ಎಲ್ಲೇ ಇದ್ದರೂ ಭಾರತೀಯ ಸಂಸ್ಕೃತಿ ಮರೆಯದ ಪ್ರಿಯಾಂಕಾ ಚೋಪ್ರಾ! ಲಂಡನ್​ನಲ್ಲಿ ದೇಸಿ ಗರ್ಲ್​​ ಹೋಳಿ

ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್​ ಜೋನಸ್​ ಜೊತೆ ಸದ್ಯ ಲಂಡನ್​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಲಂಡನ್​ ಎಂದಮಾತ್ರಕ್ಕೆ ಅವರು ಹೋಳಿ ಹಬ್ಬವನ್ನು ಮರೆತಿಲ್ಲ. ಕುಟುಂಬದವರ ಜೊತೆ ಸೇರಿ ಹಣ್ಣದ ಹಬ್ಬವನ್ನು ಸೆಲೆಬ್ರೇಟ್​ ಮಾಡಿದ್ದಾರೆ.

ಎಲ್ಲೇ ಇದ್ದರೂ ಭಾರತೀಯ ಸಂಸ್ಕೃತಿ ಮರೆಯದ ಪ್ರಿಯಾಂಕಾ ಚೋಪ್ರಾ! ಲಂಡನ್​ನಲ್ಲಿ ದೇಸಿ ಗರ್ಲ್​​ ಹೋಳಿ
ಪ್ರಿಯಾಂಕಾ ಚೋಪ್ರಾ ಹೋಳಿ ಹಬ್ಬ ಆಚರಣೆ
Edited By:

Updated on: Mar 29, 2021 | 3:54 PM

ನಟಿ ಪ್ರಿಯಾಂಕಾ ಚೋಪ್ರಾ ಈಗ ಭಾರತಕ್ಕಿಂತಲೂ ಹೆಚ್ಚಾಗಿ ವಿದೇಶದಲ್ಲೇ ಇರುತ್ತಾರೆ. ಅಮೆರಿಕದ ಗಾಯಕ ನಿಕ್​ ಜೋನಸ್​ ಜೊತೆ ಮದುವೆ ಆದ ಬಳಿಕ ಅವರು ಬಾಲಿವುಡ್​ ಸಿನಿಮಾಗಳಿಂದಲೂ ಕೊಂಚ ದೂರ ಉಳಿದುಕೊಂಡರು. ಹಿಂದಿ ಚಿತ್ರಗಳಿಂದ ಪಿಗ್ಗಿ ಅಂತರ ಕಾಯ್ದುಕೊಂಡಿರಬಹುದು. ಆದರೆ ಭಾರತೀಯ ಸಂಸ್ಕೃತಿಯ ಜೊತೆಗೆ ಅವರು ಸದಾ ಕನೆಕ್ಟ್​ ಆಗಿರುತ್ತಾರೆ. ಪ್ರತಿ ಹಬ್ಬ ಬಂದಾಗಲೂ ಸಹ ಅವರು ಈ ಮಾತನ್ನು ಸಾಬೀತುಪಡಿಸುತ್ತಾರೆ.

ಹೌದು, ವಿದೇಶಿ ಹುಡುಗನನ್ನು ಮದುವೆ ಆಗಿದ್ದರೂ ಕೂಡ ಪ್ರಿಯಾಂಕಾ ಚೋಪ್ರಾ ಪಕ್ಕಾ ದೇಶಿ ಗರ್ಲ್​ ಎಂಬುದಕ್ಕೆ ಈಗ ಅವರು ಹೋಳಿ ಹಬ್ಬ ಆಚರಿಸಿರುವುದೇ ಸಾಕ್ಷಿ. ಪತಿ ನಿಕ್​ ಜೋನಸ್​ ಮತ್ತು ಕುಟುಂಬದ ಇತರೆ ಸದಸ್ಯರ ಜೊತೆ ಸದ್ಯ ಪ್ರಿಯಾಂಕಾ ಲಂಡನ್​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಲಂಡನ್​ ಎಂದಮಾತ್ರಕ್ಕೆ ಅವರು ಹೋಳಿ ಹಬ್ಬವನ್ನು ಮರೆತಿಲ್ಲ. ಕುಟುಂಬದವರ ಜೊತೆ ಸೇರಿ ಬಣ್ಣದ ಹಬ್ಬವನ್ನು ಸೆಲೆಬ್ರೇಟ್​ ಮಾಡಿದ್ದಾರೆ.

‘ಬಣ್ಣಗಳ ಹಬ್ಬ ಹೋಳಿ ನನ್ನ ಫೇವರೆಟ್. ನಮ್ಮ ಮನೆಗಳಲ್ಲಿ ನಾವೆಲ್ಲರೂ ಪ್ರೀತಿಪಾತ್ರರ ಜೊತೆ ಈ ಬಾರಿ ಹೋಳಿ ಆಚರಿಸಿಸೋಣ’ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿರುವ ಪ್ರಿಯಾಂಕಾ ಅವರು ಕೆಲವು ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ಪತಿ ನಿಕ್​ ಜೋನಸ್​ ಮತ್ತು ಅತ್ತೆ-ಮಾವನ ಜೊತೆ ಪಿಗ್ಗಿ ಬಣ್ಣದ ಹಬ್ಬವನ್ನು ಸೆಲೆಬ್ರೇಟ್​ ಮಾಡಿದ್ದಾರೆ. ಈ ಹಿಂದೆ ಅವರು ಕರ್ವಾ ಚೌತ್​ ಹಬ್ಬವನ್ನು ಸಹ ಸಂಭ್ರಮದಿಂದ ಆಚರಿಸಿದ್ದರು.

ಉತ್ತರ ಭಾರತದ ಮಂದಿಗೆ ಹೋಳಿ ದೊಡ್ಡ ಹಬ್ಬ. ಅಲ್ಲಿನ ಎಲ್ಲಾ ಸೆಲೆಬ್ರಿಟಿಗಳೂ ಬಹಳ ಉತ್ಸಾಹದಿಂದ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಈ ಬಾರಿ ಕೊರೊನಾ ವೈರಸ್​ ಹಾವಳಿ ಇರುವುದರಿಂದ ಆಚರಣೆ ಕೊಂಚ ಮಂಕಾಗಿದೆ. ಹೆಚ್ಚು ಜನರನ್ನು ಒಟ್ಟುಗೂಡಿಸಿಕೊಳ್ಳುವ ಬದಲು ಕೇವಲ ತಮ್ಮ ಕುಟುಂಬದವರ ಜೊತೆ ಹಬ್ಬ ಆಚರಿಸುತ್ತಿದ್ದಾರೆ. ಬಣ್ಣಗಳಲ್ಲಿ ಮುಳುಗೆದ್ದಿರುವ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಖುಷಿ ಪಡುತ್ತಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಈಗ ಹೆಚ್ಚಾಗಿ ಹಾಲಿವುಡ್​ ಸಿನಿಮಾಗಳತ್ತ ಪ್ರಿಯಾಂಕಾ ಚೋಪ್ರಾ ಗಮನ ಹರಿಸುತ್ತಿದ್ದಾರೆ. ಅವರ ನಟನೆಯ ‘ದಿ ವೈಟ್​ ಟೈಗರ್​’ ಚಿತ್ರ ಆಸ್ಕರ್​ ಸ್ಪರ್ಧಿಗೆ ನಾಮನಿರ್ದೇಶನಗೊಂಡಿದೆ. ಆ ಬಗ್ಗೆ ಕೆಲವೇ ದಿನಗಳ ಹಿಂದೆ ಅವರು ಖುಷಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ನಟಿ ಪ್ರಿಯಾಂಕಾ ಚೋಪ್ರಾ ಅವರ ಇಂಡಿಯನ್ ಹೋಟೆಲ್ ಮೆನು ನೋಡಿ! ಬಾಣಸಿಗ ಯಾರು ಗೊತ್ತಾ?

ಬಾಲ್ಯದಲ್ಲಿ ಪ್ರಿಯಾಂಕಾ ಚೋಪ್ರಾ ಪಾಲಿಸುತ್ತಿದ್ದ ಧರ್ಮ ಯಾವುದು? ಸಂದರ್ಶನದಲ್ಲಿ ಸತ್ಯ ಬಾಯ್ಬಿಟ್ಟ ನಟಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us