AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವನ್ ಕಲ್ಯಾಣ್ ‘ಓಜಿ’ ಸಿನಿಮಾ ಟಿಕೆಟ್ ಲಕ್ಷಗಳಿಗೆ ಹರಾಜು, ಕೊಂಡವರ್ಯಾರು?

Pawan Kalyan OG Movie: ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಬೆನಿಫಿಟ್ ಶೋ, ಫ್ಯಾನ್ಸ್ ಶೋಗಳ ಅಬ್ಬರ ಜೋರಾಗಿದೆ. ಸಿನಿಮಾದ ಬೆನಿಫಿಟ್ ಶೋಗಳ ಟಿಕೆಟ್​​ಗಳನ್ನು ಹರಾಜಿನಲ್ಲಿ ಮಾರಾಟ ಮಾಡಲಾಗುತ್ತಿದ್ದು, ಅಭಿಮಾನಿಯೊಬ್ಬ ಲಕ್ಷಾಂತರ ರೂಪಾಯಿ ಹಣ ಕೊಟ್ಟು ಟಿಕೆಟ್ ಖರೀದಿ ಮಾಡಿದ್ದಾನೆ.

ಪವನ್ ಕಲ್ಯಾಣ್ ‘ಓಜಿ’ ಸಿನಿಮಾ ಟಿಕೆಟ್ ಲಕ್ಷಗಳಿಗೆ ಹರಾಜು, ಕೊಂಡವರ್ಯಾರು?
Pawan Kalyan
ಮಂಜುನಾಥ ಸಿ.
|

Updated on: Sep 21, 2025 | 5:49 PM

Share

ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ (Pawan Kalyan) ನಟಿಸಿರುವ ‘ಓಜಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಮತ್ತು ಸಿನಿಮಾದ ಟ್ರೈಲರ್ ಬಿಡುಗಡೆ ಇಂದು ಹೈದರಾಬಾದ್​​ನಲ್ಲಿ ಬಲು ಅದ್ಧೂರಿಯಾಗಿ ನಡೆಯಲಿದೆ. ಸಿನಿಮಾದ ಬಿಡುಗಡೆಗೆ ಕೆಲವು ದಿನಗಳು ಇರುವಂತೆಯೇ ಸಿನಿಮಾದ ಟಿಕೆಟ್​​ಗಳ ಮುಂಗಡ ಮಾರಾಟ ಆರಂಭವಾಗಿದೆ. ಅದರಲ್ಲೂ ಸಿನಿಮಾದ ಬೆನಿಫಿಟ್ ಶೋ ಟಿಕೆಟ್​​ ಒಂದು ಲಕ್ಷಾಂತರ ರೂಪಾಯಿಗೆ ಮಾರಾಟವಾಗಿದೆ. ಕೇವಲ ಒಂದು ಟಿಕೆಟ್​ಗೆ ಲಕ್ಷಾಂತರ ರೂಪಾಯಿ ಹಣ ಕೊಟ್ಟು ಖರೀದಿ ಮಾಡಿದ್ದಾನೆ ಅಭಿಮಾನಿಯೊಬ್ಬ.

ಆಂಧ್ರ ಪ್ರದೇಶದ ಚೌಟುಪಲ್ ಪುರಸಭೆ ವ್ಯಾಪ್ತಿಯ ಲಕ್ಕಾರ ಗ್ರಾಮದ ಅಮುದಾಲ ಪರಮೇಶ್ ಎಂಬುವರು ಪವನ್ ಕಲ್ಯಾಣ್ ಅವರ ಪಕ್ಕಾ ಅಭಿಮಾನಿ ಆಗಿದ್ದು, ‘ಓಜಿ’ ಸಿನಿಮಾದ ಬೆನಿಫಿಟ್ ಶೋ ಟಿಕೆಟ್​​ ಅನ್ನು ಬರೋಬ್ಬರಿ 1.30 ಲಕ್ಷ ರೂಪಾಯಿ ಹಣ ಕೊಟ್ಟು ಖರೀದಿ ಮಾಡಿದ್ದಾರೆ. ಬೆನಿಫಿಟ್ ಶೋ ಟಿಕೆಟ್ ಅನ್ನು ಚೌಟುಪಲ್ ನಲ್ಲಿ ಹರಾಜು ಹಾಕಲಾಗಿತ್ತು. ಈ ಹರಾಜಿನಲ್ಲಿ ಬರೋಬ್ಬರಿ 1.30 ಲಕ್ಷ ರೂಪಾಯಿಗಳಿಗೆ ಹರಾಜು ಕೂಗಿ ಟಿಕೆಟ್ ಅನ್ನು ಖರೀದಿ ಮಾಡಿದ್ದಾರೆ ಅಮುದಾಲ ಪರಮೇಶ್.

ಜಬರ್ದಸ್ತ್ ವಿನೋದಿನಿ ಅವರು ಅಮುದಾಲ ಪರಮೇಶ್ ಅವರಿಗೆ ಬೆನಿಫಿಟ್ ಶೋ ಮೊದಲ ಟಿಕೆಟ್ ಅನ್ನು ನೀಡಿದರು. ಪವನ್ ಅಭಿಮಾನಿಗಳು ಕೆಲವರು ಪರಮೇಶ್​​ಗೆ ಹಾರ, ಶಾಲು ಹಾಕಿ ಸನ್ಮಾನ ಸಹ ಮಾಡಿದರು. ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಪರಮೇಶ್, ‘ಈ ಹಣವನ್ನು ತಾವು ನೇರವಾಗಿ ಪವನ್ ಕಲ್ಯಾಣ್ ಅವರ ಜನಸೇನಾ ಪಾರ್ಟಿ ಕಚೇರಿಗೆ ನೀಡುವುದಾಗಿ ಹೇಳಿದರು.

ಇದನ್ನೂ ಓದಿ:ಪವನ್ ಕಲ್ಯಾಣ್ ನಟನೆ ‘ಓಜಿ’ ಟ್ರೈಲರ್ ಬಿಡುಗಡೆ ತಡ, ಆದರೆ ಅದ್ಧೂರಿ

ಕೆಲ ದಿನಗಳ ಹಿಂದೆ ಪವನ್ ಕಲ್ಯಾಣ್ ಹುಟ್ಟುಹಬ್ಬದ ದಿನದಂದು ಸಹ ‘ಓಜಿ’ ಸಿನಿಮಾದ ನೈಜಾಮ್ ಫ್ಯಾನ್ಸ್ ಶೋ ಮೊದಲ ಟಿಕೆಟ್ ಅನ್ನು ಆನ್​ಲೈನ್​​​ನಲ್ಲಿ ಹರಾಜು ಹಾಕಲಾಯ್ತು. ಆ ಟಿಕೆಟ್ ಅನ್ನು ನಾರ್ಥ್ ಅಮೆರಿಕ ಪವನ್ ಕಲ್ಯಾಣ್ ಅಭಿಮಾನಿಗಳ ಸಂಘ ಆ ಟಿಕೆಟ್ ಅನ್ನು ಬರೋಬ್ಬರಿ ಐದು ಲಕ್ಷ ರೂಪಾಯಿಗೆ ಹರಾಜು ಕೂಗಿ ಖರೀದಿ ಮಾಡಿತ್ತು. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಕೆಲ ದಿನಗಳ ಹಿಂದೆ ಕುಕಟಪಲ್ಲಿಯ ವಿಶ್ವನಾಥ್ ಚಿತ್ರಮಂದಿರದ ಫ್ಯಾನ್ಸ್ ಶೋ ಮೊದಲ ಟಿಕೆಟ್ 1.12 ಲಕ್ಷ ರೂಪಾಯಿಗೆ ಹರಾಜಾಗಿತ್ತು. ಚೆನ್ನೈನಲ್ಲಿ ಇದೇ ಸಿನಿಮಾದ ಫ್ಯಾನ್ಸ್ ಶೋ ಟಿಕೆಟ್ ಬರೋಬ್ಬರಿ ಒಂದು ಲಕ್ಷ ರೂಪಾಯಿಗೆ ಹರಾಜಾಗಿತ್ತು. ಇದೀಗ ಚೌಟುಪಲ್ ಫ್ಯಾನ್ಸ್ ಶೋ ಟಿಕೆಟ್ಟು 1.30 ಲಕ್ಷ ರೂಪಾಯಿಗೆ ಹರಾಜಾಗಿದೆ.

ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ ಸೆಪ್ಟೆಂಬರ್ 25 ರಂದು ಬಿಡುಗಡೆ ಆಗಲಿದೆ. ಸಿನಿಮಾ ಅನ್ನು ಸುಜಿತ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಬಾಲಿವುಡ್ ನಟ ಇಮ್ರಾನ್ ಹಶ್ಮಿ ವಿಲನ್. ಸಿನಿಮಾಕ್ಕೆ ತಮನ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ