AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ ಬೆದರಿಕೆ ಬೇಡ’: ಪವನ್ ಕಲ್ಯಾಣ್ ಸಹೋದರನಿಗೆ ಪ್ರಕಾಶ್ ರೈ ಎಚ್ಚರಿಕೆ

Prakash Raj movie: ಪ್ರಕಾಶ್ ರೈ ಮೊದಲಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರು. ರಾಜಕೀಯ ವಿಷಯಗಳ ಬಗ್ಗೆ ‘ಜಸ್ಟ್ ಆಸ್ಕಿಂಗ್’ ಹ್ಯಾಷ್ ಟ್ಯಾಗ್ ಅಡಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕಳೆದ ಒಂದೆರಡು ದಿನಗಳಿಂದ ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ವಿರುದ್ಧ ಸರಣಿ ಟ್ವೀಟ್​​ಗಳನ್ನು ಮಾಡುತ್ತಿದ್ದಾರೆ. ಇದೀಗ ಪವನ್ ಕಲ್ಯಾಣ್ ಅವರ ಸಹೋದರ ನಾಗಬಾಬು ಅವರ ಟ್ವೀಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ, ‘ಈ ಬೆದರಿಕೆ ಎಲ್ಲ ಬೇಡ’ ಎಂದು ಗಡುಸಾಗಿ ಹೇಳಿದ್ದಾರೆ.

‘ಈ ಬೆದರಿಕೆ ಬೇಡ’: ಪವನ್ ಕಲ್ಯಾಣ್ ಸಹೋದರನಿಗೆ ಪ್ರಕಾಶ್ ರೈ ಎಚ್ಚರಿಕೆ
Prakash Raj Pawan Kalyan
ಮಂಜುನಾಥ ಸಿ.
|

Updated on: Jun 06, 2026 | 9:37 PM

Share

ಪ್ರಕಾಶ್ ರೈ (Prakash Raj) ಮೊದಲಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರು. ರಾಜಕೀಯ ವಿಷಯಗಳ ಬಗ್ಗೆ ‘ಜಸ್ಟ್ ಆಸ್ಕಿಂಗ್’ ಹ್ಯಾಷ್ ಟ್ಯಾಗ್ ಅಡಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಬಹುತೇಕ, ಬಿಜೆಪಿಯ ಸಿದ್ಧಾಂತಗಳನ್ನು ವಿರೋಧಿಸಿ ಟ್ವೀಟ್​​ಗಳನ್ನು ಮಾಡುತ್ತಿರುತ್ತಾರೆ. ಕಳೆದ ಒಂದೆರಡು ದಿನಗಳಿಂದ ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ವಿರುದ್ಧ ಸರಣಿ ಟ್ವೀಟ್​​ಗಳನ್ನು ಮಾಡುತ್ತಿದ್ದಾರೆ. ಇದೀಗ ಪವನ್ ಕಲ್ಯಾಣ್ ಅವರ ಸಹೋದರ ನಾಗಬಾಬು ಅವರ ಟ್ವೀಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ, ‘ಈ ಬೆದರಿಕೆ ಎಲ್ಲ ಬೇಡ’ ಎಂದು ಗಡುಸಾಗಿ ಹೇಳಿದ್ದಾರೆ.

ತೆಲಂಗಾಣದಲ್ಲಿ ಪವನ್ ಕಲ್ಯಾಣ್ ಅವರ ರ್ಯಾಲಿಗೆ ಅನುಮತಿ ನಿರಾಕರಿಸಲಾಗಿತ್ತು. ಇದನ್ನು ತೀವ್ರವಾಗಿ ಖಂಡಿಸಿದ್ದ ಪವನ್ ಕಲ್ಯಾಣ್, ‘ತೆಲಂಗಾಣ ಯಾರಪ್ಪನ ಆಸ್ತಿಯಲ್ಲ’ ಎಂದು ಗುಡುಗಿದ್ದರು. ಪವನ್ ಅವರ ಆ ಭಾಷಣದ ಬಗ್ಗೆ ಪರ-ವಿರೋಧ ಚರ್ಚೆಗಳು ಚಾಲ್ತಿಯಲ್ಲಿದ್ದವು. ಈ ಸಂದರ್ಭದಲ್ಲಿ ಪ್ರಕಾಶ್ ರೈ, ಪವನ್ ಕಲ್ಯಾಣ್ ಕಾಲೆಳೆದು ಟ್ವೀಟ್ ಮಾಡಿದ್ದರು. ಆ ಟ್ವೀಟ್​​ಗೆ ವಿರುದ್ಧವಾಗಿ ಪವನ್ ಕಲ್ಯಾಣ್ ಆಪ್ತ, ಪ್ರಕಾಶ್ ರೈ ಕುರಿತು ಏಕವನಚದಲ್ಲಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೆ ಇದೀಗ ಪ್ರಕಾಶ್ ರೈ ಅವರು ಪವನ್ ಕಲ್ಯಾಣ್ ಅವರ ಸಹೋದರ ನಾಗಬಾಬು ಅವರ ಟ್ವೀಟ್​​ಗೆ ಖಾರವಾಗಿ ಪ್ರತಿ ಟ್ವೀಟ್ ಮಾಡಿದ್ದಾರೆ.

ಪವನ್ ಕಲ್ಯಾಣ್ ಅವರ ಚಿತ್ರ ಹಂಚಿಕೊಂಡಿದ್ದ ನಾಗಬಾಬು ‘ನಾಯಕನ ಮಾತು ಅಂತಿಮ. ಯಾರೂ ಅವನ ದಾರಿಯಲ್ಲಿ ಸಮಸ್ಯೆಗಳನ್ನು ನೋಡಿಲ್ಲ, ನಾಯಕನಿಗೆ ಮಾತ್ರ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ತಿಳಿದಿದೆ. ನಿಮ್ಮ ಅನುಮಾನಗಳನ್ನು ಮುಚ್ಚಿ, ನಿಮ್ಮ ನಾಲಿಗೆಯನ್ನು ಮೌನಗೊಳಿಸಿ ಮತ್ತು ಪ್ರಶ್ನೆಗಳನ್ನು ಮಾಡದೆ ನಾಯಕನನ್ನು ಅನುಸರಿಸಿ’ ಎಂದು ಬರೆದಿದ್ದರು.

ಇದನ್ನೂ ಓದಿ:ಪ್ರಭಾಸ್ ಸಿನಿಮಾದಿಂದ ಹೊರಬಂದ ಪ್ರಕಾಶ್ ರೈ: ಕಾರಣವೇನು?

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ, ‘ಅನುಮಾನಗಳನ್ನು ಸುಮ್ಮನಾಗಿಸಿ, ನಾಲಗಿಯನ್ನು ಮೌನವಾಗಿಸಿ, ಪ್ರಶ್ನೆಗಳನ್ನು ಕೇಳಬೇಡಿ’ ಎಂಬ ನಿಮ್ಮ ಮಾತಿನ ಅರ್ಥವೇನು? ನಾವೇನು ಕುದುರೆಗಳಾ? ನೀವು ಹೇಳಿದಂತೆ ಕೇಳಿಕೊಂಡು ಇರಲು? ಈ ಬೆದರಿಕೆಗಳೆಲ್ಲ ಬೇಡ. ಪ್ರಶ್ನೆ ಮಾಡುವುದು ನಮ್ಮ ಹಕ್ಕು. ಯಾವ ನಾಯಕನೇ ಆದರು, ಜನರಿಗೆ ಉತ್ತರ ಕೊಡುವ ಜವಾಬ್ದಾರಿ ಆತನ ಮೇಲೆ ಇರುತ್ತದೆ. ಅರ್ಥ ಆಯಿತೆ?’ ಎಂದು ಪ್ರಕಾಶ್ ರೈ ಪ್ರಶ್ನೆ ಮಾಡಿದ್ದಾರೆ.

ನಾಗಬಾಬು ಅವರು ಪ್ರಕಾಶ್ ರೈ ಅವರ ಜನಸೇನಾ ಪಕ್ಷದ ಪ್ರಮುಖ ಮುಖಂಡರುಗಳಲ್ಲಿ ಒಬ್ಬರು. ಪವನ್ ಕಲ್ಯಾಣ್ ಅವರ ಸ್ವಂತ ಅಣ್ಣ ಸಹ. ಪವನ್ ಕಲ್ಯಾಣ್ ಅವರ ರಾಜಕೀಯ ಜರ್ನಿಯಲ್ಲಿ ನಾಗಬಾಬು ಸಹ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ನಾಗಬಾಬು ಮತ್ತು ಪವನ್ ಕಲ್ಯಾಣ್ ತೆಲುಗು ಚಿತ್ರರಂಗದ ಮೆಗಾ ಸಹೋದರರು ಎಂದೇ ಖ್ಯಾತರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಾಯಚೂರು ಜಿಲ್ಲೆಯಲ್ಲಿ 318 ಶೂನ್ಯ ಶಿಕ್ಷಕ ಸರ್ಕಾರಿ ಶಾಲೆಗಳು!
ರಾಯಚೂರು ಜಿಲ್ಲೆಯಲ್ಲಿ 318 ಶೂನ್ಯ ಶಿಕ್ಷಕ ಸರ್ಕಾರಿ ಶಾಲೆಗಳು!
ಈ ರಾಶಿಯವರಿಗೆ ಇಂದು ಅದೃಷ್ಟ ಕೂಡಿ ಬರಲಿದೆ
ಈ ರಾಶಿಯವರಿಗೆ ಇಂದು ಅದೃಷ್ಟ ಕೂಡಿ ಬರಲಿದೆ
ಚಿಕ್ಕಬಳ್ಳಾಪುರ: ಅನ್ನಭಾಗ್ಯ ಯೋಜನೆಯ ಗೋಧಿ ಅಕ್ರಮ ಸಾಗಾಟ, 14 ಟನ್ ವಶಕ್ಕೆ
ಚಿಕ್ಕಬಳ್ಳಾಪುರ: ಅನ್ನಭಾಗ್ಯ ಯೋಜನೆಯ ಗೋಧಿ ಅಕ್ರಮ ಸಾಗಾಟ, 14 ಟನ್ ವಶಕ್ಕೆ
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ