ಲಂಡನ್ ಬೀದಿಯಲ್ಲಿ ಕಾಣಿಸಿಕೊಂಡ ಕರಣ್ ಜೋಹರ್; ಅಂಕಲ್ ಅಂತ ಕರೆದಿದ್ದಕ್ಕೆ ಕೋಪ

ಲಂಡನ್​ನಲ್ಲಿ ಸುತ್ತಾಡುತ್ತಿದ್ದ ಕರಣ್​ ಜೋಹರ್​ ಜೊತೆ ಕೆಲವರು ಅಭಿಮಾನದಿಂದ ಫೋಟೋ ತೆಗೆದುಕೊಂಡಿದ್ದಾರೆ. ಆದರೆ ಟಿಕ್​ಟಾಕ್​ ಮೂಲಕ ಫೇಮಸ್​ ಆಗಿರುವ ವ್ಯಕ್ತಿ ಬಂದು ಕರಣ್​ ಜೋಹರ್​ಗೆ ಅಂಕಲ್​ ಎಂದು ಕರೆದಿದ್ದಾರೆ. ಆ ಕ್ಷಣದ ವಿಡಿಯೋ ಈಗ ವೈರಲ್​ ಆಗಿದ್ದು, ಕರಣ್​ ಜೋಹರ್​ ಅವರ ಪ್ರತಿಕ್ರಿಯೆ ನೋಡಿ ಜನರು ಹಲವು ಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಲಂಡನ್ ಬೀದಿಯಲ್ಲಿ ಕಾಣಿಸಿಕೊಂಡ ಕರಣ್ ಜೋಹರ್; ಅಂಕಲ್ ಅಂತ ಕರೆದಿದ್ದಕ್ಕೆ ಕೋಪ
ಕರಣ್​ ಜೋಹರ್​, ಝೇನ್​ ತಡಾನಿ
Follow us
ಮದನ್​ ಕುಮಾರ್​
|

Updated on: Jul 26, 2024 | 7:19 PM

ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್​ ಜೋಹರ್ ಅವರು ಆಗಾಗ ವಿದೇಶಕ್ಕೆ ತೆರಳುತ್ತಾರೆ. ಇತ್ತೀಚೆಗೆ ಅವರು ಲಂಡನ್​ನಲ್ಲಿ ಕಾಣಿಸಿಕೊಂಡರು. ಅವರನ್ನು ನೋಡಿದ ಟಿಕ್​ಟಾಕ್​ ಕಾಂಟೆಂಟ್​ ಕ್ರಿಯೇಟರ್​ ಝೇನ್​ ತಡಾನಿ ಅವರಿಗೆ ಅಚ್ಚರಿ ಆಯಿತು. ಹತ್ತಿರಕ್ಕೆ ಹೋಗಿ ಕರಣ್​ ಜೋಹರ್​ ಅವರನ್ನು ಝೇನ್​ ಮಾತನಾಡಿಸಿದ್ದಾರೆ. ಆ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭೇಟಿಯ ಸಂದರ್ಭದಲ್ಲಿ ಅಂಕಲ್ ಎಂದು ಕರೆದಿದ್ದಕ್ಕೆ ಕರಣ್​ ಜೋಹರ್​ ಅವರಿಗೆ ಬೇಸರ ಆಗಿದೆ. ಮುನಿಸಿಕೊಂಡು ಅವರು ಮುಂದೆ ಸಾಗಿದ್ದಾರೆ.

ಲಂಡನ್​ನ ಬೀದಿಯಲ್ಲಿ ಕರಣ್​ ಜೋಹರ್​ ಅವರನ್ನು ನೋಡಿ ಕೆಲವರು ಫೋಟೋ ತೆಗೆದುಕೊಳ್ಳುತ್ತಿದ್ದರು. ಝೇನ್​ ತಡಾನಿ ಕೂಡ ಕರಣ್​ ಅವರನ್ನು ದೂರದಿಂದ ನೋಡಿದರು. ಆ ಖುಷಿಯಲ್ಲಿ, ‘ಓ ಮೈ ಗಾಡ್​.. ಈಗ ನಾನು ಕರಣ್​ ಜೋಹರ್​ ಅವರನ್ನು ಭೇಟಿಯಾದೆ. ಅವರನ್ನು ನಾನು ಏನೆಂದು ಕರೆಯಲಿ? ಕೆಜೋ? ಕರಣ್​? ಕರಣ್​ ಜೋಹರ್​? ಮಿಸ್ಟರ್​ ಜೋಹರ್​? ಮಿಸ್ಟರ್​ ಕರಣ್​?’ ಎಂದು ಝೇನ್​ ಅವರು ತಮ್ಮನ್ನೇ ಪ್ರಶ್ನೆ ಮಾಡಿಕೊಂಡಿದ್ದಾರೆ.

View this post on Instagram

A post shared by @zanethad

ಕರೆಯಲು ಇಷ್ಟೆಲ್ಲ ಆಯ್ಕೆಗಳು ಇದ್ದರೂ ಕೂಡ ಝೇನ್​ ಅವರು ಕರಣ್​ ಜೋಹರ್​ ಬಳಿಗೆ ಹೋದಾಗ ‘ಹಾಯ್​ ಅಂಕಲ್​’ ಎಂದರು. ಇದರಿಂದ ಕರಣ್​ ಜೋಹರ್​ ಅವರಿಗೆ ಕಿರಿಕಿರಿ ಆಯಿತು. ಅಲ್ಲಿಯವರೆಗೂ ನಗು ನಗುತ್ತಾ ಇದ್ದ ಅವರು ‘ಅಂಕಲ್​’ ಎಂಬ ಪದವನ್ನು ಕೇಳಿಸಿಕೊಂಡು ಕೋಪ ಮಾಡಿಕೊಂಡರು. ‘ನೀವು ನನನ್ನು ಅಂಕಲ್​ ಅಂತ ಕರೆದ್ರಾ’ ಎಂದು ಸಿಟ್ಟಿನಿಂದ ಪ್ರಶ್ನಿಸಿ, ಅಲ್ಲಿಂದ ಮುಂದೆ ಸಾಗಿದರು.

ಇದನ್ನೂ ಓದಿ: ಅವಕಾಶಕ್ಕಾಗಿ ಕರಣ್​ ಜೋಹರ್​ ಕಾರಿನ ಹಿಂದೆ ಓಡಿದ್ದ ನಟ ತಹ ಶಾ; ಈಗ ಹೇಗಿದೆ ಜೀವನ?

ಕರಣ್​ ಜೋಹರ್​ ಅವರಿಗೆ ಕಿರಿಕಿರಿ ಆಗಿದೆ ಎಂಬುದು ಗೊತ್ತಿದ್ದರೂ ಕೂಡ ಝೇನ್​ ತಡಾನಿ ಅವರು ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡುವಾಗ, ‘ಒಟ್ಟಿಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಅಂಕಲ್​’ ಎಂದು ಅವರು ಕ್ಯಾಪ್ಷನ್​ ಕೂಡ ನೀಡಿದ್ದಾರೆ. ಇದು ವೈರಲ್​ ಆಗಿದೆ. ಅಚ್ಚರಿ ಎಂದರೆ ಇದೇ ಪೋಸ್ಟ್​ ಅನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿರುವ ಕರಣ್​ ಜೋಹರ್​ ಅವರು ‘ನಿಮ್ಮನ್ನು ಭೇಟಿಯಾಗಿದ್ದಕ್ಕೆ ಖುಷಿ ಆಯಿತು’ ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ