ಸಲ್ಲು ಸಿನಿಮಾದಲ್ಲಿ ನಟಿಸಲು ನೋ ಎಂದಿದ್ದ ಆರು ನಟಿಯರು; ಛೋಟಾ ಶಕೀಲ್ ಬಂಡವಾಳ?
‘ಚೋರಿ ಚೋರಿ ಚುಪ್ಕೆ ಚುಪ್ಕೆ' ಚಿತ್ರದಲ್ಲಿ ಪ್ರೀತಿ ಜಿಂಟಾ ನಟಿಸಿದ್ದ ಪಾತ್ರವನ್ನು ಕರೀನಾ ಕಪೂರ್‌ಗೆ ಮೊದಲು ನೀಡಲಾಯಿತು. ಕರೀನಾ ಈ ಚಿತ್ರಕ್ಕಾಗಿ 20 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದರು. ನಂತರ ಅವರು ಇದ್ದಕ್ಕಿದ್ದಂತೆ ಚಿತ್ರವನ್ನು ಮಧ್ಯದಲ್ಲಿ ತೊರೆದರು.
ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಕಳೆದ 3 ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಜನರಲ್ಲಿ ಸಲ್ಮಾನ್ಗೆ ಸಾಕಷ್ಟು ಕ್ರೇಜ್ ಇದೆ. ಈಗಿನ ಸಿನಿಮಾ ಮಾತ್ರ ಅಲ್ಲ ಅವರ ಹಳೆಯ ಚಿತ್ರಗಳನ್ನು ಮತ್ತೆ ಮತ್ತೆ ನೋಡಲು ಪ್ರೇಕ್ಷಕರು ಇಷ್ಟಪಡುತ್ತಾರೆ. ಅವರ ಚಿತ್ರಗಳ ಕಥೆಯಿಂದ ಹಿಡಿದು ಅವರ ಹಾಡುಗಳವರೆಗೆ ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. 2001ರಲ್ಲಿ ಸಲ್ಮಾನ್ ಅವರ ಸಿನಿಮಾ ಒಂದು ಬಿಡುಗಡೆ ಆಯಿತು. ಈ ಚಿತ್ರದಲ್ಲಿ ನಟೊಸೋಕೆ ಆರು ನಟಿಯರು ನಿರಾಕರಿಸಿದ್ದರು.
2001ರಲ್ಲಿ ಸಲ್ಮಾನ್ ಖಾನ್, ರಾಣಿ ಮುಖರ್ಜಿ ಮತ್ತು ಪ್ರೀತಿ ಜಿಂಟಾ ಅವರ ನಟನೆಯ ‘ಚೋರಿ ಚೋರಿ ಚುಪ್ಕೆ ಚುಪ್ಕೆ’ ಸಿನಿಮಾ ಬಿಡುಗಡೆ ಆಯಿತು. ಬಾಡಿಗೆ ತಾಯ್ತನದ ವಿಷಯವನ್ನು ಈ ಚಿತ್ರದಲ್ಲಿ ಹೇಳಾಯಿತು. ಬಾಡಿಗೆ ತಾಯ್ತನವನ್ನು ಭಾರತದ ಜನರು ಒಪ್ಪಿಕೊಂಡಿರಲಿಲ್ಲ. ಆ ಸಮಯದಲ್ಲಿ ಈ ಬಗ್ಗೆ ಕೆಲವೇ ಜನರಿಗೆ ತಿಳಿದಿತ್ತು. ಈ ಚಿತ್ರ 2000ನೇ ಇಸವಿಯಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ವಿವಾದಗಳಿಂದಾಗಿ ಅದರ ಬಿಡುಗಡೆಯನ್ನು ಹಲವು ತಿಂಗಳುಗಳ ಕಾಲ ಮುಂದೂಡಲಾಯಿತು.
6 ನಟಿಯರು ಪಾತ್ರವನ್ನು ತಿರಸ್ಕರಿಸಿದ್ದರು
‘ಚೋರಿ ಚೋರಿ ಚುಪ್ಕೆ ಚುಪ್ಕೆ’ ಚಿತ್ರದಲ್ಲಿ ಪ್ರೀತಿ ಜಿಂಟಾ ನಟಿಸಿದ್ದ ಪಾತ್ರವನ್ನು ಕರೀನಾ ಕಪೂರ್‌ಗೆ ಮೊದಲು ನೀಡಲಾಯಿತು. ಕರೀನಾ ಈ ಚಿತ್ರಕ್ಕಾಗಿ 20 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದರು. ನಂತರ ಅವರು ಇದ್ದಕ್ಕಿದ್ದಂತೆ ಚಿತ್ರವನ್ನು ಮಧ್ಯದಲ್ಲಿ ತೊರೆದರು. ಕರೀನಾ ನಿರ್ಗಮನದ ನಂತರ, ಐಶ್ವರ್ಯಾ ರೈ ಮತ್ತು ಟಬು ಸೇರಿದಂತೆ 6 ನಟಿಯರಿಗೆ ಈ ಚಿತ್ರದ ಆಫರ್ ನೀಡಲಾಯಿತು. ಆದರೆ ಎಲ್ಲರೂ ಅದನ್ನು ಮಾಡಲು ನಿರಾಕರಿಸಿದರು. ಅಂತಿಮವಾಗಿ, ಈ ಪಾತ್ರಕ್ಕಾಗಿ ಪ್ರೀತಿ ಜಿಂಟಾ ಅವರನ್ನು ಸಂಪರ್ಕಿಸಿದಾಗ, ಅವರು ಅದನ್ನು ಒಪ್ಪಿಕೊಂಡರು.
ಸಲ್ಮಾನ್ ಸಿನಿಮಾ ಸೂಪರ್ ಹಿಟ್ ಆಯಿತು
ಪ್ರೇಕ್ಷಕರು ಚಿತ್ರವನ್ನು ತುಂಬಾ ಇಷ್ಟಪಟ್ಟರು. ಚಿತ್ರದ ಪ್ರತಿ ಹಾಡು ಸೂಪರ್‌ಹಿಟ್ ಆಗಿವೆ. ಸ್ವಿಟ್ಜರ್ಲೆಂಡ್‌ನ ಸುಂದರ ತಾಣಗಳಲ್ಲಿ ‘ಚೋರಿ ಚೋರಿ ಚುಪ್ಕೆ ಚುಪ್ಕೆ’ ಸಿನಿಮಾ ಶೂಟ್ ಮಾಡಲಾಗಿದೆ. 23 ವರ್ಷಗಳ ಹಿಂದೆ ಈ ಚಿತ್ರವನ್ನು ನಿರ್ಮಿಸಲು 13 ಕೋಟಿ ರೂಪಾಯಿ ಖರ್ಚಾಗಿತ್ತು. ಸಲ್ಮಾನ್ ಅವರ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 37.5 ಕೋಟಿ ರೂಪಾಯಿ ಗಳಿಸಿತ್ತು. ಈ ಮೂಲಕ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು.
ಇದನ್ನೂ ಓದಿ: ಫಾರಂ ಹೌಸ್ನಲ್ಲಿ ಸಲ್ಮಾನ್ ಖಾನ್ ಕೊಲ್ಲಲು ಯೋಜನೆ, ನಾಲ್ವರ ಬಂಧನ
ವಿವಾದವೇನು?
2000ನೇ ಇಸವಿಯಲ್ಲಿ ಚಿತ್ರದ ನಿರ್ಮಾಪಕ ನಜೀಮ್ ರಿಜ್ವಿ ಮತ್ತು ಫೈನಾನ್ಶಿಯರ್ ಭರತ್ ಶಾ ಅವರನ್ನು ಬಂಧಿಸಲಾಗಿತ್ತು. ಚಿತ್ರಕ್ಕೆ ಭೂಗತ ಪಾತಕಿ ಛೋಟಾ ಶಕೀಲ್ ಹಣ ಹೂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಚಿತ್ರದಿಂದ ಏನೇ ಲಾಭ ಬಂದರೂ ಛೋಟಾ ಶಕೀಲ್ಗೆ ಹೋಗುತ್ತದೆ ಎನ್ನಲಾಗಿತ್ತು. ಕೋರ್ಟ್ ಮೆಟ್ಟಿಲಿಗೆ ಈ ಪ್ರಕರಣ ಹೋಯಿತು. ಈ ಚಿತ್ರದಿಂದ ಬರುವ ಲಾಭವನ್ನು ನ್ಯಾಯಾಲಯಕ್ಕೆ ಠೇವಣಿ ಇಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.