AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರುಣವಾಗಿ ಕುಸಿದ ‘ರಾಜಾ ಸಾಬ್’ ಗಳಿಕೆ, ‘ಆದಿಪುರುಷ್’, ‘ಸಾಹೋ’ಗಿಂತಲೂ ಕಳಪೆ

The Raja Saab collection: ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಮೊದಲ ದಿನ ಸುಮಾರು 112 ಕೋಟಿಗೂ ಹೆಚ್ಚಿನ ಮೊತ್ತವನ್ನು ಗಳಿಕೆ ಮಾಡಿತ್ತು. ಆದರೆ ಮೊದಲ ದಿನ ಸಿನಿಮಾ ನೋಡಿದವರು ನೆಗೆಟಿವ್ ಅಭಿಪ್ರಾಯಗಳನ್ನು ಹಂಚಿಕೊಂಡರು. ಬಹಳ ಕ್ರಿಂಜ್ ಆದ ಕತೆ, ದೃಶ್ಯಗಳನ್ನು ಸಿನಿಮಾ ಹೊಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಯ್ತು. ಇದೇ ಕಾರಣಕ್ಕೆ ಎರಡನೇ ದಿನದಿಂದಲೇ ಸಿನಿಮಾದ ಕಲೆಕ್ಷನ್ ಕುಸಿಯಲು ಆರಂಭಿಸಿತು. ಬಿಡುಗಡೆ ಆದ ಮೂರೇ ದಿನಕ್ಕೆ ಸಿನಿಮಾದ ಗಳಿಕೆಯಲ್ಲಿ 88% ಕುಸಿತ ಕಂಡಿದೆ.

ಧಾರುಣವಾಗಿ ಕುಸಿದ ‘ರಾಜಾ ಸಾಬ್’ ಗಳಿಕೆ, ‘ಆದಿಪುರುಷ್’, ‘ಸಾಹೋ’ಗಿಂತಲೂ ಕಳಪೆ
The Raja Saab
ಮಂಜುನಾಥ ಸಿ.
|

Updated on: Jan 13, 2026 | 12:32 PM

Share

ಪ್ರಭಾಸ್ (Prabhas) ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಜನವರಿ 09ರಂದು ಬಿಡುಗಡೆ ಆಗಿತ್ತು. ಪ್ರಭಾಸ್ ಅವರ ಈ ಹಿಂದಿನ ಸಿನಿಮಾಗಳ ರೀತಿಯೇ ಬಿಡುಗಡೆ ಆದ ಮೊದಲ ದಿನ ಭಾರಿ ಗಳಿಕೆಯನ್ನು ಸಿನಿಮಾ ಮಾಡಿತ್ತು. ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 112 ಕೋಟಿಗೂ ಹೆಚ್ಚಿನ ಮೊತ್ತವನ್ನು ಸಿನಿಮಾ ಗಳಿಕೆ ಮಾಡಿತ್ತು. ಆದರೆ ಎರಡನೇ ದಿನದಿಂದಲೇ ಸಿನಿಮಾದ ಉರುಳುವಿಕೆ ಪ್ರಾರಂಭವಾಯ್ತು. ಸಿನಿಮಾ ನೋಡಿದವರು ನೆಗೆಟಿವ್ ಅಭಿಪ್ರಾಯಗಳನ್ನು ಹಂಚಿಕೊಂಡರು. ಬಹಳ ಕ್ರಿಂಜ್ ಆದ ಕತೆ, ದೃಶ್ಯಗಳನ್ನು ಸಿನಿಮಾ ಹೊಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಯ್ತು. ಇದೇ ಕಾರಣಕ್ಕೆ ಎರಡನೇ ದಿನದಿಂದಲೇ ಸಿನಿಮಾದ ಕಲೆಕ್ಷನ್ ಕುಸಿಯಲು ಆರಂಭಿಸಿತು. ಬಿಡುಗಡೆ ಆದ ಮೂರೇ ದಿನಕ್ಕೆ ಸಿನಿಮಾದ ಗಳಿಕೆಯಲ್ಲಿ 88% ಕುಸಿತ ಕಂಡಿದೆ.

ಮೊದಲ ದಿನ 112 ಕೋಟಿ ಗಳಿಕೆ ಮಾಡಿದ್ದ ‘ದಿ ರಾಜಾ ಸಾಬ್’ ಸಿನಿಮಾ ಮೂರು ದಿನದ ಬಳಿಕ ಸೋಮವಾರ ಗಳಿಸಿರುವುದು ಕೇವಲ 6 ಕೋಟಿ ರೂಪಾಯಿ. ಆಂಧ್ರ, ತೆಲಂಗಾಣಗಳಲ್ಲಿ ಈಗ ಸಂಕ್ರಾಂತಿ ರಜೆಗಳು ಚಾಲ್ತಿಯಲ್ಲಿವೆ ಹಾಗಿದ್ದರೂ ಸಹ ‘ದಿ ರಾಜಾ ಸಾಬ್’ ಸಿನಿಮಾ ಜನರನ್ನು ಸೆಳೆಯಲು ವಿಫಲವಾಗಿದೆ. ಮೂರನೇ ದಿನಕ್ಕೆ ಸಿನಿಮಾದ ಗಳಿಕೆಯಲ್ಲಿ ಭಾರಿ ದೊಡ್ಡ ಇಳಿಕೆ ಕಂಡು ಬಂದಿದ್ದು, ಪ್ರಭಾಸ್ ಅವರ ಈ ಹಿಂದಿನ ಫ್ಲಾಪ್​​ಗಳಾದ ‘ಆದಿಪುರುಷ್’ ಮತ್ತು ‘ಸಾಹೋ’ ಸಿನಿಮಾಗಳಿಗಿಂತಲೂ ಕಳಪೆ ಆಗಿದೆ ‘ದಿ ರಾಜಾ ಸಾಬ್’ ಸಿನಿಮಾದ ಗಳಿಕೆ.

ಇದನ್ನೂ ಓದಿ:ಶಬರಿಮಲೆಗೆ ಹೋಗಿ ಬಂದ, ಬಳಿಕ ಪತ್ನಿ ಕೊಂದ: ಸಿನಿಮಾ ಸ್ಟೈಲ್​​ನಲ್ಲಿ ನಡೀತು ಹತ್ಯೆ!

ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 112 ಕೋಟಿ ಗಳಿಸಿದ್ದ ರಾಜಾ ಸಾಬ್. ಎರಡನೇ ದಿನ ಅಂದರೆ ಶನಿವಾರ ಭಾರತ ಬಾಕ್ಸ್ ಆಫೀಸ್​​ನಲ್ಲಿ 30 ಕೋಟಿ ರೂಪಾಯಿ ಗಳಿಸಿತು. ಬಳಿಕ ಭಾನುವಾರ ಈ ಕಲೆಕ್ಷನ್ ಇನ್ನಷ್ಟು ತಗ್ಗಿ 22 ಕೋಟಿಗೆ ಬಂತು. ಬಳಿಕ ಸೋಮವಾರದ ಕಲೆಕ್ಷನ್ ಅಂತೂ ಇನ್ನು ಧಾರುಣವಾಗಿ ಕುಸಿದಿದ್ದು ಕೇವಲ 4 ಕೋಟಿ ಗಳಿಕೆ ಮಾಡಿದೆ. ವಿದೇಶಿ ಕಲೆಕ್ಷನ್ ಸೇರಿದಂತೆ ಸುಮಾರು 6 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಆ ಮೂಲಕ ಪ್ರಭಾಸ್ ಅವರ ಇತ್ತೀಚೆಗಿನ ಫ್ಲಾಪ್​​ಗಳಲ್ಲಿಯೇ ಧಾರುಣ ಫ್ಲಾಪ್ ಆಗುವತ್ತ ದಾಪುಗಾಲು ಹಾಕುತ್ತಿದೆ ‘ದಿ ರಾಜಾ ಸಾಬ್’ ಸಿನಿಮಾ.

‘ದಿ ರಾಜಾ ಸಾಬ್’ ಸಿನಿಮಾನಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಕಾಮಿಡಿ ಹಾರರ್ ಕತೆ ಒಳಗೊಂಡಿದೆ. ಸಿನಿಮಾನಲ್ಲಿ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್, ರಿದ್ಧಿ ಕುಮಾರ್ ನಾಯಕಿಯರು. ಸಿನಿಮಾ ನಿರ್ದೇಶನ ಮಾಡಿರುವುದು ಮಾರುತಿ. ಸಿನಿಮಾನಲ್ಲಿ ಸಂಜಯ್ ಮತ್ತು ಬೊಮನ್ ಇರಾನಿ ಅಂಥಹಾ ಪ್ರತಿಭಾವಂತ ನಟರೂ ಸಹ ಇದ್ದಾರೆ. ಸಿನಿಮಾ ಬಿಡುಗಡೆಗೆ ಮುಂಚೆ ಮಾತನಾಡಿದ್ದ ನಿರ್ದೇಶಕ ಮಾರುತಿ, ಭಾರತೀಯ ಚಿತ್ರರಂಗದಲ್ಲೇ ಯಾರೂ ತೆಗೆಯದ ರೀತಿ ನಾವು ಹಾರರ್ ಸಿನಿಮಾ ಮಾಡಿದ್ದೀವಿ ಎಂದಿದ್ದರು. ಭಾರಿ ಭರವಸೆಯನ್ನು ಸಿನಿಮಾ ಬಗ್ಗೆ ವ್ಯಕ್ತಪಡಿಸಿದ್ದರು ಆದರೆ ಇದೀಗ ಸಿನಿಮಾ ಫ್ಲಾಪ್ ಆಗುವ ಸೂಚನೆ ದಟ್ಟವಾಗಿ ಕಾಣುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Live: ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ
Live: ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ
ಮೈಸೂರು ದಸರಾಗೆ ಕ್ಷಣಗಣನೆ: ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬಕ್ಕೆ ಚಾಲನೆ
ಮೈಸೂರು ದಸರಾಗೆ ಕ್ಷಣಗಣನೆ: ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬಕ್ಕೆ ಚಾಲನೆ
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ