Vakeel Saab Review: ವಕೀಲ್​ ಸಾಬ್​ ಟ್ವಿಟರ್​ ವಿಮರ್ಶೆ; ಪವನ್​ ಕಲ್ಯಾಣ್​ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟವಾಯ್ತಾ?

Pawan Kalyan: ವಕೀಲ್​ ಸಾಬ್​ ಸಿನಿಮಾ ಕೆಲವರಿಗೆ ತುಂಬ ಇಷ್ಟ ಆಗಿದ್ದರೆ, ಮತ್ತೆ ಕೆಲವರಿಗೆ ಕಿಂಚಿತ್ತೂ ಹಿಡಿಸಿಲ್ಲ. ತಮ್ಮ ಅನಿಸಿಕೆಗಳನ್ನು ನೆಟ್ಟಿಗರು ನೇರವಾಗಿ ಟ್ವಿಟರ್​ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Vakeel Saab Review: ವಕೀಲ್​ ಸಾಬ್​ ಟ್ವಿಟರ್​ ವಿಮರ್ಶೆ; ಪವನ್​ ಕಲ್ಯಾಣ್​ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟವಾಯ್ತಾ?
(ವಕೀಲ್​ ಸಾಬ್​ ಸಿನಿಮಾದಲ್ಲಿ ಪವನ್​ ಕಲ್ಯಾಣ್​)

Updated on: Apr 09, 2021 | 9:49 AM

ಪವನ್​ ಕಲ್ಯಾಣ್​ ನಟನೆಯ ‘ವಕೀಲ್​ ಸಾಬ್​’ ಸಿನಿಮಾಗೆ ಹಲವು ಅಡೆತಡೆಗಳು ಎದುರಾಗಿದ್ದವು. ಅದರ ನಡುವೆಯೂ ಈ ಚಿತ್ರ ಬಿಡುಗಡೆ ಆಗಿದೆ. ಒಂದೆಡೆ ಕೊರೊನಾ ವೈರಸ್​ ಭೀತಿ, ಇನ್ನೊಂದೆಡೆ ಶೇ.50 ಆಸನ ಮಿತಿ ಇದ್ದರೂ ಇಂದು (ಏ.9) ‘ವಕೀಲ್​ ಸಾಬ್​’ ಬಿಡುಗಡೆ ಆಗಿದೆ. ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಅಭಿಮಾನಿಗಳು ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಹಾಗಾದರೆ, ಪವನ್​ ಕಲ್ಯಾಣ್​ ಫ್ಯಾನ್ಸ್​ಗೆ ಈ ಚಿತ್ರ ಇಷ್ಟವಾಯ್ತಾ? ಚಿತ್ರವನ್ನು ಫಸ್ಟ್​ ಡೇ ಫಸ್ಟ್​ ಶೋ ನೋಡಿದ ಜನರು ಟ್ವಿಟರ್​ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ…

ಈ ಸಿನಿಮಾದಲ್ಲಿ ಪವನ್​ ಕಲ್ಯಾಣ್​ ಅವರು ಲಾಯರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಟನೆಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ‘ಪವರ್​ ಸ್ಟಾರ್​ ಒನ್​ ಮ್ಯಾನ್​ ಶೋ. ಥಮನ್​ ಹಿನ್ನೆಲೆ ಸಂಗೀತ ಸೂಪರ್​​ ಆಗಿದೆ. ಸಂಭಾಷಣೆಗಳೇ ಈ ಸಿನಿಮಾದ ಜೀವಾಳ. ನಾಯಕಿಯರ ನಟನೆ ಚೆನ್ನಾಗಿದೆ. ನಿರ್ದೇಶಕ ವೇಣು ಶ್ರೀರಾಮ್​ ಈ ಚಿತ್ರವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಇನ್ನು ಒಂದು ವಾರದವರೆಗೂ ಒಳ್ಳೆಯ ಕಲೆಕ್ಷನ್​ ಆಗುವುದು ಗ್ಯಾರಂಟಿ’ ಎಂದು ಪ್ರೇಕ್ಷಕರೊಬ್ಬರು ವಿಮರ್ಶೆ ಮಾಡಿದ್ದಾರೆ.

ಈ ಚಿತ್ರವನ್ನು ವಕೀಲ್​ ಸಾಬ್​ ಬದಲಿಗೆ ಕಮರ್ಷಿಯಲ್​ ಸಾಬ್​ ಎಂದು ಕರೆದಿರುವ ಅಭಿಮಾನಿಯೊಬ್ಬರು ಪವನ್​ ಕಲ್ಯಾಣ್​ ನಟನೆಗೆ ಫಿದಾ ಆಗಿದ್ದಾರೆ. ಚಿತ್ರ ಪಾಸಿಟಿವ್​ ಅಂಶಗಳೇನು ಎಂಬುದನ್ನು ಪಟ್ಟಿ ಮಾಡಿದ್ದಾರೆ. ‘ಪವನ್​ ಕಲ್ಯಾಣ್​ ಪರ್ಫಾಮೆನ್ಸ್​ ಸಖತ್​ ಪವರ್​ಫುಲ್​ ಆಗಿದೆ, ನಟಿಯರಾದ ನಿವೇತಾ ಥಾಮಸ್​, ಅನನ್ಯಾ ಹಾಗೂ ಅಂಜಲಿ ನಟನೆ ಮೆಚ್ಚುವಂತಿದೆ. ಸೆಕೆಂಡ್​ ಹಾಫ್​ನಲ್ಲಿ ಕೋರ್ಟ್​ ದೃಶ್ಯಗಳು ಚೆನ್ನಾಗಿವೆ. ಥಮನ್​ ಅವರ ಹಿನ್ನೆಲೆ ಸಂಗೀತ ಸೂಪರ್​’ ಎಂದಿರುವ ಅವರು 5ಕ್ಕೆ 4.5 ರೇಟಿಂಗ್​ ನೀಡಿದ್ದಾರೆ.

ಕೆಲವರಿಗೆ ಈ ಸಿನಿಮಾ ಕಿಂಚಿತ್ತೂ ಇಷ್ಟ ಆಗಿಲ್ಲ. ‘ವಕೀಲ್​ ಸಾಬ್​ ಸಿನಿಮಾದಲ್ಲಿ ಪವನ್​ ಕಲ್ಯಾಣ್​ ಅವರೇ ಮೈನಸ್​ ಪಾಯಿಂಟ್​. ಇಷ್ಟು ವರ್ಷಗಳ ಅವರ ವೃತ್ತಿಜೀವನದಲ್ಲಿ ಇದು ಅವರ ಅತಿ ಕೆಟ್ಟ ನಟನೆ’ ಎಂದು ಜರಿದಿರುವ ಪ್ರೇಕ್ಷಕರು #DisasterVakeelSaab ಎಂಬ ಹ್ಯಾಶ್​ ಟ್ಯಾಗ್​ ಮೂಲಕ ತಮ್ಮ ಕಟು ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಸಿನಿಮಾದಲ್ಲಿ ಇರುವ ಕಳಪೆ ಅಂಶಗಳೇನು ಎಂಬುದನ್ನು ಪಟ್ಟಿ ಮಾಡುತ್ತಿದ್ದಾರೆ.

ಅಂದಹಾಗೆ, ಇದು ಹಿಂದಿಯ ಪಿಂಕ್​ ಸಿನಿಮಾದ ರಿಮೇಕ್​. ಹಿಂದಿಯಲ್ಲಿ ಅಮಿತಾಭ್​ ಬಚ್ಚನ್​ ಮಾಡಿದ ಪಾತ್ರವನ್ನು ತೆಲುಗಿನಲ್ಲಿ ಪವನ್​ ಕಲ್ಯಾಣ್​ ಮಾಡಿದ್ದಾರೆ. ಆದರೆ ಇದನ್ನು ಅತಿ ಕೆಟ್ಟ ರಿಮೇಕ್​ ಎಂದು ಜನರು ತೆಗಳಿದ್ದಾರೆ. ‘ನಿರೂಪಣೆ ತುಂಬ ನಿಧಾನಗತಿಯಲ್ಲಿದೆ. ಪವನ್​ ಕಲ್ಯಾಣ್​ ನಟನೆ ಚೆನ್ನಾಗಿಲ್ಲ. 10ಕ್ಕೆ ಮೂರು ಅಂಕ ಕೊಡಬಹುದು ಅಷ್ಟೇ’ ಎಂಬ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗಿದೆ.

ಇದನ್ನೂ ಓದಿ: Vakeel Saab: ವಕೀಲ್​ ಸಾಬ್​ ಚಿತ್ರಕ್ಕೆ ವಿಘ್ನ! ಪವನ್​ ಕಲ್ಯಾಣ್​ ಅಭಿಮಾನಿಗಳ ಆಸೆಗೆ ತಣ್ಣೀರು ಎರಚುತ್ತಾ ಕೊರೊನಾ?

(Pawan Kalyan starrer Vakeel Saab film Twitter review)

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us