ಹುಟ್ಟೋ ಮಗುವಿಗಾಗಿ ದೊಡ್ಡ ನಿರ್ಧಾರ ತೆಗೆದುಕೊಂಡ ನಟಿ ದೀಪಿಕಾ ಪಡುಕೋಣೆ

ಅಂತರಾಷ್ಟ್ರೀಯ ವೆಬ್ ಸ್ಟೋರಿ ‘ದಿ ವೈಟ್ ಲೋಟಸ್' ಮೂರನೇ ಸೀಸನ್ ಆಫರ್ ದೀಪಿಕಾಗೆ ಬಂದಿತ್ತು. ಆದರೆ, ಪ್ರೆಗ್ನೆಂಟ್ ಕಾರಣಕ್ಕೆ ಅವರು ಅದನ್ನು ನಿರಾಕರಿಸಿದ್ದಾರೆ ಎಂದು ವರದಿಗಳು ಹೇಳಿವೆ. ಮಗುವನ್ನು ನೋಡಿಕೊಳ್ಳಲು ನಟಿ ಸರಣಿಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಹುಟ್ಟೋ ಮಗುವಿಗಾಗಿ ದೊಡ್ಡ ನಿರ್ಧಾರ ತೆಗೆದುಕೊಂಡ ನಟಿ ದೀಪಿಕಾ ಪಡುಕೋಣೆ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jul 27, 2024 | 2:04 PM

ಸದ್ಯ ನಟಿ ದೀಪಿಕಾ ಪಡುಕೋಣೆ ಸುದ್ದಿಯಲ್ಲಿದ್ದಾರೆ. ಪ್ರಗ್ನೆಂಟ್ ಆಗಿರೋ ಅವರು ಸೆಪ್ಟೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಹೀಗಾಗಿ ಈ ನಟಿ ಯಾವುದೇ ಸಿನಿಮಾದಲ್ಲಿ ನಟಿಸದಿರಲು ನಿರ್ಧರಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಪ್ರೆಗ್ನೆನ್ಸಿ ಆಗಿ ಸುದ್ದಿಯಾಗಿದ್ದ ನಟಿ ದೀಪಿಕಾ, ಮಗುವಿಗಾಗಿ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ತಾಯಿಯಾದ ನಂತರ ಕೆಲವು ವರ್ಷ ದೀಪಿಕಾ ಬಾಲಿವುಡ್‌ನತ್ತ ಮುಖ ಮಾಡದಿರಲು ನಿರ್ಧರಿಸಿದ್ದಾರೆ ಎಂಬ ವರದಿಗಳಿವೆ. ನಟಿ ತನ್ನ ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ ಎಂದು ಕೂಡ ಹೇಳಲಾಗಿದೆ.

ಅಂತರಾಷ್ಟ್ರೀಯ ವೆಬ್ ಸ್ಟೋರಿ ‘ದಿ ವೈಟ್ ಲೋಟಸ್’ ಮೂರನೇ ಸೀಸನ್ ಆಫರ್ ದೀಪಿಕಾಗೆ ಬಂದಿತ್ತು. ಆದರೆ, ಪ್ರೆಗ್ನೆಂಟ್ ಕಾರಣಕ್ಕೆ ಅವರು ಅದನ್ನು ನಿರಾಕರಿಸಿದ್ದಾರೆ ಎಂದು ವರದಿಗಳು ಹೇಳಿವೆ. ಮಗುವನ್ನು ನೋಡಿಕೊಳ್ಳಲು ನಟಿ ಸರಣಿಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ದೀಪಿಕಾ ಯಾವುದೇ ಹೊಸ ಪ್ರಾಜೆಕ್ಟ್‌ಗೆ ಸಹಿ ಹಾಕುತ್ತಿಲ್ಲ ಎಂಬ ಮಾಹಿತಿ ಹೊರಬೀಳುತ್ತಿದೆ.

ವರದಿಗಳ ಪ್ರಕಾರ ದೀಪಿಕಾ ಯಾರ ಸಹಾಯವೂ ಇಲ್ಲದೆ ಮಗುವನ್ನು ನೋಡಿಕೊಳ್ಳ ಬಯಸಿದ್ದಾರೆ. ಅಂದರೆ ಇತರ ಸೆಲೆಬ್ರಿಟಿಗಳಂತೆ ದೀಪಿಕಾ ಮಗುವನ್ನು ನೋಡಿಕೊಳ್ಳಲು ದಾದಿಯರನ್ನು ನೇಮಿಸಿಕೊಳ್ಳುವುದಿಲ್ಲ. ಅಷ್ಟೇ ಅಲ್ಲ, ತಾಯಿಯಾದ ನಂತರ ದೀಪಿಕಾ ಪತಿ ರಣವೀರ್ ಸಿಂಗ್ ಅವರ ಸಹಾಯ ಕೇಳುವುದಿಲ್ಲವಂತೆ. ತಮ್ಮ ಮಗುವನ್ನು ಸಂಪೂರ್ಣವಾಗಿ ತಾವೇ ನೋಡಿಕೊಳ್ಳ ಬಯಸಿದ್ದಾರೆ.

ದೀಪಿಕಾಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಇದು ಅವರು ಮೊದಲ ಮಾತೃತ್ವ. ಆದ್ದರಿಂದ ದೀಪಿಕಾ ಮಗುವಿನ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮೊದಲ ಮಾತೃತ್ವವನ್ನು ಆನಂದಿಸಲು ನಿರ್ಧರಿಸಿದ್ದಾರೆ. ಹೀಗಾಗಿ ದೀಪಿಕಾ ಒಳ್ಳೆಯ ತಾಯಿ ಎನಿಸಿಕೊಳ್ಳಲು ರೆಡಿ ಆಗಿದ್ದಾರೆ.

ದೀಪಿಕಾ ಪಡುಕೋಣೆ ಮಾರ್ಚ್ ತಿಂಗಳಲ್ಲಿ ತಮ್ಮ ಪ್ರೆಗ್ನೆನ್ಸಿ ವಿಚಾರದ ಬಗ್ಗೆ ಸಾಮಾಜಿಕ ಮಾಧ್ಯಮದ ಮೂಲಕ ಅಧಿಕೃತವಾಗಿ ಘೋಷಿಸಿದರು. ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡು, ಇಬ್ಬರು ತಮ್ಮ ಅಭಿಮಾನಿಗಳೊಂದಿಗೆ ಖುಷಿಯ ವಿಚಾರ ರಿವೀಲ್ ಮಾಡಿದರು. ಇದಲ್ಲದೆ, ದೀಪಿಕಾ ಅನೇಕ ಸ್ಥಳಗಳಲ್ಲಿ  ಬೇಬಿಬಂಪ್ ತೋರಿಸಿಕೊಂಡು ಓಡಾಡಿದ್ದಾರೆ.

ಇದನ್ನೂ ಓದಿ: ‘ದೀಪಿಕಾ ಪಡುಕೋಣೆಗೆ ಗಂಡು ಮಗು ಜನಿಸಲಿದೆ’: ಭವಿಷ್ಯ ನುಡಿದ ಜ್ಯೋತಿಷಿ

ಹಳೆಯ ಸಂದರ್ಶನವೊಂದರಲ್ಲಿ, ದೀಪಿಕಾ ತಾಯಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ‘ಮೂರು ಮಕ್ಕಳ ತಾಯಿಯಾಗಬೇಕು ಅಂತ ಆಸೆ ಇದೆ’ ಎಂದು ಅವರು ಹೇಳಿದ್ದರು. ಅಷ್ಟೇ ಅಲ್ಲ, ದೀಪಿಕಾ ಜೊತೆಗಿನ ಮದುವೆಯ ನಂತರ ಮಗಳಿಗೆ ತಂದೆಯಾಗುವ ಆಸೆಯನ್ನು ರಣವೀರ್ ವ್ಯಕ್ತಪಡಿಸಿದ್ದಾರೆ. ದೀಪಿಕಾ ಕೊನೆಯಾದಾಗಿ ನಟಿಸಿದ ಸಿನಿಮಾ ‘ಕಲ್ಕಿ 2898 ಎಡಿ’ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:28 pm, Sat, 27 July 24