
ಪ್ರಭಾಸ್ (Prabhas) ಪ್ಯಾನ್ ಇಂಡಿಯಾ ಸ್ಟಾರ್. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಪ್ರಭಾಸ್ಗೆ ಇರುವಷ್ಟು ಅಭಿಮಾನಿಗಳು ಇನ್ಯಾರಿಗೂ ಇಲ್ಲವೇನೊ. ಪ್ರಭಾಸ್ ನಟನೆಯ ಸಿನಿಮಾಗಳು ಸೋತರೂ ನೂರಾರು ಕೋಟಿ ಗಳಿಸುತ್ತವೆ. ಅಷ್ಟು ದೊಡ್ಡ ಅಭಿಮಾನಿ ಬಳಗ ಅವರದ್ದು. ಪ್ರಭಾಸ್ ಭಾರತೀಯ ಚಿತ್ರರಂಗದ ಟಾಪ್ ಸ್ಟಾರ್ ಆಗಿರುವ ಜೊತೆಗೆ ಭಾರತದ ಎಲಿಜಿಬಲ್ ಬ್ಯಾಚುಲರ್ ಸಹ. ವಯಸ್ಸು 45 ಆಗಿದ್ದರೂ ಸಹ ಇನ್ನೂ ಮದುವೆ ಆಗಿಲ್ಲ ನಟ ಪ್ರಭಾಸ್. ಆದರೆ ಇದೀಗ ಪ್ರಭಾಸ್ ಮದುವೆ ಬಗ್ಗೆ ಅವರ ಕುಟುಂಬದವರೇ ಮಾತನಾಡಿದ್ದಾರೆ.
ಪ್ರಭಾಸ್ ಅವರ ದೊಡ್ಡಮ್ಮ ಶ್ಯಾಮಲಾ ದೇವಿ ಅವರು ಇತ್ತೀಚೆಗೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅವರು ಪ್ರಭಾಸ್ ಮದುವೆ ಬಗ್ಗೆ ಪ್ರಸ್ತಾಪ ಮಾಡಿದರು. ಪ್ರಭಾಸ್ ಮೇಲೆ ಅವರ ದೊಡ್ಡಪ್ಪ ಕೃಷ್ಣಂರಾಜು ಅವರ ಆಶೀರ್ವಾದ ಇದ್ದೇ ಇದೆ. ಇದೀಗ ಪ್ರಭಾಸ್ ಮದುವೆ ಶೀಘ್ರವಾಗಿ ಆಗಬೇಕೆಂದು ಕುಟುಂಬದಲ್ಲಿ ಎಲ್ಲರೂ ಕೋರಿಕೊಳ್ಳುತ್ತಿದ್ದೇವೆ. ಆ ದೇವರ ಆಜ್ಞೆಯ ಅನುಸಾರ ಮದುವೆ ನಡೆಯಲಿದೆ’ ಎಂದಿದ್ದಾರೆ.
‘ಪ್ರಭಾಸ್ ಮದುವೆ ಖಂಡಿತ ನಡೆಯುತ್ತದೆ. ಆದಷ್ಟು ಶೀಘ್ರವೇ ಕಲ್ಯಾಣ ನಡೆಯಲಿ ಎಂಬುದೇ ಎಲ್ಲರ ಕೋರಿಕೆ ಆಗಿದೆ. ನಮಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಅವರಿಗೂ ಮದುವೆ ಮಾಡುವ ಆಲೋಚನೆ ಇದೆ. ಪ್ರಭಾಸ್ ಮದುವೆಗೆ ಖಂಡಿತವಾಗಿಯೂ ಮಾಧ್ಯಮಗಳವರಿಗೂ ತಿಳಿಸಿ, ನಮ್ಮ ಮನಸ್ಸುಗಳಿಗೆ ತೃಪ್ತಿ ಆಗುವ ರೀತಿಯಲ್ಲಿ ಮದುವೆ ಮಾಡುತ್ತೇವೆ’ ಎಂದಿದ್ದಾರೆ.
ಇದನ್ನೂ ಓದಿ:ಪ್ರಭಾಸ್ ಅಭಿಮಾನಿಗಳಿಗೆ ಮತ್ತೆ ನಿರಾಸೆ, ‘ರಾಜಾ ಸಾಬ್’ ಬಿಡುಗಡೆ ಬಲು ದೂರ
ಪ್ರಭಾಸ್ ಅವರ ದೊಡ್ಡಪ್ಪ ಕೃಷ್ಣಂರಾಜು ತೆಲುಗು ಚಿತ್ರರಂಗದ ಹಿರಿಯ ಸ್ಟಾರ್ ನಟ ಆಗಿದ್ದವರು. ಕೃಷ್ಣಂರಾಜು ಅವರನ್ನು ರೆಬಲ್ ಸ್ಟಾರ್ ಎಂದು ಕರೆಯಲಾಗುತ್ತಿತ್ತು. ಅದೇ ಉಪನಾಮವನ್ನು ಪ್ರಭಾಸ್ ಅವರಿಗೂ ನೀಡಲಾಯ್ತು. ದೊಡ್ಡಪ್ಪಮ ಮೇಲೆ ಪ್ರಭಾಸ್ಗೆ ಬಲು ಪ್ರೀತಿ. ಪ್ರಭಾಸ್ ನಾಯಕನಾಗಿ ನಟಿಸಿದ ಕೆಲವಾರು ಸಿನಿಮಾಗಳಲ್ಲಿ ಕೃಷ್ಣಂರಾಜು ಸಹ ನಟಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಕೃಷ್ಣಂರಾಜು ನಿಧನ ಹೊಂದಿದರು. ಆಗಿನಿಂದಲೂ ಪ್ರಭಾಸ್ ಅವರೇ ಕೃಷ್ಣಂರಾಜು ಕುಟುಂಬದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಕೃಷ್ಣಂರಾಜು ಅವರಿಗೆ ಮೂವರು ಹೆಣ್ಣು ಮಕ್ಕಳು ಇದ್ದಾರೆ.
ಪ್ರಭಾಸ್ ಮದುವೆ ಸುದ್ದಿ ಆಗಾಗ್ಗೆ ಹರಿದಾಡುತ್ತಿರುತ್ತದೆ. ಪ್ರಭಾಸ್ ಹೆಸರು ಹಲವು ನಟಿಯರ ಜೊತೆಗೆ ಕೇಳಿ ಬಂದಿದೆ ಆದರೆ ಪ್ರಭಾಸ್ ಸಂಬಂಧ ಯಾರೊಂದಿಗೂ ಖಾತ್ರಿ ಆಗಿಲ್ಲ. ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆ ಆಗಿಯೇ ಬಿಟ್ಟರು ಎಂಬಂತೆ ಸುದ್ದಿ ಹರಡಿತ್ತು ಆದರೆ ಅದೂ ಸಹ ಸುಳ್ಳಾಯ್ತು. ಆ ನಂತರ ಶ್ರದ್ಧಾ ಕಪೂರ್ ಜೊತೆಗೂ ಪ್ರಭಾಸ್ ಹೆಸರು ಹರಿದಾಡಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Tue, 12 August 25