ಪ್ರಭಾಸ್ ಸಿನಿಮಾದಿಂದ ಹೊರಬಂದ ಪ್ರಕಾಶ್ ರೈ: ಕಾರಣವೇನು?

Spirit movie: ಪ್ರಕಾಶ್ ರೈ ಇದೀಗ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾದಿಂದ ಹೊರಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಅದುವೇ ಪ್ರಭಾಸ್ ನಟನೆಯ ‘ಸ್ಪಿರಿಟ್’. ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜೊತೆಗಿನ ಭಿನ್ನಾಭಿಪ್ರಾಯವೇ ಈ ನಿರ್ಧಾರಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪ್ರಭಾಸ್ ಸಿನಿಮಾದಿಂದ ಹೊರಬಂದ ಪ್ರಕಾಶ್ ರೈ: ಕಾರಣವೇನು?
Spirit Movie

Updated on: Feb 28, 2026 | 3:01 PM

ಪ್ರಕಾಶ್ ರೈ (Prakash Raj) ಭಾರತದ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರು. ಭಾಷೆಯ ಹಂಗಿಲ್ಲದೆ ಹಲವಾರು ಭಾಷೆಗಳಲ್ಲಿ ಪೋಷಕ ನಟ, ವಿಲನ್ ಹೀಗೆ ಹಲವಾರು ಪಾತ್ರಗಳಲ್ಲಿ ಪ್ರಕಾಶ್ ರೈ ನಟಿಸುತ್ತಾ ಬರುತ್ತಿದ್ದಾರೆ. ಆದರೆ ಪ್ರಕಾಶ್ ರೈ ಇದೀಗ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾದಿಂದ ಹೊರಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಅದುವೇ ಪ್ರಭಾಸ್ ನಟನೆಯ ‘ಸ್ಪಿರಿಟ್’. ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜೊತೆಗಿನ ಭಿನ್ನಾಭಿಪ್ರಾಯವೇ ಈ ನಿರ್ಧಾರಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಸಲಿಗೆ ಪ್ರಕಾಶ್ ರೈ ‘ಸ್ಪಿರಿಟ್’ ಸಿನಿಮಾದಿಂದ ಹೊರ ಬಂದಿದ್ದಾರೆಂದು ಮೂರು ವಾರಗಳು ಹಿಂದೆಯೇ ಸುದ್ದಿ ಹರಡಿತ್ತು, ಆದರೆ ಆಗ ಟ್ವೀಟ್ ಮಾಡಿದ್ದ ಪ್ರಕಾಶ್ ರೈ, ‘ಸುಳ್ಳು ಸುದ್ದಿ ಹಬ್ಬಿಸಬೇಡಿ, ನನ್ನ ಪಾತ್ರದ ಶೂಟಿಂಗ್ ಇನ್ನೂ ಶುರುವೇ ಆಗಿಲ್ಲ’ ಎಂದಿದ್ದರು. ಆ ಮೂಲಕ ತಾವಿನ್ನೂ ಸಿನಿಮಾ ತಂಡದ ಜೊತೆಗೆ ಇದ್ದೀವಿ ಎಂದಿದ್ದರು. ಆದರೆ ಇದೀಗ ಬಂದಿರುವ ಸುದ್ದಿಯಂತೆ ಪ್ರಕಾಶ್ ರೈ ಅವರು ‘ಸ್ಪಿರಿಟ್’ ಸಿನಿಮಾದಿಂದ ಹೊರಬಂದಿರುವುದು ಖಾತ್ರಿ ಎನ್ನಲಾಗಿದೆ.

‘ಸ್ಪಿರಿಟ್’ ಸಿನಿಮಾ ತಂಡವು ಇತ್ತೀಚೆಗಷ್ಟೆ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದು, ಪೋಸ್ಟರ್​​ ಜೊತೆಗೆ ಸಿನಿಮಾದ ಮುಖ್ಯ ನಟರುಗಳು, ತಂತ್ರಜ್ಞರ ಇನ್​​ಸ್ಟಾಗ್ರಾಂ ಹ್ಯಾಂಡಲ್ ಅನ್ನು ಸಹ ಹಾಕಲಾಗಿದೆ. ಆದರೆ ಅದರಲ್ಲಿ ಪ್ರಕಾಶ್ ರೈ ಹೆಸರನ್ನು ಕೈಬಿಡಲಾಗಿದೆ. ಇದು ಪ್ರಕಾಶ್ ರೈ ಅವರು ಸಿನಿಮಾದಿಂದ ಹೊರಬಂದಿರುವ ಅನುಮಾನಗಳನ್ನು ಮೂಡಿಸಿದೆ. ಅಲ್ಲದೆ ಪ್ರಕಾಶ್ ರೈ ಅವರು ‘ಸ್ಪಿರಿಟ್’ ತಂಡದಲ್ಲಿಲ್ಲವೆಂದು ಚಿತ್ರತಂಡದಿಂದ ಮಾಹಿತಿ ಬಂದಿರುವುದಾಗಿ ಕೆಲ ಮಾಧ್ಯಮಗಳು ವರದಿ ಸಹ ಮಾಡಿವೆ.

ಇದನ್ನೂ ಓದಿ:ಸಚಿವ ಎಂಬಿ ಪಾಟೀಲ್​ಗೆ ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಟಾಂಗ್

‘ಸ್ಪಿರಿಟ್’ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರೊಟ್ಟಿಗಿನ ಭಿನ್ನಾಭಿಪ್ರಾಯವೇ ಪ್ರಕಾಶ್ ರೈ ಅವರ ನಿರ್ಗಮನಕ್ಕೆ ಕಾರಣ ಎನ್ನಲಾಗಿದೆ. ತಮಗೆ ನೀಡಲಾಗಿದ್ದ ಸೀನ್​​ನ ಬಗ್ಗೆ ಪ್ರಕಾಶ್ ರೈ ಆಕ್ಷೇಪ ವ್ಯಕ್ತಪಡಿಸಿದ ಕಾರಣಕ್ಕೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಬಳಿಕ ಪ್ರಕಾಶ್ ರೈ ಅವರು ಸಿನಿಮಾದಿಂದ ನಿರ್ಗಮಿಸಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ದೀಪಿಕಾ ಪಡುಕೋಣೆ ಸಹ ‘ಸ್ಪಿರಿಟ್’ ಸಿನಿಮಾದಿಂದ ಹೊರಬಂದಿದ್ದರು. ಅವರು ‘ಸ್ಪಿರಿಟ್’ ಸಿನಿಮಾದ ನಾಯಕಿಯಾಗಿ ಆಯ್ಕೆ ಆಗಿದ್ದರು, ಅವರ ಸಂಭಾವನೆ ಮತ್ತು ಶಿಸ್ತಿನ ನಿಯಮಗಳ ಕಾರಣದಿಂದ ಅವರನ್ನು ಸಿನಿಮಾದಿಂದ ಕೈಬಿಡಲಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us