ಪ್ರಶಾಂತ್ ನೀಲ್ ನಿರ್ದೇಶನದ ಹಿಟ್ ಚಿತ್ರ ರೀ-ರಿಲೀಸ್; ಅಡ್ವಾನ್ಸ್ ಬುಕಿಂಗ್‌ನಲ್ಲಿ ಕೋಟಿ ದಾಟಿದ ಗಳಿಕೆ
ಪ್ರಶಾಂತ್ ನೀಲ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ಒಂದು ಮರುಬಿಡುಗಡೆಯಾಗುತ್ತಿದೆ. ಅಡ್ವಾನ್ಸ್ ಬುಕಿಂಗ್‌ನಲ್ಲಿ ದಾಖಲೆಯನ್ನು ಬರೆದಿರುವ ಈ ಚಿತ್ರವು ಒಂದು ಕೋಟಿ ರೂಪಾಯಿಗೂ ಅಧಿಕ ಗಳಿಕೆಯನ್ನು ಈಗಾಗಲೇ ಮಾಡಿದೆ. ಹೊಸ ಸಿನಿಮಾಗಳು ಹೆಚ್ಚು ಬಿಡುಗಡೆ ಆಗದೆ ಇರುವುದರಿಂದ ಹಲವು ಚಿತ್ರಗಳು ಮರುಬಿಡುಗಡೆಯಾಗುತ್ತಿದೆ.

ಪ್ರಶಾಂತ್ ನೀಲ್ (Prashanth Neel) ಅವರು ಮಾಡಿರುವುದು ಕೆಲವೇ ಕೆಲವು ಸಿನಿಮಾಗಳು. ಅವರು ಮಾಡಿರುವ ಎಲ್ಲಾ ಚಿತ್ರಗಳು ಹಿಟ್ ಆಗಿವೆ. ಈಗ ಅವರ ನಿರ್ದೇಶನದ ‘ಸಲಾರ್: ಪಾರ್ಟ್ 1- ಸೀಸ್ಫೈಯರ್’ ರೀ-ರಿಲೀಸ್ ಆಗುತ್ತಿದೆ. ಮಾರ್ಚ್ 21ರಿಂದ ಸಿನಿಮಾ ಥಿಯೇಟರ್ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಸಿನಿಮಾ ಅಡ್ವಾನ್ಸ್ ಬುಕಿಂಗ್‌ನಲ್ಲಿ ದಾಖಲೆ ಬರೆದಿದೆ. ಇದರ ಪ್ರಕಾರ ಚಿತ್ರಕ್ಕೆ ಈಗಾಗಲೇ ಒಂದು ಕೋಟಿ ರೂಪಾಯಿ ಹರಿದು ಬಂದಿದೆ ಎಂದು ವರದಿ ಆಗಿದೆ.
ಕಳೆದ ಕೆಲ ದಿನಗಳ ಹಿಂದೆ ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಆರಂಭಿಸಲಾಗಿತ್ತು. ತೆಲಂಗಾಣ ಹಾಗೂ ಆಂಧ್ರ ಭಾಗದಲ್ಲಿ ಬರೋಬ್ಬರಿ 55 ಸಾವಿರಕ್ಕೂ ಅಧಿಕ ಟಿಕೆಟ್ಗಳು ಈವರೆಗೆ ಮಾರಾಟ ಆಗಿವೆ. ಮೊದಲ ದಿನದ ಬುಕಿಂಗ್ ಗಮನಿಸಿದರೆ ಸಿನಿಮಾ ಒಂದು ಕೋಟಿ ರೂಪಾಯಿ ಗಳಿಕೆ ಮಾಡೋದು ಪಕ್ಕಾ ಆಗಿದೆ. ಈ ಮೂಲಕ ರೀ-ರಿಲೀಸ್ನಲ್ಲಿ ಸಿನಿಮಾ ದಾಖಲೆ ಬರೆಯಲು ರೆಡಿ ಆಗಿದೆ. ಬೆಂಗಳೂರಿನಲ್ಲಿ ಚಿತ್ರದ ಟಿಕೆಟ್ ದರ 100-200 ರೂಪಾಯಿ ಆಸುಪಾಸಿನಲ್ಲಿ ಇದೆ.
ಸದ್ಯ ಯಾವುದೇ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಬಿಡುಗಡೆ ಕಂಡ ಸಿನಿಮಾಗಳು ಜನರನ್ನು ಆಕರ್ಷಿಸಲು ವಿಫಲವಾಗುತ್ತಿವೆ. ಈ ಕಾರಣಕ್ಕೆ ಹಲವು ಚಿತ್ರಗಳು ರೀ-ರಿಲೀಸ್ ಆಗುತ್ತಿವೆ. ಇತ್ತೀಚೆಗೆ ಕನ್ನಡದ ‘ಅಪ್ಪು’ ಸಿನಿಮಾ ಮರುಬಿಡುಗಡೆ ಕಂಡು ಕೋಟಿ ರೂಪಾಯಿಗೂ ಮೇಲೆ ಬಿಸ್ನೆಸ್ ಮಾಡಿದೆ.
‘ಸಲಾರ್’ ಸಿನಿಮಾ 2023ರ ಡಿಸೆಂಬರ್ 22ರಂದು ರಿಲೀಸ್ ಆಯಿತು. ಈ ಸಿನಿಮಾ ಹಿಟ್ ಎನಿಸಿಕೊಂಡಿತು. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಇದ್ದರೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ. ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಬಾಬಿ ಸಿಂಹ ಮೊದಲಾದವರು ನಟಿಸಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 600+ ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಇದನ್ನೂ ಓದಿ: ಜಪಾನ್ ಬಾಕ್ಸ್ ಆಫೀಸ್ ದೂಳೆಬ್ಬಿಸಿದ ‘ಕಲ್ಕಿ’, ‘ಜವಾನ್’, ‘ಸಲಾರ್’ ದಾಖಲೆ ಪುಡಿ
ಹಾಗಾದರೆ ಈ ಚಿತ್ರ ರೀ-ರಿಲೀಸ್ ಆಗುತ್ತಿರುವುದೇಕೆ? ಇದಕ್ಕೆ ತಂಡದವರು ಸ್ಪಷ್ಟನೆ ಕೊಟ್ಟಿಲ್ಲ. ಇನ್ನೂ ‘ಸಲಾರ್ 2’ ಸಿನಿಮಾ ಕೆಲಸಗಳು ಆರಂಭ ಆಗಿಲ್ಲ. ಸೀಕ್ವೆಲ್ ರೆಡಿ ಆಗಿ ರಿಲೀಸ್ ಆಗುವ ಸಂದರ್ಭದಲ್ಲಿ ಮತ್ತೊಮ್ಮೆ ಈ ಚಿತ್ರವನ್ನು ಮರುಬಿಡುಗಡೆ ಮಾಡುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.