AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಮಾಪಕರಿಗೆ ಹೇಳದೆ ‘ಪೆದ್ದಿ’ ಆದಾಯ ಹಂಚಿಕೆ: ದೂರು ದಾಖಲು

Peddi movie producer: ‘ಪೆದ್ದಿ’ ಸಿನಿಮಾಕ್ಕೆ ಒಂದರ ಮೇಲೊಂದು ವಿವಾದಗಳು ಎದುರಾಗುತ್ತಲೇ ಇವೆ. ಮೊದಲಿಗೆ ನಟಿ ಜಾನ್ಹವಿ ಕಪೂರ್ ಅವರನ್ನು ಅತಿಯಾಗಿ ಗ್ಲಾಮರಸ್ ಆಗಿ ತೋರಿಸಿರುವ ಬಗ್ಗೆ ತೀವ್ರ ವಿವಾದ ಎದ್ದಿತ್ತು, ಬಳಿಕ ನಿರ್ದೇಶಕ ಬುಚ್ಚಿಬಾಬು ಸನಾ ಕ್ಷಮೆ ಕೋರಿ, ದೃಶ್ಯಗಳಿಗೆ ಕತ್ತರಿ ಹಾಕಿದರು. ಇದೀಗ ಖುದ್ದು, ‘ಪೆದ್ದಿ’ ಸಿನಿಮಾದ ನಿರ್ಮಾಪಕರೇ ಸಿನಿಮಾದ ವಿರುದ್ಧ ದೂರು ನೀಡಿದ್ದಾರೆ. ತಮಗೆ ಹೇಳದೆ, ಲಾಭ ಹಂಚಿಕೆ ವಿಚಾರವಾಗಿ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಆರೋಪ ಮಾಡಿದ್ದಾರೆ.

ನಿರ್ಮಾಪಕರಿಗೆ ಹೇಳದೆ ‘ಪೆದ್ದಿ’ ಆದಾಯ ಹಂಚಿಕೆ: ದೂರು ದಾಖಲು
Peddi Movie
ಮಂಜುನಾಥ ಸಿ.
|

Updated on: Jun 17, 2026 | 5:25 PM

Share

ಬುಚ್ಚಿ ಬಾಬು ಸಾನಾ ನಿರ್ದೇಶಿಸಿ, ರಾಮ್ ಚರಣ್ (Ram Charan) ಮತ್ತು ಜಾನ್ವಿ ಕಪೂರ್ ನಟಿಸಿರುವ ‘ಪೆದ್ದಿ’ ಸಿನಿಮಾಕ್ಕೆ ಒಂದರ ಮೇಲೊಂದು ವಿವಾದಗಳು ಎದುರಾಗುತ್ತಲೇ ಇವೆ. ಮೊದಲಿಗೆ ನಟಿ ಜಾನ್ಹವಿ ಕಪೂರ್ ಅವರನ್ನು ಅತಿಯಾಗಿ ಗ್ಲಾಮರಸ್ ಆಗಿ ತೋರಿಸಿರುವ ಬಗ್ಗೆ ತೀವ್ರ ವಿವಾದ ಎದ್ದಿತ್ತು, ಬಳಿಕ ನಿರ್ದೇಶಕ ಬುಚ್ಚಿಬಾಬು ಸನಾ ಕ್ಷಮೆ ಕೋರಿ, ದೃಶ್ಯಗಳಿಗೆ ಕತ್ತರಿ ಹಾಕಿದರು. ಇದೀಗ ಖುದ್ದು, ‘ಪೆದ್ದಿ’ ಸಿನಿಮಾದ ನಿರ್ಮಾಪಕರೇ ಸಿನಿಮಾದ ವಿರುದ್ಧ ದೂರು ನೀಡಿದ್ದಾರೆ. ತಮಗೆ ಹೇಳದೆ, ಲಾಭ ಹಂಚಿಕೆ ವಿಚಾರವಾಗಿ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಆರೋಪ ಮಾಡಿದ್ದಾರೆ.

‘ಪೆದ್ದಿ’ ಸಿನಿಮಾ ವಿಶ್ವದಾದ್ಯಂತ 300 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ, ಸಿನಿಮಾ ಯಶಸ್ಸು ಕಂಡಿದೆ. ಆದರೆ ನಿರ್ಮಾಪಕರು ತೃಪ್ತಿಯಾಗಿಲ್ಲ. ಸಿನಿಮಾದ ನಿರ್ಮಾಪಕ ವೃದ್ಧಿ ಸಿನೆಮಾಸ್‌ನ ವೆಂಕಟ ಸತೀಶ್ ಕಿಲಾರು ಅವರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಚಿತ್ರದ ಲಾಭ ಹಂಚಿಕೆ ಸಂಬಂಧಿಸಿದ ನಿರ್ಧಾರಗಳನ್ನು ತಮ್ಮ ಅರಿವಿಗೆ ಬಾರದೆಯೇ ತೆಗೆದುಕೊಳ್ಳಲಾಗಿದೆ ಎಂದು ಅವರು ದೂರಿದ್ದಾರೆ.

‘ಪೆದ್ದಿ’ ಸಿನಿಮಾ ಬಿಡುಗಡೆಗೂ ಮುನ್ನವೇ ತೆಲುಗು ಚಲನಚಿತ್ರ ನಿರ್ಮಾಪಕರು ಮತ್ತು ಪ್ರದರ್ಶಕರ ನಡುವೆ ಆದಾಯ ಹಂಚಿಕೆಯ ವಿಚಾರವಾಗಿ ವಿವಾದ ಉಂಟಾಗಿತ್ತು. ಪ್ರದರ್ಶಕರ ಸಂಘವು ಭವಿಷ್ಯದ ಎಲ್ಲಾ ಚಿತ್ರಗಳಿಗೆ ಶೇಕಡಾವಾರು ಹಂಚಿಕೆ ಪದ್ಧತಿಯನ್ನು ಕಡ್ಡಾಯಗೊಳಿಸಬೇಕೆಂದು ಪಟ್ಟು ಹಿಡಿದಿತ್ತು. ಪ್ರಸ್ತುತ ಜಾರಿಯಲ್ಲಿರುವ ಬಾಡಿಗೆ ಆಧಾರಿತ ಪದ್ಧತಿಯ ಬದಲಿಗೆ ಈ ಹೊಸ ಪದ್ಧತಿಯನ್ನು ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದ್ದರು.

ಇದನ್ನೂ ಓದಿ:ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಭರ್ಜರಿ ಕಸರತ್ತು; ವಿಡಿಯೋ ವೈರಲ್

ಮೇ 27ರಂದು ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯ (TFCC) ಪತ್ರದ ಪ್ರಕಾರ, ಮೇ 15ರಂದು ನಡೆದ ಸಭೆಯಲ್ಲಿ ಆದಾಯ ಹಂಚಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಅದರಂತೆ, ‘ಪೆದ್ದಿ’ ಚಿತ್ರದ ಬಿಡುಗಡೆಗೆ ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಳ್ಳಲು ಮತ್ತು ಆಂಧ್ರಪ್ರದೇಶದಲ್ಲಿ ಟಿಕೆಟ್ ದರ ಹೆಚ್ಚಳವಾದರೆ ಶೇ. 7.5 ರಷ್ಟು ಹಂಚಿಕೆ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಸಂಬಂಧ ಜೂನ್ 13ರಂದು ವಾಣಿಜ್ಯ ಮಂಡಳಿಗೆ ಪತ್ರ ಬರೆದಿರುವ ನಿರ್ಮಾಪಕ ವೆಂಕಟ ಸತೀಶ್, ಮೇ 15ರ ಸಭೆಗೆ ತಮ್ಮನ್ನು ಆಹ್ವಾನಿಸಿರಲಿಲ್ಲ ಮತ್ತು ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ. ತಾವು ಈ ಹಿಂದೆ ಪಾಲ್ಗೊಂಡಿದ್ದ ಸಭೆಗಳಲ್ಲಿ, ತಮ್ಮ ಚಿತ್ರವನ್ನು ಈಗಾಗಲೇ ವಿತರಕರಿಗೆ ಮಾರಾಟ ಮಾಡಿರುವುದರಿಂದ, ಈ ಶೇಕಡಾವಾರು ಹಂಚಿಕೆ ಪದ್ಧತಿಯು ತಮಗೆ ಸ್ವೀಕಾರಾರ್ಹವಲ್ಲ ಎಂದು ಸ್ಪಷ್ಟಪಡಿಸಿದ್ದಾಗಿ ಹೇಳಿದ್ದಾರೆ.

ತಮ್ಮ ಭಾಗವಹಿಸುವಿಕೆ ಇಲ್ಲದೆ ಮತ್ತು ವಾಸ್ತವಿಕ ಅಂಶಗಳನ್ನು ಪರಿಗಣಿಸದೆ ಇಂತಹ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ ಎಂದು ವೆಂಕಟ ಸತೀಶ್ ಅಭಿಪ್ರಾಯಪಟ್ಟಿದ್ದಾರೆ. ‘ವಿತರಕರು ಮತ್ತು ಪ್ರದರ್ಶಕರ ನಡುವಿನ ಒಪ್ಪಂದಗಳು ಈಗಾಗಲೇ ಅಂತಿಮಗೊಂಡಿವೆ. ಈ ಹಂತದಲ್ಲಿ ಯಾವುದೇ ಏಕಪಕ್ಷೀಯ ನಿರ್ಧಾರವು ಒಳಗೊಂಡಿರುವ ಎಲ್ಲಾ ಪಕ್ಷಗಳಿಗೆ ಗಂಭೀರ ಆರ್ಥಿಕ ಮತ್ತು ವಾಣಿಜ್ಯ ತೊಂದರೆಗಳನ್ನು ಉಂಟುಮಾಡುತ್ತದೆ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು
ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು
'ಗ್ಯಾರಂಟಿಯಲ್ಲಿ ಅಕ್ರಮವಾಗಿದೆ ಎಂದಾದರೆ ಅನುಷ್ಠಾನ ಸಮಿತಿ ಏನ್ಮಾಡ್ತಿತ್ತು?"
'ಗ್ಯಾರಂಟಿಯಲ್ಲಿ ಅಕ್ರಮವಾಗಿದೆ ಎಂದಾದರೆ ಅನುಷ್ಠಾನ ಸಮಿತಿ ಏನ್ಮಾಡ್ತಿತ್ತು?
ಇಷ್ಟು ಫೇಮ್ ಸಿಕ್ಕರೂ ಸಿನಿಮಾಗಳಲ್ಲಿ ಏಕೆ ನಟಿಸಲ್ಲ? ಕಾರಣ ತಿಳಿಸಿದ ಹನುಮಂತ
ಇಷ್ಟು ಫೇಮ್ ಸಿಕ್ಕರೂ ಸಿನಿಮಾಗಳಲ್ಲಿ ಏಕೆ ನಟಿಸಲ್ಲ? ಕಾರಣ ತಿಳಿಸಿದ ಹನುಮಂತ
ಜೆಡಿಎಸ್​​ನಿಂದ ಕಾಂಗ್ರೆಸ್​​ ಶಾಸಕರ ಸಂಪರ್ಕ ಸುದ್ದಿ ಸುಳ್ಳೆಂದ ಹೆಚ್​​ಡಿಕೆ
ಜೆಡಿಎಸ್​​ನಿಂದ ಕಾಂಗ್ರೆಸ್​​ ಶಾಸಕರ ಸಂಪರ್ಕ ಸುದ್ದಿ ಸುಳ್ಳೆಂದ ಹೆಚ್​​ಡಿಕೆ