ ಬಂದಿತ್ತು. ನಂತರ ಪರೀಕ್ಷೆ ಮಾಡಿದಾಗ ಪವನ್ ಕಲ್ಯಾಣ್ಗೂ ಕೊರೊನಾ ಪಾಸಿಟಿವ್ ಬಂದು ಆಸ್ಪತ್ರೆಗೆ ಶಿಫ್ಟ್ ಆಗಿದ್ದರು. ಅವರು ಆಸ್ಪತ್ರೆಯಲ್ಲಿರುವ ಫೋಟೋ ಒಂದು ಸಾಮಾಜಿಕ ಜಾಲಯಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ರಾಮ್ ಗೋಪಾಲ್ ಟ್ವೀಟ್ ಮಾಡಿದ್ದಾರೆ.
ಬರಿಗಣ್ಣಿನಿಂದ ಕೂಡ ನೋಡಲಾಗದ ಒಂದು ಸಣ್ಣ ವೈರಸ್ ಪವನ್ ಕಲ್ಯಾಣ್ ಅವರನ್ನು ಇಂತಹ ಅಸಹಾಯಕ ಪರಿಸ್ಥಿತಿಗೆ ತಳ್ಳಿ ಹಾಕಿದೆ. ಇದರಲ್ಲಿ ಹೀರೋ ಎನ್ನುವ ಶಬ್ದ ಎಲ್ಲಾದರೂ ಇದೆಯಾ ಎಂದು ಕೇಳಿದ್ದಾರೆ. ಈ ಟ್ವೀಟ್ ನೋಡಿದ ಬೆನ್ನಲ್ಲೇ ಪವನ್ ಕಲ್ಯಾಣ್ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಆದರೆ, ಈ ಬಗ್ಗೆ ರಾಮ್ ಗೋಪಾಲ್ ವರ್ಮಾ ತಲೆಕೆಡಿಸಿಕೊಂಡಿಲ್ಲ.
ಮತ್ತೊಂದು ಟ್ವೀಟ್ ಮಾಡಿರುವ ಆರ್ಜಿವಿ, ಪವನ್ಗೆ ಬಂದಿರೋದು ಕೊವಿಡ್ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ವಕೀಲ್ ಸಾಬ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಮಾಡಿಲ್ಲ. ಇದಕ್ಕಾಗಿ ಪವನ್ ಕಲ್ಯಾಣ ಈ ಸ್ಥಿತಿ ತಲುಪಿದ್ದಾರೆ. ಅಭಿಮಾನಿಗಳೇ ಬನ್ನಿ. ನಿಮ್ಮ ಲೈಫ್ ರಿಸ್ಕ್ ಮಾಡಿಕೊಂಡು ಸಿನಿಮಾ ವೀಕ್ಷಿಸಿ. ಪವನ್ ಜೇಬನ್ನು ತುಂಬಿಸಿ ಎಂದಿದ್ದಾರೆ. ಮುಂದುವರಿದು ಪವನ್ ಟ್ರೀಟ್ಮೆಂಟ್ ಪಡೆಯುತ್ತಿರುವುದು ನಕಲಿ ಫೋಟೋ ಎಂದು ಜರಿದಿದ್ದಾರೆ.
ಇದನ್ನೂ ಓದಿ: Coronavirus News Live Updates: ಕೊರೊನಾ ಚಿಕಿತ್ಸೆಗೆ ಬಳಸುವ ರೆಮ್ಡೆಸಿವಿರ್ ಔಷಧಿಯ ದರ ಕಡಿತ
Published On - 8:19 pm, Sat, 17 April 21