ಆಗಸ್ಟ್​ 15ರ ಅಖಾಡದಲ್ಲಿ ‘ಪುಷ್ಪ 2’ ಎದುರು ಘಟಾನುಘಟಿ ನಟರ ಪೈಪೋಟಿ?

ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2’ ಸಿನಿಮಾ ಆಗಸ್ಟ್​ 15ರಂದು ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಆ ಸಿನಿಮಾ ಎದುರು ಘಟಾನುಘಟಿ ಸ್ಟಾರ್​ ನಟರ ಸಿನಿಮಾಗಳು ಪೈಪೋಟಿ ನೀಡುವ ಸೂಚನೆ ಸಿಗುತ್ತಿದೆ. ಇದರಿಂದಾಗಿ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಕ್ಲ್ಯಾಶ್​ ಆಗುವ ಸಾಧ್ಯತೆ ಇದೆ. ಇದರಿಂದಾಗಿ ‘ಪುಷ್ಪ 2’ ಕಲೆಕ್ಷನ್​ ಕಡಿಮೆ ಆದರೂ ಆಚ್ಚರಿಯೇನಿಲ್ಲ.

ಆಗಸ್ಟ್​ 15ರ ಅಖಾಡದಲ್ಲಿ ‘ಪುಷ್ಪ 2’ ಎದುರು ಘಟಾನುಘಟಿ ನಟರ ಪೈಪೋಟಿ?
ಅಲ್ಲು ಅರ್ಜುನ್​, ಅಜಯ್​ ದೇವಗನ್​, ದಳಪತಿ ವಿಜಯ್​, ರಜನಿಕಾಂತ್​

Updated on: Mar 06, 2024 | 6:20 PM

ಭಾರಿ ನಿರೀಕ್ಷೆ ಹುಟ್ಟುಹಾಕಿರುವ ‘ಪುಷ್ಪ 2’ (Pushpa 2) ಸಿನಿಮಾದಿಂದ ದೊಡ್ಡ ಗೆಲುವು ಪಡೆಯಲು ಅಲ್ಲು ಅರ್ಜುನ್​ (Allu Arjun) ಕಾದಿದ್ದಾರೆ. ನೂರು ಕೋಟಿ ರೂಪಾಯಿ ಎಂಬುದೆಲ್ಲ ಈಗ ಸಣ್ಣ ಮೊತ್ತವಾಗಿ ಕಾಣುತ್ತಿದೆ. ಸ್ಟಾರ್​ ನಟರ ಸಿನಿಮಾಗಳು ಬ್ಲಾಕ್​ ಬಸ್ಟರ್​ ಎನಿಸಿಕೊಳ್ಳಬೇಕು ಎಂದರೆ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಬೇಕು. ‘ಪುಷ್ಪ 2’ ಸಿನಿಮಾ ಕೂಡ ಅದೇ ಗುರಿ ಇಟ್ಟುಕೊಂಡಿದೆ. ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಬಾಕ್ಸ್​ ಆಫೀಸ್​ ಕಲೆಕ್ಷನ್​ ಆಗಲಿ ಎಂಬ ಉದ್ದೇಶದಿಂದಲೇ ವಿದೇಶದಲ್ಲೂ ಈ ಚಿತ್ರಕ್ಕೆ ಪ್ರಚಾರ ನೀಡಲಾಗುತ್ತಿದೆ. ಆದರೆ ಭಾರತದಲ್ಲಿ ‘ಪುಷ್ಪ 2’ ಚಿತ್ರಕ್ಕೆ ಅಜಯ್​ ದೇವಗನ್​ (Ajay Devgn), ರಜನಿಕಾಂತ್​, ದಳಪತಿ ವಿಜಯ್​ ಮುಂತಾದವರ ಸಿನಿಮಾಗಳು ಅಡ್ಡಗಾಲು ಹಾಕುವ ಸೂಚನೆ ಸಿಕ್ಕಿದೆ.

‘ಪುಷ್ಪ 2’ ಸಿನಿಮಾ ಆಗಸ್ಟ್​ 15ರಂದು ತೆರೆಕಾಣಲಿದೆ. ಸರ್ಕಾರಿ ರಜೆ ಇರುವುದರಿಂದ ಅಂದು ಸಿನಿಮಾ ಬಿಡುಗಡೆಯಾದರೆ ಭರ್ಜರಿ ಕಲೆಕ್ಷನ್​ ಆಗುತ್ತದೆ. ಹಾಗಾಗಿ ಆ ದಿನಾಂಕದ ಮೇಲೆ ಬೇರೆ ಸಿನಿಮಾ ತಂಡಗಳು ಕೂಡ ಕಣ್ಣು ಇಟ್ಟಿವೆ. ಅಜಯ್​ ದೇವಗನ್​ ನಟನೆಯ, ರೋಹಿತ್​ ಶೆಟ್ಟಿ ನಿರ್ದೇಶನದ ‘ಸಿಂಗಂ ಅಗೇನ್​’ ಸಿನಿಮಾ ಈಗಾಗಲೇ ರೇಸ್​ನಲ್ಲಿದೆ. ಬಾಲಿವುಡ್​ನ ಹಲವು ಕಲಾವಿದರು ಅಭಿನಯಿಸಿರುವ ಈ ಸಿನಿಮಾ ಕೂಡ ಆಗಸ್ಟ್​ 15ರಂದು ಬಿಡುಗಡೆ ಆಗಲಿದೆ. ಹಾಗಾಗಿ ಹಿಂದಿ ಮಾರುಕಟ್ಟೆಯಲ್ಲಿ ‘ಪುಷ್ಪ 2’ ಸಿನಿಮಾದ ಕಲೆಕ್ಷನ್​ ಮೇಲೆ ಪರಿಣಾಮ ಬೀರಲಿದೆ.

ಇದನ್ನೂ ಓದಿ: ಅಲ್ಲು ಅರ್ಜುನ್​ಗೆ ಟಿವಿ9 ನಕ್ಷತ್ರ ಅವಾರ್ಡ್: ‘ಪುಷ್ಪ’ ಹೇಳಿದ್ದೇನು?

ತಮಿಳುನಾಡಿನಲ್ಲಿ ಕೂಡ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ವರದಿಗಳ ಪ್ರಕಾರ, ‘ದಳಪತಿ’ ವಿಜಯ್​ ನಟನೆಯ ‘ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​’ ಸಿನಿಮಾ ಕೂಡ ಆಗಸ್ಟ್​ 15ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ವೆಂಕಟ್​ ಪ್ರಭು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಸೈನ್ಸ್​ ಫಿಕ್ಷನ್​ ಕಹಾನಿ ಇರಲಿದೆ. ಬೇರೆ ನಟರ ಜೊತೆ ಕ್ಲ್ಯಾಶ್​ ಮಾಡಿಕೊಳ್ಳಲು ದಳಪತಿ ವಿಜಯ್​ ಎಂದಿಗೂ ಹೆದರುವವರಲ್ಲ. ಹಾಗಾಗಿ ಅವರ ಸಿನಿಮಾ ‘ಪುಷ್ಪ 2’ ಚಿತ್ರದ ಎದುರು ಬಿಡುಗಡೆಯಾದರೆ ಅಚ್ಚರಿ ಏನಿಲ್ಲ.

ಇದನ್ನೂ ಓದಿ: ಅಲ್ಲು ಅರ್ಜುನ್​ ವಿವಾಹ ವಾರ್ಷಿಕೋತ್ಸವ; ಸ್ನೇಹಾ ರೆಡ್ಡಿ ಜತೆಗಿನ ದಾಂಪತ್ಯಕ್ಕೆ ಈಗ 13 ವರ್ಷ

ರಜನಿಕಾಂತ್​ ಕೂಡ ಆಗಸ್ಟ್​ 15ರ ಬಾಕ್ಸ್​ ಆಫೀಸ್​ ರೇಸ್​ನಲ್ಲಿ ಪೈಪೋಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ‘ವೆಟ್ಟೈಯನ್​’ ಸಿನಿಮಾದಲ್ಲಿ ರಜನಿಕಾಂತ್​ ಈಗ ನಟಿಸುತ್ತಿದ್ದಾರೆ. ಈ ಸಿನಿಮಾ ಕೂಡ ಆಗಸ್ಟ್​ ತಿಂಗಳಲ್ಲೇ ಬಿಡುಗಡೆ ಆಗಲಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಆಗಸ್ಟ್​ನಲ್ಲಿ ನಿಖರವಾಗಿ ಯಾವ ದಿನಾಂಕ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಒಂದು ವೇಳೆ ‘ವೆಟ್ಟೈಯನ್​’ ಕೂಡ ಆಗಸ್ಟ್​ 15ರಂದೇ ತೆರೆಕಂಡರೆ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಕ್ಲ್ಯಾಶ್​ ಆಗಲಿದೆ.

ಸುಕುಮಾರ್​ ಅವರು ‘ಪುಷ್ಪ 2’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್​ ಜೊತೆ ಫಹಾದ್ ಫಾಸಿಲ್​, ಡಾಲಿ ಧನಂಜಯ್​, ರಶ್ಮಿಕಾ ಮಂದಣ್ಣ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್​ಗಳು ಕ್ರೇಜ್​ ಸೃಷ್ಟಿ ಮಾಡಿವೆ. ಹೈದರಾಬಾದ್​ನಲ್ಲಿ ಈ ಚಿತ್ರದ ಶೂಟಿಂಗ್​ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us