AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚರ್ಚ್​​ಗೆ ಹೋಗಿದ್ದಕ್ಕೆ ಟೀಕೆ: ಉತ್ತರಿಸಿದ ನಟ ಪ್ರಕಾಶ್ ರಾಜ್

Prakash Raj movie: ಸ್ವರ್ಣಲತಾ ಅವರ ಅಂತ್ಯಕ್ರಿಯೆ ಕ್ರಿಶ್ಚಿಯನ್ ಧರ್ಮದ ಅನ್ವಯ ನೆರವೇರಿತು. ಬೆಂಗಳೂರಿನ ಶಾಂತಿನಗರ ಚರ್ಚ್​​ನಲ್ಲಿ ಪ್ರಾರ್ಥನೆ, ಅಂತಿಮಕ್ರಿಯೆ ನಡೆಸಲಾಯ್ತು. ನಟ ಪ್ರಕಾಶ್ ರೈ ಸಹ ಶಾಂತಿನಗರ ಚರ್ಚ್​​ನಲ್ಲಿ ಹಾಜರಿದ್ದು, ಪ್ರಾರ್ಥನೆ, ಅಂತಿಮಕ್ರಿಯೆಯಲ್ಲಿ ಭಾಗಿ ಆಗಿದ್ದರು. ಆದರೆ ಇದೀಗ ಹಲವರು ಪ್ರಕಾಶ್ ರೈ ಚರ್ಚ್​​ಗೆ ಹೋಗಿದ್ದಕ್ಕೆ ಅವರನ್ನು ಟೀಕೆ ಮಾಡುತ್ತಿದ್ದಾರೆ. ಈ ಟೀಕೆಗಳಿಗೆ ನಟ ಪ್ರಕಾಶ್ ರೈ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಚರ್ಚ್​​ಗೆ ಹೋಗಿದ್ದಕ್ಕೆ ಟೀಕೆ: ಉತ್ತರಿಸಿದ ನಟ ಪ್ರಕಾಶ್ ರಾಜ್
Prakash Raj
ಮಂಜುನಾಥ ಸಿ.
|

Updated on:Apr 02, 2026 | 5:13 PM

Share

ನಟ ಪ್ರಕಾಶ್ ರಾಜ್ (Prakash Raj) ಅವರ ತಾಯಿ ಸ್ವರ್ಣಲತಾ ಅವರು ತಮ್ಮ 89ನೇ ವಯಸ್ಸಿನಲ್ಲಿ ಇತ್ತೀಚೆಗಷ್ಟೆ ನಿಧನ ಹೊಂದಿದರು. ಸ್ವರ್ಣಲತಾ ಅವರ ಅಂತ್ಯಕ್ರಿಯೆ ಕ್ರಿಶ್ಚಿಯನ್ ಧರ್ಮದ ಅನ್ವಯ ನೆರವೇರಿತು. ಬೆಂಗಳೂರಿನ ಶಾಂತಿನಗರ ಚರ್ಚ್​​ನಲ್ಲಿ ಪ್ರಾರ್ಥನೆ, ಅಂತಿಮಕ್ರಿಯೆ ನಡೆಸಲಾಯ್ತು. ನಟ ಪ್ರಕಾಶ್ ರೈ ಸಹ ಶಾಂತಿನಗರ ಚರ್ಚ್​​ನಲ್ಲಿ ಹಾಜರಿದ್ದು, ಪ್ರಾರ್ಥನೆ, ಅಂತಿಮಕ್ರಿಯೆಯಲ್ಲಿ ಭಾಗಿ ಆಗಿದ್ದರು. ಆದರೆ ಇದೀಗ ಹಲವರು ಪ್ರಕಾಶ್ ರೈ ಚರ್ಚ್​​ಗೆ ಹೋಗಿದ್ದಕ್ಕೆ ಅವರನ್ನು ಟೀಕೆ ಮಾಡುತ್ತಿದ್ದಾರೆ. ಈ ಟೀಕೆಗಳಿಗೆ ನಟ ಪ್ರಕಾಶ್ ರೈ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ನಟ ಪ್ರಕಾಶ್ ರೈ ಹಲವು ಬಾರಿ ದೇವರ ಇರುವಿಕೆಯನ್ನು ಪ್ರಶ್ನಿಸಿದ್ದರು, ತಮ್ಮನ್ನು ತಾವು ನಾಸ್ತಿಕ (ದೇವರಲ್ಲಿ ನಂಬಿಕೆ ಇಡದವ) ಎಂದು ಹೇಳಿಕೊಂಡಿದ್ದರು. ಪ್ರಕಾಶ್ ರೈ, ಯೂಟ್ಯೂಬ್ ಸಂದರ್ಶನವೊಂದರಲ್ಲಿ ತಾವು ನಾಸ್ತಿಕ ಎಂದು ಹೇಳಿಕೊಂಡಿರುವ ದೃಶ್ಯವೊಂದನ್ನು ಹಂಚಿಕೊಂಡು, ‘ನಾಸ್ತಿಕ ಎಂದ ಮೇಲೆ ಚರ್ಚ್​​ಗೆ ಹೋಗಿದ್ದೇಕೆ?’ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ, ‘ಹೌದು, ನಾನು ದೇವರನ್ನು ನಂಬುವುದಿಲ್ಲ. ಆದರೆ ನನ್ನ ತಾಯಿ ತನ್ನ ದೇವರನ್ನು ನಂಬಿದ್ದರು. ಅವಳ ನಂಬಿಕೆಯ ಪ್ರಕಾರ ಸಮಾಧಿ ಆಗುವ ಅವರ ಹಕ್ಕನ್ನು ನಿರಾಕರಿಸಲು ನಾನು ಯಾರು? ಇದು ನಾವು ಒಬ್ಬರಿಗೊಬ್ಬರು ನೀಡುವ ಮೂಲಭೂತ ಗೌರವ. ದ್ವೇಷಿಸುವ ರಾಕ್ಷಸರು ನೀವು ಇದನ್ನು ಅರ್ಥಮಾಡಿಕೊಳ್ಳಬಲ್ಲಿರಾ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಪ್ರಕಾಶ್ ರೈ, ಅವರು ದೇವರನ್ನು ನಂಬುವುದಿಲ್ಲವಾದರು ಅವರ ತಾಯಿ ನಂಬಿದ್ದು ಹಾಗೂ ಅಂತ್ಯಕ್ರಿಯೆ ಹೀಗೆಯೇ ಆಗಬೇಕೆಂಬುದು ಅವರ ಇಚ್ಛೆಯಾಗಿತ್ತಾದ್ದರಿಂದ ಮಗನಾಗಿ ಅವರ ಇಚ್ಛೆಯನ್ನು ನೆರವೇರಿಸಿರುವುದಾಗಿ ಪ್ರಕಾಶ್ ರೈ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:‘ಸ್ಪಿರಿಟ್’ ಸಿನಿಮಾದಿಂದ ಪ್ರಕಾಶ್ ರಾಜ್ ಹೊರಬಂದಿಲ್ಲ; ಸ್ಪಷ್ಟನೆ ನೀಡಿದ ನಟ

ಪ್ರಕಾಶ್ ರೈ ಅವರ ತಾಯಿ ಸ್ವರ್ಣಲತಾ ಮಾರ್ಚ್ 30ರಂದು ನಿಧನ ಹೊಂದಿದ್ದರು. 85 ವರ್ಷ ವಯಸ್ಸಿನವರಾಗಿದ್ದ ಸ್ವರ್ಣಲತಾ ಅವರು ಹೈದರಾಬಾದ್​​ನಲ್ಲಿ ವಾಸವಿದ್ದು, ಅಲ್ಲಿಯೇ ನಿಧನ ಹೊಂದಿದ್ದರು. ಗದಗದವರಾಗಿದ್ದ ಸ್ವರ್ಣಲತಾ ಅವರು ಅನಾಥೆ ಆಗಿದ್ದರು. ನರ್ಸಿಂಗ್ ಕಲಿತು ಬೆಂಗಳೂರಿಗೆ ಬಂದು ಇಲ್ಲಿಯೇ ಹಲವು ವರ್ಷ ನೆಲೆಸಿದ್ದರು. ಪ್ರಕಾಶ್ ರೈ ಸಹ ಕೊನೆಯ ವರೆಗೂ ತಾಯಿಯರನ್ನು ಬಹಳ ಪ್ರೀತಿ, ಗೌರವದಿಂದ ನೋಡಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:12 pm, Thu, 2 April 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ವಿಜಯೇಂದ್ರ
ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ವಿಜಯೇಂದ್ರ