ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸುಳ್ಳು ಹೇಳುತ್ತಾರೆ. ಒಬ್ಬರ ಎದರು ಒಂದು ವಿಚಾರ ಹೇಳಿದ ಮರುಕ್ಷಣವೇ ಅದನ್ನು ನಾನು ಹೇಳಿಯೇ ಇಲ್ಲ ಎಂದು ವಾದಿಸುತ್ತಾರೆ. ಒಳಗೊಂದು, ಹೊರಗೊಂದು ರೀತಿ ನಡೆದುಕೊಳ್ಳೋದು ಅವರ ಗೆಳೆಯ ಚಕ್ರವರ್ತಿಗೆ ಇಷ್ಟ ಆಗುತ್ತಿಲ್ಲ. ಈಗ ಅದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಏರ್ಪಟ್ಟಿದೆ.
ಬಿಗ್ ಬಾಸ್ ಮನೆಯ ಮೊದಲ ಇನ್ನಿಂಗ್ಸ್ನಲ್ಲಿ ದಿವ್ಯಾ ಸುರೇಶ್ ಬಗ್ಗೆ ಪ್ರಶಾಂತ್ ಸಂಬರಗಿ ಸಾಕಷ್ಟು ನೆಗೆಟಿವ್ ಆಗಿ ಮಾತನಾಡಿದ್ದರು. ನಂತರ ತಾವು ಏನನ್ನೂ ಹೇಳಿಯೇ ಇಲ್ಲ ಎಂದು ವಾದಿಸಿದ ಉದಾಹರಣೆ ಇದೆ. ಪ್ರಶಾಂತ್ ಕೆಲವರಿಗೆ ಅತಿಯಾಗಿ ಬೈದು ಮರುಕ್ಷಣವೇ ಸಮಾಧಾನ ಮಾಡೋಕೆ ಹೋಗುತ್ತಾರೆ. ಇದು ಚಕ್ರವರ್ತಿಗೆ ಇಷ್ಟವಾಗುತ್ತಿಲ್ಲ. ಈಗ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಚಕ್ರವರ್ತಿ ಹಾಗೂ ಪ್ರಶಾಂತ್ ಕಿತ್ತಾಡಿಕೊಂಡಿದ್ದಾರೆ.
ಪ್ರಶಾಂತ್ ಸಂಬರಗಿ ವೈಷ್ಣವಿಗೆ ಗೈಡೆನ್ಸ್ ಕೊಟ್ಟಿದ್ದರು. ಆದರೆ, ಇದನ್ನು ಅವರು ಪಾಲಿಸಿಲ್ಲ. ಈ ವಿಚಾರಕ್ಕೆ ಪ್ರಶಾಂತ್ ಹಾಗೂ ಚಕ್ರವರ್ತಿ ನಡುವೆ ಮಾತುಕತೆ ನಡೆದಿರುವುದು ಪ್ರೋಮೋದಲ್ಲಿ ಕಂಡು ಬಂದಿದೆ. ‘ನೀನು ಎಂತಹ ಕೆಲಸ ಮಾಡಿದೆ ಗೊತ್ತಾ? ಯಾಕೆ ಎಲ್ಲದಕ್ಕೂ ಪರ್ಸನಲ್ ಆಗಿ ಮಾತನಾಡುತ್ತೀಯಾ? ತಾಕತ್ ಇದ್ರೆ ದಿವ್ಯಾ ಉರುಡುಗ, ಅರವಿಂದ್ ಕೆಪಿ ಬಗ್ಗೆ ಮಾತನಾಡಿದ್ದನ್ನು ಎಲ್ಲರ ಎದುರು ಹೇಳು. ನಾನು ಒಬ್ಬ ಅಪ್ಪ ಅಮ್ಮನಿಗೆ ಹುಟ್ಟಿದೀನಿ, ಸರಿಯಾಗಿ ನಡ್ಕೋತೀನಿ’ ಎಂದು ಪ್ರಶಾಂತ್ ವಿರುದ್ಧ ಚಕ್ರವರ್ತಿ ಕಿಡಿಕಾರಿದ್ದಾರೆ.
ಅಷ್ಟಕ್ಕೂ ಇವರ ನಡುವೆ ಜಗಳ ಏರ್ಪಡೋಕೆ ನಿಜವಾದ ಕಾರಣ ಏನು? ಇವರ ಜಗಳ ಕೊನೆಗೊಳ್ಳುತ್ತಾ? ಚಕ್ರವರ್ತಿ ಪ್ರಶ್ನೆಗೆ ಪ್ರಶಾಂತ್ ಹೇಗೆ ಉತ್ತರಿಸುತ್ತಾರೆ ಎಂಬಿತ್ಯಾದಿ ಪ್ರಶ್ನೆಗೆ ಇಂದಿನ (ಜುಲೈ 8) ಸಂಚಿಕೆ ನೋಡಬೇಕು. ಅಂದಹಾಗೆ, ಪ್ರಶಾಂತ್-ಚಕ್ರವರ್ತಿ ನಡುವೆ ಈ ಮೊದಲು ಕೂಡ ಸಾಕಷ್ಟು ಜಗಳಗಳು ಏರ್ಪಟ್ಟಿವೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಅರವಿಂದ್ ವಿರುದ್ಧ ಸೇಡು ತೀರಿಸಿಕೊಂಡ ನಿಧಿ ಸುಬ್ಬಯ
ಅರವಿಂದ್ ಗೆಲ್ಲಿಸೋಕೆ ಚಕ್ರವರ್ತಿಗೆ ಅನ್ಯಾಯ ಮಾಡಿದ್ರಾ ದಿವ್ಯಾ ಉರುಡುಗ? ಬಿಗ್ ಬಾಸ್ ಮನೆಯಲ್ಲಿ ಹೀಗೊಂದು ಪ್ರಶ್ನೆ