ಒಳ್ಳೇದು ಮಾಡ್ತೀನಿ ಎಂದು ಹಣ ನುಂಗಿದ್ರಾ ವಿಶಾಲ್? ಗಂಭೀರ ಆರೋಪಕ್ಕೆ ತಿರುಗೇಟು

|

Updated on: Jul 27, 2024 | 1:11 PM

ವಿಶಾಲ್ ಅವರು 2017ರಿಂದ 2019ರವರೆಗೆ ತಮಿಳುನಾಡು ಸಿನಿಮಾ ನಿರ್ಮಾಪಕರ ಕೌನ್ಸಿಲ್​ನ ಅಧ್ಯಕ್ಷರಾಗಿದ್ದರು. ಅವರ ವಿರುದ್ಧ ಹಣ ದುರ್ಬಳಕೆ ಆರೋಪ ಬಂದಿದೆ. ಆಡಿಟ್ ವರದಿಯ ಪ್ರಕಾರ ವಿಶಾಲ್ 12 ಕೋಟಿ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಒಳ್ಳೇದು ಮಾಡ್ತೀನಿ ಎಂದು ಹಣ ನುಂಗಿದ್ರಾ ವಿಶಾಲ್? ಗಂಭೀರ ಆರೋಪಕ್ಕೆ ತಿರುಗೇಟು
ವಿಶಾಲ್
Follow us on

ಕಾಲಿವುಡ್ ನಟ ವಿಶಾಲ್ ಅವರ ವಿರುದ್ಧ ಗಂಭೀರ ಆರೋಪ ಒಂದು ಕೇಳಿ ಬಂದಿದೆ. ಅವರು 2017ರಲ್ಲಿ ಅವರು ತಮಿಳು ಸಿನಿಮಾ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿದ್ದರು. ಈಗ ಅವರನ್ನು ಬದಲಿಸಲಾಗಿದೆ. ಈ ಜಾಗಕ್ಕೆ ಮುರಳಿ ರಾಮಸ್ವಾಮಿ ಅವರು ಬಂದಿದ್ದಾರೆ. ಕೌನ್ಸಿಲ್ ಹಣವನ್ನು ವಿಶಾಲ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪವನ್ನು ರಾಮಸ್ವಾಮಿ ಮಾಡಿದ್ದಾರೆ. ಈ ವಿಚಾರದಲ್ಲಿ ತನಿಖೆಗೆ ಆದೇಶಿಸಿದ್ದಾರೆ. ಇದರ ವಿರುದ್ಧ ವಿಶಾಲ್ ಕಿಡಿ ಕಾರಿದ್ದಾರೆ.

‘ವಿಶಾಲ್ ಅವರು 2017ರಿಂದ 2019ರವರೆಗೆ ತಮಿಳುನಾಡು ಸಿನಿಮಾ ನಿರ್ಮಾಪಕರ ಕೌನ್ಸಿಲ್​ನ ಅಧ್ಯಕ್ಷರಾಗಿದ್ದರು. ಅವರ ವಿರುದ್ಧ ಹಣ ದುರ್ಬಳಕೆ ಆರೋಪ ಬಂದಿದೆ. 2019ರಲ್ಲಿ ತಮಿಳುನಾಡು ಸರ್ಕಾರ ವಿಶೇಷ ಅಧಿಕಾರಿಯನ್ನು ಈ ಪ್ರಕರಣದಲ್ಲಿ ನೇಮಕ ಮಾಡಿತ್ತು. ಲೆಕ್ಕವನ್ನು ನೋಡಿದಾಗ ಸುಮಾರು 12 ಕೋಟಿ ರೂಪಾಯಿ ದುರ್ಬಳಕೆ ಆಗಿರೋದು ತಿಳಿದು ಬಂದಿದೆ. 7.5 ಕೋಟಿ ರೂಪಾಯಿ ಹಣ ಕೌನ್ಸಿಲ್ ಬ್ಯಾಂಕ್​ನಿಂದ ಹಾಗೂ ಇನ್ನು ಉಳಿದ ಐದು ಕೋಟಿ ರೂಪಾಯಿ ಹಣವನ್ನು ಆದಾಯ ಮತ್ತು ವೆಚ್ಚದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಈ ಹಣವನ್ನು ಹಿಂದಿರುಗಿಸುವಂತೆ ಅವರಿಗೆ ನೋಟಿಸ್ ನೀಡಲಾಗಿತ್ತು, ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಕೌನ್ಸಿಲ್ ಹೇಳಿದೆ.

ಇದಕ್ಕೆ ವಿಶಾಲ್ ಅವರು ಖಡಕ್ ಉತ್ತರ ನೀಡಿದ್ದಾರೆ. ‘ಎಲ್ಲ ಹಣವು ನಿರ್ಮಾಪಕರ ಕೌನ್ಸಿಲ್​ನಲ್ಲಿರುವ ವಯಸ್ಸಾದ ಹಾಗೂ ಕಷ್ಟಪಡುತ್ತಿರುವ ಸದಸ್ಯರ ಕಲ್ಯಾಣಕ್ಕಾಗಿ ಬಳಕೆ ಮಾಡಲಾಗಿದೆ. ನಾವು ಮಾಡಿದ ಕೆಲಸದಿಂದ ಸದಸ್ಯರಿಗೆ ಹಾಗೂ ಸದಸ್ಯರ ಕುಟುಂಬಕ್ಕೆ ಸಹಾಯ ಆಗಿದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಕಂಗನಾಗೆ ಹೊಡೆದ ಮಹಿಳೆಗೆ ನಾನು ಕೆಲಸ ಕೊಡ್ತೀನಿ’: ಗಾಯಕ ವಿಶಾಲ್​ ದದ್ಲಾನಿ

‘ನಿಮ್ಮ ಕೆಲಸವನ್ನು ನೀವು ಸರಿಯಾಗಿ ಮಾಡಿ. ಸಿನಿಮಾ ಇಂಡಸ್ಟ್ರಿಯಲ್ಲಿ ಮಾಡೋಕೆ ಸಾಕಷ್ಟು ಕೆಲಸ ಇದೆ. ದ್ವಿಗುಣ ತೆರಿಗೆ, ಥಿಯೇಟರ್​ಗಳ ನಿರ್ವಹಣೆ ವೆಚ್ಛ ಹೀಗೆ ಬಗೆಹರಿಸಬೇಕಾದ ಸಮಸ್ಯೆಗಳು ಸಾಕಷ್ಟು ಇವೆ. ಈ ವಿಶಾಲ್ ಸಿನಿಮಾ ಮಾಡೋದನ್ನು ಯಾವಾಗಲೂ ಮುಂದುವರಿಸುತ್ತಾರೆ. ಯಾರಾದರೂ ನನ್ನನ್ನು ತಡೆಯೋದಾದರೆ ತಡೆಯಲಿ. ನೀವೆಲ್ಲ ಹೆಸರಿಗಷ್ಟೇ ನಿರ್ಮಾಪಕರು, ಯಾವುದೇ ಸಿನಿಮಾ ಮಾಡಲ್ಲ. ಅಭಿವೃದ್ಧಿ ಕಡೆ ಗಮನ ಹರಿಸಿ’ ಎಂದು ವಿಶಾಲ್ ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.