ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ‘ಕಲ್ಕಿ 2898 ಎಡಿ’ ಟೀಂ

| Updated By: ಮಂಜುನಾಥ ಸಿ.

Updated on: Mar 19, 2025 | 10:48 PM

Kalki 2898 AD: ಪ್ರಭಾಸ್ ನಟನೆಯ ಫ್ಯಾಂಟಸಿ ಸಿನಿಮಾ ‘ಕಲ್ಕಿ 2898 ಎಡಿ’ ಬಾಕ್ಸ್ ಆಫೀಸ್​ನಲ್ಲಿ ಭಾರಿ ಹಿಟ್ ಆಗಿತ್ತು. ಆ ಸಿನಿಮಾನಲ್ಲಿ ಪ್ರಭಾಸ್​ಗೆ ತುಸು ಕಡಿಮೆ ಸ್ಕ್ರೀನ್ ಸ್ಪೇಸ್ ಇದೆಯೆಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಇದೀಗ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದಲ್ಲಿ ಪ್ರಭಾಸ್​ಗೆ ಬಹಳ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಇದೆಯೆಂದು ನಿರ್ದೇಶಕರು ಹೇಳಿದ್ದಾರೆ.

ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ‘ಕಲ್ಕಿ 2898 ಎಡಿ’ ಟೀಂ
Prabhas
Follow us on

ಪ್ರಭಾಸ್ (Prabhas) ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಚಿತ್ರದ ಮೂಲಕ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಆದರೆ, ಪ್ರಭಾಸ್​ಗೆ ಹೆಚ್ಚು ಸ್ಕ್ರೀನ್​ಸ್ಪೇಸ್ ಸಿಕ್ಕಿಲ್ಲ ಎಂದು ಕೆಲವರು ಟೀಕೆ ಮಾಡಿದ್ದು ಇದೆ. ಈಗ ಸೀಕ್ವೆಲ್ ಶೂಟ್​ಗೆ ಸಿದ್ಧತೆ ನಡೆಯುತ್ತಿದೆ. ಈ ಪಾರ್ಟ್​ನಲ್ಲಿ ಪ್ರಭಾಸ್​ಗೆ ಹೆಚ್ಚಿನ ಸ್ಕ್ರೀನ್​ಸ್ಪೇಸ್ ಕೊಡಲಾಗುವುದು ಎಂದು ನಾಗ್ ಅಶ್ವಿನ್ ಅವರು ಭರವಸೆ ಕೊಟ್ಟಿದ್ದಾರೆ. ಈ ವಿಚಾರ ಕೇಳಿ ಪ್ರಭಾಸ್ ಅಭಿಮಾನಿಗಳು ಸಂತೋಷಗೊಂಡಿದ್ದಾರೆ.

ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಸಿನಿಮಾ ನಿರ್ದೇಶನ ಮಾಡಿದರು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸಾವಿರ ಕೋಟಿ ರೂಪಾಯಿ ಬಿಸ್ನೆ ಮಾಡಿದೆ. ಈ ಚಿತ್ರದಿಂದ ಅವರು ದೊಡ್ಡ ಮಟ್ಟದಲ್ಲಿ ಗೆದ್ದರು. ಸತತ ಸೋಲಿನಿಂದ ಕಂಗೆಟ್ಟಿದ್ದ ಪ್ರಭಾಸ್ ಕೂಡ ಈ ಚಿತ್ರದಿಂದ ಗೆದ್ದು ಬೀಗಿದರು. ಈಗ ಎರಡನೇ ಪಾರ್ಟ್​ನ ಕಥೆ ಪ್ರಭಾಸ್ ಮೇಲೆ ಹೆಚ್ಚು ಸಾಗಲಿದೆಯಂತೆ.

ಮೊದಲ ಭಾಗದಲ್ಲಿ ಅಮಿತಾಭ್ ಬಚ್ಚನ್ ಅವರ ಪಾತ್ರ ಹೆಚ್ಚು ಹೈಲೈಟ್ ಆಗಿತ್ತು. ಭೈರವನಾಗಿ ಮಿಂಚಿದ್ದರು. ‘ಎರಡನೇ ಪಾರ್ಟ್​ನಲ್ಲಿ ಪ್ರಭಾಸ್ ಪಾತ್ರ ಹೆಚ್ಚು ಹೈಲೈಟ್ ಆಗಲಿದೆ. ಅವರು ತೆರೆಮೇಲೆ ಹೆಚ್ಚು ಹೊತ್ತು ಕಾಣಿಸಿಕೊಳ್ಳುತ್ತಾರೆ. ಮೊದಲ ಭಾಗ ಕೇವಲ ಪಾತ್ರ ಪರಿಚಯ ಮಾಡೋದು ಆಗಿತ್ತು. ಅದು ಈಗ ಪೂರ್ಣಗೊಂಡಿದೆ. ಕರ್ಣ ಹಾಗೂ ಭೈರವನ ಆ್ಯಂಗಲ್​ನಲ್ಲಿ ಎರಡನೇ ಪಾರ್ಟ್ ಸಾಗಲಿದೆ. ನಾವು ಎರಡನೇ ಪಾರ್ಟ್​ನಲ್ಲಿ ಇದರ ಮೇಲೆ ಹೆಚ್ಚು ಗಮನ ಹರಿಸುತ್ತೇವೆ ಎಂದಿದ್ದಾರೆ ನಾಗ್ ಅಶ್ವಿನ್.

ಇದನ್ನೂ ಓದಿ:ಪ್ರಭಾಸ್ ಮುತ್ತು ಕೊಡುತ್ತಿರುವ ಈ ಯುವತಿ ಯಾರು ಗೊತ್ತೆ?

ಈ ಮೊದಲು ಮಾತನಾಡಿದ್ದ ಕೆಲವರು ಪ್ರಭಾಸ್ ಪಾತ್ರವನ್ನು ಹೀಯಾಳಿಸಿದ್ದರು. ಅವರದ್ದು ಜೋಕರ್ ಪಾತ್ರ ಎಂದು ಟೀಕೆ ಮಾಡಿದ್ದರು. ಇದನ್ನು ನಾಗ್ ಅಶ್ವಿನ್ ಅವರು ಗಂಭೀರವಾಗಿ ಸ್ವೀಕರಿಸಿದ್ದರು. ಈ ಪಾತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲು ಅವರು ನಿರ್ಧರಿಸಿದ್ದಾರೆ.

ಪ್ರಭಾಸ್ ಅವರು ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡಿದ್ದಾರೆ. ‘ರಾಜಾ ಸಾಬ್’ ಸಿನಿಮಾ ಕೆಲಸಗಳು ಪೂರ್ಣಗೊಂಡಿವೆ. ಅಲ್ಲದೆ, ‘ಸ್ಪಿರಿಟ್’, ‘ಸಲಾರ್ 2’ ಚಿತ್ರದ ಕೆಲಸಗಳಲ್ಲೂ ಅವರು ಬ್ಯುಸಿ ಆಗಬೇಕಿದೆ. ಇದರ ಜೊತೆ ಅವರು ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ ಕೆಲಸವನ್ನೂ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ