ತಡವಾಗಿ ಬಂದರೂ ಧೂಳೆಬ್ಬಿಸಿದ ‘ಓಜಿ’ ಟ್ರೇಲರ್: ಪವನ್ ಕಲ್ಯಾಣ್ ಆ್ಯಕ್ಷನ್ ಅಬ್ಬರ

ಕಾರಣಾಂತರಗಳಿಂದ ‘ಓಜಿ’ ಸಿನಿಮಾದ ಟ್ರೇಲರ್ ರಿಲೀಸ್ ತಡವಾಗುತ್ತಲೇ ಇತ್ತು. ಆದರೆ ಈಗ ಬಿಡುಗಡೆ ಆಗಿದೆ. ಟ್ರೇಲರ್ ನೋಡಿದ ಬಳಿಕ ನಟ ಪವನ್ ಕಲ್ಯಾಣ್ ಫ್ಯಾನ್ಸ್ ಬಳಗದಲ್ಲಿ ಸಿನಿಮಾ ಮೇಲಿನ ಹೈಪ್ ಹೆಚ್ಚಾಗಿದೆ. ಸೆಪ್ಟೆಂಬರ್ 25ರಂದು ಅದ್ದೂರಿಯಾಗಿ ‘ಓಜಿ’ ಸಿನಿಮಾ ತೆರೆಕಾಣಲಿದೆ. ಈಗ ಎಲ್ಲೆಡೆ ಟ್ರೇಲರ್ ಧೂಳೆಬ್ಬಿಸುತ್ತಿದೆ.

ತಡವಾಗಿ ಬಂದರೂ ಧೂಳೆಬ್ಬಿಸಿದ ‘ಓಜಿ’ ಟ್ರೇಲರ್: ಪವನ್ ಕಲ್ಯಾಣ್ ಆ್ಯಕ್ಷನ್ ಅಬ್ಬರ
Pawan Kalyan

Updated on: Sep 22, 2025 | 6:30 PM

ಟಾಲಿವುಡ್ ನಟ, ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅಭಿನಯದ ‘ಓಜಿ’ ಸಿನಿಮಾ (OG Movie) ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ಆದರೆ ಟ್ರೇಲರ್ ಬಿಡುಗಡೆ ವಿಚಾರದಲ್ಲಿ ಚಿತ್ರತಂಡದಿಂದ ನಿರಾಸೆ ಉಂಟಾಗಿತ್ತು. ಅಂದುಕೊಂಡ ಸಮಯದಲ್ಲಿ ‘ಓಜಿ’ ಟ್ರೇಲರ್ (OG Movie Trailer) ಬಿಡುಗಡೆ ಆಗಲಿಲ್ಲ. ಕಾದು ಕಾದು ಸುಸ್ತಾದ ಅಭಿಮಾನಿಗಳು ನಿರಾಸೆಗೊಂಡಿದ್ದರು. ಅಂತೂ ಇಂತೂ ಎಲ್ಲ ವಿಘ್ನಗಳನ್ನು ಪರಿಹರಿಸಿಕೊಂಡು ಇಂದು (ಸೆಪ್ಟೆಂಬರ್ 22) ಮಧ್ಯಾಹ್ನ ‘ಓಜಿ’ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿದ ಪವನ್ ಕಲ್ಯಾಣ್ (Pawan Kalyan) ಅಭಿಮಾನಿಗಳಿಗೆ ಖುಷಿ ಆಗಿದೆ.

ಪವನ್ ಕಲ್ಯಾಣ್ ಅವರು ‘ಓಜಿ’ ಸಿನಿಮಾದಲ್ಲಿ ಓಜಸ್ ಗಂಭೀರ ಎಂಬ ಪಾತ್ರವನ್ನು ಮಾಡಿದ್ದಾರೆ. ‘ದೇ ಕಾಲ್ ಹಿಮ್ ಓಜಿ’ ಎಂಬುದು ಈ ಸಿನಿಮಾದ ಪೂರ್ಣ ಶೀರ್ಷಿಕೆ. ಸುಜೀತ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಡಿವಿವಿ ದಾನಯ್ಯ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ‘ಓಜಿ’ ಸಿನಿಮಾದ ಟ್ರೇಲರ್​​ನಲ್ಲಿ ಅದ್ದೂರಿತನ ಕಾಣಿಸಿದೆ.

‘ಓಜಿ’ ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಬಾಲಿವುಡ್ ನಟ ಇಮ್ರಾನ್ ಹಷ್ಮಿ ಅವರು ವಿಲನ್ ಆಗಿ ನಟಿಸಿದ್ದಾರೆ. ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್, ಪ್ರಕಾಶ್ ರಾಜ್, ರಾವ್ ರಮೇಶ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಥಮನ್ ಎಸ್. ಅವರು ಸಂಗೀತ ನೀಡಿದ್ದಾರೆ. ಸೆಪ್ಟೆಂಬರ್ 25ರಂದು ‘ಓಜಿ’ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗಲಿದೆ.

‘ಓಜಿ’ ಸಿನಿಮಾ ಟ್ರೇಲರ್:

ಬಿಡುಗಡೆ ಆಗುತ್ತಿದ್ದಂತೆಯೇ ‘ಓಜಿ’ ಟ್ರೇಲರ್ ಧೂಳೆಬ್ಬಿಸಲು ಆರಂಭಿಸಿದೆ. ಕೆಲವೇ ಗಂಟೆಗಳಲ್ಲಿ 30 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಗ್ಯಾಂಗ್ ವಾರ್ ಕಹಾನಿ ಈ ಸಿನಿಮಾದಲ್ಲಿ ಇರಲಿದೆ. ಪವನ್ ಕುಮಾರ್ ಅವರು ಆ್ಯಕ್ಷನ್ ಹೀರೋ ಅವತಾರ ತಾಳಿದ್ದಾರೆ. ‘ಓಜಿ’ ನೋಡಲು ಚಿತ್ರಮಂದಿರಕ್ಕೆ ಹೋಗುವ ಪ್ರೇಕ್ಷಕರಿಗೆ ಆ್ಯಕ್ಷನ್ ಟ್ರೀಟ್ ಸಿಗಲಿದೆ. ಟ್ರೇಲರ್​​ನಲ್ಲಿ ಆ್ಯಕ್ಷನ್ ದೃಶ್ಯಗಳು ಹೈಲೈಟ್ ಆಗಿವೆ.

ಇದನ್ನೂ ಓದಿ: ಪವನ್ ಕಲ್ಯಾಣ್ ‘ಓಜಿ’ ಸಿನಿಮಾ ಟಿಕೆಟ್ ಲಕ್ಷಗಳಿಗೆ ಹರಾಜು, ಕೊಂಡವರ್ಯಾರು?

ತಡವಾಗಿ ಬಿಡುಗಡೆ ಆದರೂ ಕೂಡ ‘ಓಜಿ’ ಟ್ರೇಲರ್​ ಗಮನ ಸೆಳೆದಿದೆ. ಪವನ್ ಕಲ್ಯಾಣ್ ಅವರ ಲುಕ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಟ್ರೇಲರ್​​ನ ಪ್ರತಿ ಫ್ರೇಮ್​​ನಲ್ಲಿ ಶ್ರೀಮಂತಿಕೆ ಕಾಣುತ್ತಿದೆ. ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸುವಲ್ಲಿ ಈ ಟ್ರೇಲರ್ ಗೆದ್ದಿದೆ. ಮೊದಲ ದಿನ ‘ಓಜಿ’ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.