ಪ್ರತಿಭಾನ್ವಿತ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರು ‘ಆಡುಜೀವಿತಂ’ ಸಿನಿಮಾದ ಮೂಲಕ ಗೆದ್ದು ಬೀಗಿದ್ದಾರೆ. ಈ ಸಿನಿಮಾಗಾಗಿ ಅವರು ಅನೇಕ ವರ್ಷಗಳಿಂದ ಕಷ್ಟಪಟ್ಟಿದ್ದಾರೆ. ತುಂಬ ಡಿಫರೆಂಟ್ ಆದಂತಹ ಗೆಟಪ್ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಬ್ಲೆಸ್ಸಿ ನಿರ್ದೇಶನ ಮಾಡಿದ ‘ಆಡುಜೀವಿತಂ’ (Aadujeevitham) ಸಿನಿಮಾಗೆ ಜನರು ಫಿದಾ ಆಗಿದ್ದಾರೆ. ನೋಡನೋಡುತ್ತಿದ್ದಂತೆಯೇ ‘ಆಡುಜೀವಿತಂ’ ಬಾಕ್ಸ್ ಆಫೀಸ್ ಕಲೆಕ್ಷನ್ (Aadujeevitham Box Office Collection) 50 ಕೋಟಿ ರೂಪಾಯಿ ಮುಟ್ಟಿದೆ. ವಿಶ್ವಾದ್ಯಂತ ತೆರೆಕಂಡಿರುವ ಈ ಸಿನಿಮಾ ಮೂರು ದಿನಕ್ಕೆ ಹಾಫ್ ಸೆಂಚುರಿ ಬಾರಿಸಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ರಿಯಲ್ ಲೈಫ್ ಘಟನೆಗಳನ್ನು ಆಧರಿಸಿ ‘ಆಡುಜೀವಿತಂ’ ಸಿನಿಮಾ ಮೂಡಿಬಂದಿದೆ. ಸಿನಿಮಾದ ಗೆಲುವಿನ ಬಗ್ಗೆ ಪೃಥ್ವಿರಾಜ್ ಸುಕುಮಾರನ್ ಅವರು ಟ್ವೀಟ್ ಮಾಡಿದ್ದಾರೆ. ‘ವಿಶ್ವಾದ್ಯಂತ ಒಟ್ಟು ಕಲೆಕ್ಷನ್ 50 ಕೋಟಿ ರೂಪಾಯಿಗೂ ಅಧಿಕ ಆಗಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು’ ಎಂದು ಪೃಥ್ವಿರಾಜ್ ಅವರು ಪೋಸ್ಟ್ ಮಾಡಿದ್ದಾರೆ. ಈ ಸಿನಿಮಾಗೆ ಎಲ್ಲ ಕಡೆಗಳಿಂದ ಉತ್ತಮ ವಿಮರ್ಶೆ ಸಿಕ್ಕಿದೆ.
#Aadujeevitham #TheGoatLifeInCinema@DirectorBlessy @benyamin_bh @arrahman @Amala_ams @Haitianhero @rikaby @resulp @iamkrgokul @HombaleFilms @AAFilmsIndia @PrithvirajProd @RedGiantMovies_ @MythriOfficial @Magic_Frames @ListinStephen pic.twitter.com/oJFlpzN5gW
— Prithviraj Sukumaran (@PrithviOfficial) March 31, 2024
ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ‘ಆಡುಜೀವಿತಂ’ ಸಿನಿಮಾ ಬಿಡುಗಡೆ ಆಗಿದೆ. ಮಲಯಾಳಂ, ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ದೇಶಾದ್ಯಂತ ಈ ಸಿನಿಮಾ ತೆರೆಕಂಡಿದೆ. ಚಿತ್ರತಂಡದ ಪ್ರಕಾರ ಮೊದಲ ದಿನವೇ ಈ ಸಿನಿಮಾ 16 ಕೋಟಿ ರೂಪಾಯಿ ಬಾಚಿಕೊಂಡಿದೆ. ಭಾರತದಲ್ಲಿ ಮೂರು ದಿನಕ್ಕೆ 21.6 ಕೋಟಿ ರೂಪಾಯಿ ಗಳಿಕೆ ಆಗಿದೆ ಎನ್ನಲಾಗಿದೆ.
ಇದನ್ನೂ ಓದಿ: ‘ಆಡುಜೀವಿತಂ’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ; ಪೃಥ್ವಿರಾಜ್ ನಟನೆಗೆ ಜನರು ಫಿದಾ
90ರ ದಶಕದಲ್ಲಿ ನಜೀಬ್ ಎಂಬ ಯುವಕ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಗಲ್ಫ್ ರಾಷ್ಟ್ರಕ್ಕೆ ಹೋಗಿ, ನಂತರ ಅಲ್ಲಿ ಜೀತದಾಳಾಗಿ ಶೋಷಣೆಗೆ ಒಳಗಾಗುವ ರಿಯಲ್ ಕಥೆಯನ್ನು ಆಧರಿಸಿ ‘ಆಡುಜೀವಿತಂ’ ಸಿನಿಮಾ ಮೂಡಿಬಂದಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬ್ಲೆಸಿ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾಗಾಗಿ ಅವರು ಹಲವು ವರ್ಷಗಳನ್ನು ಮೀಸಲಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದುನೋಡಬೇಕು. ನಾಲ್ಕನೇ ದಿನವಾದ ಭಾನುವಾರ (ಮಾರ್ಚ್ 31) ಕಲೆಕ್ಷನ್ ಹೆಚ್ಚುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.