AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಹಿಟ್ ಆದರೆ ಮದುವೆ ಆಗ್ತೀನಿ ಎಂದು ನಟನಿಗೆ ಕಂಡೀಷನ್ ಹಾಕಿದ್ದ ಕಾಜೋಲ್; ಮುಂದೇನಾಯ್ತು?

ಬಾಲಿವುಡ್​ನ ಪ್ರತಿಭಾವಂತ ಮತ್ತು ಹಿರಿಯ ನಟಿ ಕಾಜೊಲ್. ಶಾರುಖ್ ಖಾನ್ ಜೊತೆಗೆ ಮಾತ್ರವಲ್ಲದೆ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕಾಜೊಲ್ ನೀಡಿದ್ದಾರೆ. ಕಾಜೊಲ್, ಸ್ಟಾರ್ ನಟ ಅಜಯ್ ದೇವಗನ್ ಪತ್ನಿಯೂ ಹೌದು. ಅಂದಹಾಗೆ ಅಜಯ್ ಅನ್ನು ಮದುವೆ ಆಗುವ ಮೊದಲ ಷರತ್ತೊಂದನ್ನು ಹಾಕಿದ್ದರಂತೆ ಕಾಜೊಲ್.

ಸಿನಿಮಾ ಹಿಟ್ ಆದರೆ ಮದುವೆ ಆಗ್ತೀನಿ ಎಂದು ನಟನಿಗೆ ಕಂಡೀಷನ್ ಹಾಕಿದ್ದ ಕಾಜೋಲ್; ಮುಂದೇನಾಯ್ತು?
 ಶ್ರೀಲಕ್ಷ್ಮೀ ಎಚ್
| Edited By: |

Updated on: Jul 26, 2024 | 3:09 PM

Share

ನಟಿ ಕಾಜೋಲ್ ಮತ್ತು ಅಜಯ್ ದೇವಗನ್ ‘ಪ್ಯಾರ್ ತೋ ಹೋನಾ ಹಿ ಥಾ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಪ್ರೇಕ್ಷಕರು ಈ ಜೋಡಿಯನ್ನು ತುಂಬಾ ಇಷ್ಟಪಟ್ಟಿದ್ದಾರೆ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಚಿತ್ರದ ಬಜೆಟ್ 7.50 ಕೋಟಿ ರೂಪಾಯಿ. ಆದರೆ, ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ 31.55 ಕೋಟಿ ಗಳಿಸಿ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರದ ಸೆಟ್ನಲ್ಲಿ ಅಜಯ್ ದೇವಗನ್ ಕಾಜೋಲ್ಗೆ ಪ್ರಪೋಸ್ ಮಾಡಿದ್ದರು. ಆ ವೇಳೆ ಕಾಜೋಲ್ ಅಜಯ್ ಮುಂದೆ ಒಂದು ಕಂಡೀಷನ್ ಹಾಕಿದ್ದರು. ಅದನ್ನು ಅಜಯ್ ಒಪ್ಪಿಕೊಂಡರು. ಅದೃಷ್ಟ ಅಜಯ್ ಪರವಾಗಿತ್ತು.

1995ರಲ್ಲಿ ‘ಹಲ್ಚಲ್’ ಸಿನಿಮಾದಲ್ಲಿ ಅಜಯ್ ಹಾಗೂ ಕಾಜೋಲ್ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ಶೂಟ್ ಸಂದರ್ಭದಲ್ಲಿ ಕಾಜೋಲ್ ಧ್ವನಿ ಗಡುಸಾಗಿದೆ ಎಂದು ಅಜಯ್ಗೆ ಅನಿಸಿತ್ತು. ಅವರನ್ನು ಮತ್ತೊಮ್ಮೆ ಭೇಟಿ ಮಾಡಬಾರದು ಎಂದು ಅಜಯ್ ಅಂದುಕೊಂಡಿದ್ದರು. ನಂತರ ಇವರು ‘ಪ್ಯಾರ್ ತೋ ಹೋನಾ ಹಿ ಥಾ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದರು. ಆಗಲೇ ಅಜಯ್ಗೆ ಕಾಜೋಲ್ ಮೇಲೆ ಪ್ರೀತಿ ಮೂಡಿತ್ತು. 1998ರ ಜುಲೈ 15ರಂದು ಬಿಡುಗಡೆಯಾದ ಈ ಚಿತ್ರವನ್ನು ಅನೀಸ್ ಬಾಜ್ಮಿ ನಿರ್ದೇಶಿಸಿದ್ದರು. ಅಜಯ್-ಕಾಜೋಲ್ ಜೋಡಿ ಎಲ್ಲರಿಗೂ ಇಷ್ಟವಾಯಿತು.

ಇದನ್ನೂ ಓದಿ:ಜೂನಿಯರ್​ ಎನ್​ಟಿಆರ್​ ಎದುರು ವಿಲನ್​ ಆಗ್ತಾರಾ ಬಾಲಿವುಡ್​ ನಟ ಬಾಬಿ ಡಿಯೋಲ್​?

ಅಜಯ್ ದೇವಗನ್ ಮತ್ತು ಕಾಜೋಲ್ ‘ಪ್ಯಾರ್ ತೋ ಹೋನಾ ಹಿ ಥಾ’ ಚಿತ್ರದ ಶೂಟ್ನಲ್ಲಿ ಇದ್ದರು. ಆ ಸಮಯದಲ್ಲಿ ಅಜಯ್ ಅವರು ಕಾಜೋಲ್ ಎದುರು ಮದುವೆಗೆ ಪ್ರಸ್ತಾಪ ಇಟ್ಟರು. ಆ ವೇಳೆ ಕಾಜೋಲ್ ಅಜಯ್ ಮುಂದೆ ವಿಶಿಷ್ಟವಾದ ಷರತ್ತನ್ನು ಹಾಕಿದ್ದರು. ‘ಈ ಚಿತ್ರ ಹಿಟ್ ಆದಲ್ಲಿ ಮದುವೆ ಆಗುತ್ತೇನೆ ಇಲ್ಲವಾದರೆ ಮತ್ತೆಂದೂ ಈ ಬಗ್ಗೆ ಮಾತನಾಡುವುದಿಲ್ಲ’ ಎಂದು ಹೇಳಿದ್ದರು ಅವರು. ಕಾಜೋಲ್ ಈ ಷರತ್ತನ್ನು ಅಜಯ್ ದೇವಗನ್ ಒಪ್ಪಿಕೊಂಡಿದ್ದರು. ಅದೃಷ್ಟವಶಾತ್, ಚಿತ್ರವು ಸೂಪರ್ ಹಿಟ್ ಆಯಿತು ಮತ್ತು ಅಜಯ್-ಕಾಜೋಲ್ 24 ಫೆಬ್ರವರಿ 1999ರಂದು ವಿವಾಹವಾದರು.

‘ಪ್ಯಾರ್ ತೋ ಹೋನಾ ಹಿ ಥಾ’ ಚಿತ್ರದಲ್ಲಿ ಚುಂಬನದ ದೃಶ್ಯವನ್ನು ಚಿತ್ರೀಕರಿಸಲಾಗಿತ್ತು. ಹಾಲಿವುಡ್ ಚಲನಚಿತ್ರಗಳಲ್ಲಿ ಇದನ್ನು ಫ್ರೆಂಚ್ ಕಿಸ್ ಎಂದು ಕರೆಯಲಾಗುತ್ತದೆ. ಅದಕ್ಕೂ ಮೊದಲು ಕೆಲವೇ ಕೆಲವು ಭಾರತೀಯರಿಗೆ ಫ್ರೆಂಚ್ ಕಿಸ್ ಎಂಬ ಹೆಸರು ತಿಳಿದಿತ್ತು. ಹಾಸ್ಯನಟ ಸುನಿಲ್ ಗ್ರೋವರ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಇದರಲ್ಲಿ ಅವರು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ