‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ಕಾಂತಾರ ಅವಘಡ ನೆನೆದು ರಿಷಬ್ ಶೆಟ್ಟಿ ಭಾವುಕ
ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಕೆಲಸ ಶುರು ಮಾಡಿದ ದಿನದಿಂದಲೇ ಒಂದಲ್ಲಾ ಒಂದು ಅಡೆತಡೆ ಬರುತ್ತಿತ್ತು. ಶೂಟಿಂಗ್ ಮುಗಿಯುವುದರೊಳಗೆ ಚಿತ್ರತಂಡದ ಕೆಲವರು ಮೃತರಾದರು. ಸ್ವತಃ ರಿಷಬ್ ಶೆಟ್ಟಿ ಬಹಳ ಅಪಾಯಕಾರಿಯಾದ ಸ್ಟಂಟ್ಸ್ ಮಾಡಿದರು. ಅವುಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ರಿಷಬ್ ಶೆಟ್ಟಿ ಮಾತನಾಡಿದರು.
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾದ ಕೆಲಸ ಶುರು ಮಾಡಿದ ದಿನದಿಂದಲೇ ಒಂದಲ್ಲಾ ಒಂದು ಅಡೆತಡೆಗಳು ಬರುತ್ತಿದ್ದವು. ಸಿನಿಮಾ ಶೂಟಿಂಗ್ ಮುಗಿಯುವುದರೊಳಗೆ ಚಿತ್ರತಂಡದ ಕೆಲವರು ನಿಧನರಾದರು. ಸ್ವತಃ ರಿಷಬ್ ಶೆಟ್ಟಿ (Rishab Shetty) ಅವರು ಬಹಳ ಅಪಾಯಕಾರಿಯಾದ ಸ್ಟಂಟ್ಸ್ ಮಾಡಿದರು. ಅವುಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ರಿಷಬ್ ಶೆಟ್ಟಿ ಅವರು ಮಾತನಾಡಿದರು. ‘ಸೆಟ್ಟಲ್ಲಿ ಹಾಗಾಯ್ತು, ಹೀಗಾಯ್ತು ಅಂತ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿತ್ತು. ಲೆಕ್ಕ ಹಾಕಿದರೆ ನಾಲ್ಕು ಅಥವಾ ಐದು ಸಲ ನಾನು ಹೋಗಿಯೇ ಬಿಡುತ್ತಿದ್ದೆ. ಆದರೆ ನಾನು ಇಂದು ಬದುಕಿ ಬಂದು ನಿಮ್ಮ ಮುಂದೆ ನಿಂತಿದ್ದೇನೆ. ಅದಕ್ಕೆ ನಮ್ಮ ಹಿಂದಿರುವ ದೈವ ಕಾರಣ ಎಂಬುದು ನನ್ನ ನಂಬಿಕೆ. ಇಡೀ ತಂಡದ ಪ್ರತಿಯೊಬ್ಬರಿಗೆ ದೈವ ಆಶೀರ್ವಾದ ಮಾಡಿದೆ’ ಎಂದು ರಿಷಬ್ ಶೆಟ್ಟಿ ಅವರು ಹೇಳಿದರು. ಈ ವೇಳೆ ಅವರು ಕೊಂಚ ಎಮೋಷನಲ್ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

