ಅವಕಾಶಕ್ಕಾಗಿ ಕರಣ್​ ಜೋಹರ್​ ಕಾರಿನ ಹಿಂದೆ ಓಡಿದ್ದ ನಟ ತಹ ಶಾ; ಈಗ ಹೇಗಿದೆ ಜೀವನ?

ನಟ ತಹ ಶಾ ಬದುಶಾ ಅವರು ಒಂದೇ ಒಂದು ಅವಕಾಶಕ್ಕಾಗಿ ಸ್ಟಾರ್​ ನಿರ್ಮಾಪಕ ಕರಣ್​ ಜೋಹರ್​ ಕಾರಿನ ಹಿಂದೆ ಓಡಿದ್ದರು. ಆ ದಿನಗಳನ್ನು ಅವರೀಗ ಮೆಲುಕು ಹಾಕಿದ್ದಾರೆ. ‘ಹೀರಾಮಂಡಿ’ ವೆಬ್​ ಸಿರೀಸ್​ನ ಯಶಸ್ಸಿನಿಂದ ತಹ ಶಾ ಬದುಶಾ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಅವಕಾಶಗಳು ಹೆಚ್ಚಾಗಿವೆ. ಆದರೆ ಅವರ ಆರಂಭದ ದಿನಗಳು ಇಷ್ಟು ಸುಲಭವಾಗಿ ಇರಲಿಲ್ಲ.

ಅವಕಾಶಕ್ಕಾಗಿ ಕರಣ್​ ಜೋಹರ್​ ಕಾರಿನ ಹಿಂದೆ ಓಡಿದ್ದ ನಟ ತಹ ಶಾ; ಈಗ ಹೇಗಿದೆ ಜೀವನ?
ಕರಣ್​ ಜೋಹರ್​, ತಹ ಶಾ ಬದುಶಾ
Follow us
|

Updated on: Jun 10, 2024 | 9:48 PM

ನಟ ತಹ ಶಾ ಬದುಶಾ (Taha Shah Badussha) ಅವರು ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. ಬಣ್ಣದ ಲೋಕದಲ್ಲಿ ಅವರಿಗೆ 13 ವರ್ಷಗಳ ಅನುಭವ ಇದೆ. ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ಆದರೆ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದ್ದು ಹೀರಾಮಂಡಿ’ (Heeramandi) ವೆಬ್​ ಸರಣಿ ಮೂಲಕ. ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ ಈ ವೆಬ್​ ಸಿರೀಸ್​ನಲ್ಲಿ ತಹ ಶಾ ಅವರಿಗೆ ಪ್ರಮುಖ ಪಾತ್ರವಿದೆ. ನೆಟ್​ಫ್ಲಿಕ್ಸ್​ ಮೂಲಕ ಬಿಡುಗಡೆ ಆದ ‘ಹೀರಾಮಂಡಿ’ ಸೂಪರ್​ ಹಿಟ್​ ಆಗಿದೆ. ಇದರಿಂದ ತಹ ಶಾ ಬದುಶಾ ಅವರಿಗೆ ಅವಕಾಶಗಳು ಹೆಚ್ಚಾಗಿದೆ. ಆದರೆ ಆರಂಭದ ದಿನಗಳಲ್ಲಿ ಹೀಗಿರಲಿಲ್ಲ. ಒಂದೇ ಒಂದು ಅವಕಾಶಕ್ಕಾಗಿ ಕರಣ್​ ಜೋಹರ್​ (Karan Johar) ಕಾರಿನ ಹಿಂದೆ ತಹ ಶಾ ಓಡಿದ್ದರು.

‘ದಿ ವೀಕ್​’ ನಡೆಸಿದ ಸಂದರ್ಶನದಲ್ಲಿ ತಹ ಶಾ ಬದುಶಾ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2011ರಲ್ಲಿ. ಅವರ ಮೊದಲ ಸಿನಿಮಾ ‘ಲವ್​ ಕ ದಿ ಎಂಡ್​’. ಆ ದಿನಗಳನ್ನು ತಹ ಶಾ ನೆನಪಿಸಿಕೊಂಡಿದ್ದಾರೆ. ಅವರು ನಟಿಸಿದ ಮೊದಲ ಸಿನಿಮಾಗೆ ‘ಯಶ್​ ರಾಜ್​ ಫಿಲ್ಮ್ಸ್​’ ಸಂಸ್ಥೆ ಬಂಡವಾಳ ಹೂಡಿತ್ತು. ಹಾಗಿದ್ದರೂ ಕೂಡ ಎರಡನೇ ಅವಕಾಶ ಪಡೆಯಲು ತಹ ಶಾ ಕಷ್ಟಪಡಬೇಕಿತ್ತು.

‘ಮೊದಲ ಸಿನಿಮಾ ‘ಲವ್​ ಕ ದಿ ಎಂಡ್​’ ಪೂರ್ಣವಾದ ಬಳಿಕ ನಾನು ಹೊರಬಂದು ಜನರ ಸಂಪರ್ಕ ಹೆಚ್ಚಿಸಿಕೊಳ್ಳಲು ಆರಂಭಿಸಿದೆ. ಆ ರೀತಿಯಲ್ಲೇ ನನಗೆ ‘ಗಿಪ್ಪಿ’ ಸಿನಿಮಾ ಸಿಕ್ಕಿದ್ದು. ನಾನು ಕರಣ್​ ಜೋಹರ್​ ಅವರ ಕಾರಿನ ಹಿಂದೆ ಓಡಿದೆ. ಅವರ ಕಾರನ್ನು ತಟ್ಟಿದೆ. ನಾನು ಒಂದು ಸಿನಿಮಾದಲ್ಲಿ ನಟಿಸಿದ್ದೇನೆ. ಅದನ್ನು ನಿಮಗೆ ತೋರಿಸಬೇಕು. ದಯವಿಟ್ಟು ನಿಮ್ಮ ಫೋನ್​ ನಂಬರ್​ ಕೊಡಿ ಅಂತ ಕೇಳಿದೆ’ ಎಂದಿದ್ದಾರೆ ತಹ ಶಾ.

ಇದನ್ನೂ ಓದಿ: ಆಕರ್ಷಕ ಮೈಕಟ್ಟಿನ ಫೋಟೋಗಳಿಂದ ಗಮನ ಸೆಳೆದ ‘ಹೀರಾಮಂಡಿ’ ನಟ

‘ಕರಣ್​ ಜೋಹರ್​ ಅವರು ನನಗೆ ಫೋನ್​ ನಂಬರ್​ ನೀಡಿದರು. ಓಡೋಡಿ ಬಂದಿದ್ದ ನನಗೆ ಏನಾದರೂ ಆಗಿದೆಯಾ ಅಂತ ಅವರು ವಿಚಾರಿಸಿದರು. ಅಲ್ಲದೇ, ಕುಡಿಯಲು ನೀರು ಕೊಟ್ಟರು. ಈ ರೀತಿ ನಾನು ಅವರನ್ನು ಮೊದಲ ಬಾರಿ ಭೇಟಿ ಆಗಿದ್ದು. ನಂತರ ನಾನು ಅವರ ಆಫೀಸ್​ಗೆ ಹೋದೆ. ಗಿಪ್ಪಿ ಸಿನಿಮಾಗೆ ಆಡಿಷನ್​ ನೀಡಿ ಆಯ್ಕೆಯಾದೆ’ ಎಂದು ತಹ ಶಾ ಹೇಳಿದ್ದಾರೆ.

ಕೆಲವೊಮ್ಮೆ ಅಂದುಕೊಂಡ ರೀತಿಯಲ್ಲಿ ಅವಕಾಶಗಳು ಬಾರದೇ ಇರಬಹುದು. ಇಂಥ ಸಂದರ್ಭದಲ್ಲಿ ಕೂಡ ತಹ ಶಾ ಅವರು ಚಿತ್ರರಂಗವನ್ನು ತೊರೆಯಲು ನಿರ್ಧಾರ ಮಾಡಲಿಲ್ಲ. ‘ಚಿತ್ರರಂಗ ಬಿಟ್ಟು ಬೇರೆ ಎಲ್ಲಿಗೋ ಹೋಗಿ, ಏನನ್ನೋ ಮಾಡಬೇಕು ಅಂತ ನಾನು ಎಂದಿಗೂ ಯೋಚಿಸಿಲ್ಲ. ನಟನೆ ಹೊರತಾಗಿ ನನಗೆ ಏನೂ ಗೊತ್ತಿಲ್ಲ. ಚಿತ್ರರಂಗದವರ ಸಂಪರ್ಕ ಹೆಚ್ಚಿಸಿಕೊಳ್ಳುವುದು, ಮಾತುಕತೆ ಮಾಡುವುದು, ತರಗತಿಗಳಿಗೆ ಹಾಜರಾಗುವುದು ಮತ್ತು ಕಷ್ಟಪಡುವುದರ ಬಗ್ಗೆ ಮಾತ್ರ ನಾನು ಆಲೋಚಿಸಿದೆ’ ಎಂದು ತಮ್ಮ ಆರಂಭದ ದಿನಗಳನ್ನು ತಹ ಶಾ ಮೆಲುಕು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಗದಗ: ಗೋದಾಮಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹುಳುಗಳ ಪಾಲು
ಗದಗ: ಗೋದಾಮಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹುಳುಗಳ ಪಾಲು
Horoscope: ಈ ರಾಶಿಯವರಿಗೆ ಇಂದು ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ
Horoscope: ಈ ರಾಶಿಯವರಿಗೆ ಇಂದು ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ
ಹನುಮಂತನಿಗೆ ವೀಳ್ಯದೆಲೆ ಮಾಲೆ ಧಾರಣೆಯ ಮಹತ್ವವೇನು?
ಹನುಮಂತನಿಗೆ ವೀಳ್ಯದೆಲೆ ಮಾಲೆ ಧಾರಣೆಯ ಮಹತ್ವವೇನು?
ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಸರಣಿಯಲ್ಲಿ ಮತ್ತೊಂದು ಲೇಟೆಸ್ಟ್​ ಮಾಡೆಲ್
ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಸರಣಿಯಲ್ಲಿ ಮತ್ತೊಂದು ಲೇಟೆಸ್ಟ್​ ಮಾಡೆಲ್
ಡಿಎನ್​ಎ ಟೆಸ್ಟ್​ ಮಾಡಿಸಲು ಆಸ್ಪತ್ರೆಗೆ ತೆರಳುವಾಗಿ ಟೆನ್ಷನ್​ ಆದ ಪವಿತ್ರಾ
ಡಿಎನ್​ಎ ಟೆಸ್ಟ್​ ಮಾಡಿಸಲು ಆಸ್ಪತ್ರೆಗೆ ತೆರಳುವಾಗಿ ಟೆನ್ಷನ್​ ಆದ ಪವಿತ್ರಾ
ಡಿಕೆ ಶಿವಕುಮಾರ್​ ಸಭೆಗೂ ಕೈಕೊಟ್ಟ ವಿದ್ಯುತ್: ಅಧಿಕಾರಿಗಳ ಸರ್ಕಸ್ ನೋಡಿ
ಡಿಕೆ ಶಿವಕುಮಾರ್​ ಸಭೆಗೂ ಕೈಕೊಟ್ಟ ವಿದ್ಯುತ್: ಅಧಿಕಾರಿಗಳ ಸರ್ಕಸ್ ನೋಡಿ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು
ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಡಿಕೆ ಶಿವಕುಮಾರ್‌
ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಡಿಕೆ ಶಿವಕುಮಾರ್‌
ಕಾಸರಗೋಡಿನಲ್ಲಿ ಕೋಣದ ಆರ್ಭಟಕ್ಕೆ ಮನೆ, ಗೇಟು, ಕಾರು ನಜ್ಜುಗುಜ್ಜು
ಕಾಸರಗೋಡಿನಲ್ಲಿ ಕೋಣದ ಆರ್ಭಟಕ್ಕೆ ಮನೆ, ಗೇಟು, ಕಾರು ನಜ್ಜುಗುಜ್ಜು