‘ಪುಷ್ಪ 2’ ನೋಡಲು ಬಂದು ಪೊಲೀಸರ ಬಲೆಗೆ ಬಿದ್ದ ರಿಯಲ್ ಗ್ಯಾಂಗ್​ಸ್ಟರ್

|

Updated on: Dec 23, 2024 | 4:53 PM

ಹಲವು ಕಾರಣಗಳಿಂದಾಗಿ ‘ಪುಷ್ಪ 2’ ಸಿನಿಮಾ ಟ್ರೆಂಡ್​ ಆಗುತ್ತಿದೆ. ಎಲ್ಲ ವರ್ಗದ ಪ್ರೇಕ್ಷಕರು ಈ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಅಚ್ಚರಿ ಏನೆಂದರೆ, ‘ಪುಷ್ಪ 2’ ಸಿನಿಮಾವನ್ನು ನೋಡಲು ಬಂದ ರಿಯಲ್​ ಗ್ಯಾಂಗ್​ಸ್ಟರ್​ ಒಬ್ಬನನ್ನು ಪೊಲೀಸರು ಚಿತ್ರಮಂದಿರದಲ್ಲೇ ಬಂಧಿಸಿದ್ದಾರೆ! ಕಳೆದ 10 ತಿಂಗಳಿಂದ ತಲೆ ಮರೆಸಿಕೊಂಡಿದ್ದ ಆತ ಈಗ ಸಿನಿಮಾ ನೋಡುವ ಆಸೆಯಿಂದಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

‘ಪುಷ್ಪ 2’ ನೋಡಲು ಬಂದು ಪೊಲೀಸರ ಬಲೆಗೆ ಬಿದ್ದ ರಿಯಲ್ ಗ್ಯಾಂಗ್​ಸ್ಟರ್
Allu Arjun
Follow us on

ಸಿನಿಮಾ ಎಂಬ ಮಾಯೆ ಯಾರನ್ನೂ ಬಿಟ್ಟಿಲ್ಲ. ಒಳ್ಳೆಯವರಾದರೂ, ಕೆಟ್ಟವರಾದರೂ ಮನರಂಜನೆಗೆ ಸಿನಿಮಾ ನೋಡುತ್ತಾರೆ. ಇತ್ತೀಚೆಗೆ ತೆರೆಕಂಡ ‘ಪುಷ್ಪ 2’ ಸಿನಿಮಾವನ್ನು ನೋಡಿ ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಎಂಜಾಯ್ ಮಾಡಿದ್ದಾರೆ. ಈಗಲೂ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಮಹಾರಾಷ್ಟ್ರದ ನಾಗ್​ಪುರದಲ್ಲಿ ‘ಪುಷ್ಪ 2’ ಸಿನಿಮಾ ನೋಡಲು ಬಂದ ಓರ್ವ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ ಈಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಕಳೆದ 10 ತಿಂಗಳಿನಿಂದ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದ ಆತನನ್ನು ಚಿತ್ರಮಂದಿರದಲ್ಲೇ ಬಂಧಿಸಲಾಗಿದೆ.

ವಿಶಾಲ್ ಮೇಶ್​ರಾಮ್​ ಎಂಬಾತನ ಮೇಲೆ ಬರೋಬ್ಬರಿ 27 ಕೇಸ್​ಗಳು ಇವೆ. ಈತನನ್ನು ಬಂಧಿಸಲು ಮಹಾರಾಷ್ಟ್ರ ಪೊಲೀಸರು ಪ್ರಯತ್ನಿಸುತ್ತಿದ್ದರು. ಆದರೆ ಆತ ಹಲವು ತಿಂಗಳಿಂದ ತಲೆ ತಪ್ಪಿಸಿಕೊಂಡಿದ್ದ. ಆದರೆ ‘ಪುಷ್ಪ 2’ ಸಿನಿಮಾವನ್ನು ನೋಡಲು ಬಂದಾಗ ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪಕ್ಕಾ ಸಿನಿಮಾ ಶೈಲಿಯಲ್ಲೇ ಆತನ್ನನು ಬಂಧಿಸಲಾಗಿದೆ.

ಕೊಲೆ, ಡ್ರಗ್​ ಪೆಡ್ಲಿಂಗ್ ಸೇರಿದಂತೆ ಅನೇಕ ಆರೋಪಗಳು ವಿಶಾಲ್ ಮೇಶ್​ರಾಮ್ ಮೇಲಿದೆ. ಆತನನ್ನು ಹಿಡಿಯಲು ಪೊಲೀಸರು ಸಾಕಷ್ಟು ಪ್ರಯತ್ನಿಸಿ ಸುಸ್ತಾಗಿದ್ದರು. ಆದರೆ ಇತ್ತೀಚೆಗೆ ಆತ ‘ಪುಷ್ಪ 2’ ಸಿನಿಮಾವನ್ನು ನೋಡಲು ಬರುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಆತ ಚಿತ್ರಮಂದಿರದ ಒಳಗೆ ಹೋಗಿ ಸಿನಿಮಾ ನೋಡುತ್ತಿರುವಾಗ ಪೊಲೀಸರು ದಾಳಿ ಮಾಡಿದರು.

ಪೊಲೀಸರು ಎಂಟ್ರಿ ನೀಡಿದಾಗ ವಿಶಾಲ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಆದರೆ ಆತನನ್ನು ಬಂಧಿಸಿ ನಾಗ್​ಪುರ ಸೆಂಟ್ರಲ್ ಜೈಲಿಗೆ ಕಳಿಸಲಾಗಿದೆ. ವರದಿಗಳ ಪ್ರಕಾರ ಶೀಘ್ರವೇ ಆತನನ್ನು ನಾಸಿಕ್ ಜೈಲಿಗೆ ಶಿಫ್ಟ್ ಮಾಡಲಾಗುವುದು. ಆತ ಅಲ್ಲು ಅರ್ಜುನ್ ಅವರ ಅಪ್ಪಟ ಅಭಿಮಾನಿ ಎಂದು ಕೂಡ ಹೇಳಲಾಗುತ್ತಿದೆ. ಆ ಕಾರಣದಿಂದಲೇ ಆತ ಸಿನಿಮಾ ನೋಡಲು ರಿಸ್ಕ್ ತೆಗೆದುಕೊಂಡು ಚಿತ್ರಮಂದಿರಕ್ಕೆ ಬಂದಿದ್ದ.

ಇದನ್ನೂ ಓದಿ: 1 ಕೋಟಿ ರೂ. ಪರಿಹಾರ ಕೊಡುವಂತೆ ಒತ್ತಾಯಿಸಿ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ

‘ಪುಷ್ಪ 2’ ಸಿನಿಮಾ ವಿಶ್ವಾದ್ಯಂತ 1500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಅಲ್ಲು ಅರ್ಜುನ್ ಅವರ ವೃತ್ತಿ ಜೀವನಕ್ಕೆ ಈ ಚಿತ್ರದಿಂದ ದೊಡ್ಡ ಮೈಲೇಜ್ ಸಿಕ್ಕಿದೆ. ರಶ್ಮಿಕಾ ಮಂದಣ್ಣ ಕೂಡ ಮಿಂಚಿದ್ದಾರೆ. ನಿರ್ದೇಶಕ ಸುಕುಮಾರ್​ ಅವರ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 4:48 pm, Mon, 23 December 24