AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲು ಅರ್ಜುನ್​ಗೆ ಟಿವಿ9 ನಕ್ಷತ್ರ ಅವಾರ್ಡ್: ‘ಪುಷ್ಪ’ ಹೇಳಿದ್ದೇನು?

Allu Arjun: ಅಲ್ಲು ಅರ್ಜುನ್ ಅವರಿಗೆ ಟಿವಿ9 ‘ನಕ್ಷತ್ರ ಸಮ್ಮಾನ್’ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಯನ್ನು ಅತ್ಯಂತ ಗೌರವದಿಂದ ಅಲ್ಲು ಅರ್ಜುನ್ ಸ್ವೀಕರಿಸಿದ್ದು, ಪ್ರಶಸ್ತಿಯನ್ನು ವಿಶೇಷ ವ್ಯಕ್ತಿಗಳಿಗೆ ಡೆಡಿಕೇಟ್ ಮಾಡಿದ್ದಾರೆ.

ಅಲ್ಲು ಅರ್ಜುನ್​ಗೆ ಟಿವಿ9 ನಕ್ಷತ್ರ ಅವಾರ್ಡ್: ‘ಪುಷ್ಪ’ ಹೇಳಿದ್ದೇನು?
ಅಲ್ಲು ಅರ್ಜುನ್
ಮಂಜುನಾಥ ಸಿ.
|

Updated on: Feb 25, 2024 | 11:04 PM

Share

ಅಲ್ಲು ಅರ್ಜುನ್ (Allu Arjun) ತಮ್ಮ ಸಿನಿ ಜೀವನದಲ್ಲಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಆದರೆ ಇಂದು (ಫೆಬ್ರವರಿ 25) ಅತ್ಯಂತ ಮಹತ್ವವೂ, ವಿಶೇಷವೂ ಆದ ಟಿವಿ9 ನಕ್ಷತ್ರ ಅವಾರ್ಡ್​ಗೆ ಭಾಜನರಾದರು. ಟಿವಿ9 ನೆಟ್​ವರ್ಕ್​​ ವಿವಿಧ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ, ಸಾಧನೆ ಮಾಡುತ್ತಿರುವ ಆ ಮೂಲಕ ಆ ಕ್ಷೇತ್ರದಲ್ಲಿ ಬದಲಾವಣೆ ತರಲು ಶ್ರಮಿಸುತ್ತಿರುವವರನ್ನು ಗುರುತಿಸಿ ‘ನಕ್ಷತ್ರ ಅವಾರ್ಡ್ಸ್’ ನೀಡಿದೆ. ‘ವಾಟ್ ಇಂಡಿಯಾ ಥಿಂಕ್ ಟುಡೆ’ ಹೆಸರಿನ ದೂರದೃಷ್ಟಿಯುಳ್ಳ ಅತಿದೊಡ್ಡ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡು ‘ನಕ್ಷತ್ರ ಅವಾರ್ಡ್ಸ್’ ಪ್ರಶಸ್ತಿಯನ್ನು ವಿತರಣೆ ಮಾಡಿದೆ. ಹಲವು ಅರ್ಹ ಸಾಧಕರು ಪ್ರಶಸ್ತಿಯನ್ನು ಪಡೆದಿದ್ದು ಅದರಲ್ಲಿ ನಟ ಅಲ್ಲು ಅರ್ಜುನ್ ಸಹ ಒಬ್ಬರು.

ನಟ ಅಲ್ಲು ಅರ್ಜುನ್, ‘ವಾಟ್ ಇಂಡಿಯಾ ಥಿಂಕ್ ಟುಡೆ’ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲವಾದರೂ, ಅವರು ಇದ್ದಲ್ಲಿಗೆ ಪ್ರಶಸ್ತಿಯನ್ನು ತಲುಪಿಸಲಾಯ್ತು. ಪ್ರಶಸ್ತಿಯನ್ನು ಅತ್ಯಂತ ಗೌರವದಿಂದ ಸ್ವೀಕರಿಸಿದ ನಟ ಅಲ್ಲು ಅರ್ಜುನ್, ಪ್ರಶಸ್ತಿ ಕುರಿತು, ತಮ್ಮ ಪ್ರೀತಿ ಪಾತ್ರರ ಕುರಿತು ಕೆಲವು ಮಾತನಾಡಿದರು. ‘ನನಗೆ ‘ನಕ್ಷತ್ರ ಸಮ್ಮಾನ್’ ಪ್ರಶಸ್ತಿಯನ್ನು ಕೊಟ್ಟಿರುವ ಟಿವಿ9ಗೆ ಧನ್ಯವಾದ. ಈ ಪ್ರಶಸ್ತಿಯನ್ನು ಸ್ವೀಕರಿಸುವುದನ್ನು ಗೌರವವಾಗಿ ನಾನು ಭಾವಿಸುತ್ತೇನೆ. ಇದಕ್ಕೆ ನಾನು ರಾಮ್ ಹಾಗೂ ಬರುಣ್ ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ:ಸುಮ್ಮನೆ ವಿದೇಶಕ್ಕೆ ಹೋಗಿಲ್ಲ ಅಲ್ಲು ಅರ್ಜುನ್​; ಇದರ ಹಿಂದಿದೆ ಮಾಸ್ಟರ್​ ಪ್ಲ್ಯಾನ್​

ಮುಂದುವರೆದು, ‘ಈ ಪ್ರಶಸ್ತಿಯನ್ನು ಖುದ್ದಾಗಿ ಪಡೆಯಲಾಗದೇ ಇರುವುದಕ್ಕೆ ನನಗೆ ಬೇಸರವಿದೆ, ನನ್ನ ಗೈರು ಹಾಜರಿಗೆ ನಾನು ಕ್ಷಮೆ ಕೇಳುತ್ತೇನೆ. ನಾನು ‘ಪುಷ್ಪ 2’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಕಾರಣ ಕಾರ್ಯಕ್ರಮಕ್ಕೆ ಖುದ್ದಾಗಿ ಹಾಜರಾಗಲಿಲ್ಲ. ಪುಷ್ಪ 2 ಸಿನಿಮಾ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ. ಈ ಪ್ರಶಸ್ತಿಯನ್ನು ನಾನು ನನ್ನ ಅಭಿಮಾನಿಗಳಿಗೆ ಅರ್ಪಿಸಲು ಇಚ್ಛಿಸುತ್ತೇನೆ. ಅವರ ಪ್ರೀತಿ, ಹಾರೈಕೆಯೇ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ಎಲ್ಲರಿಗೂ ಧನ್ಯವಾದ. ಈ ಪ್ರಶಸ್ತಿ ನಿಮ್ಮದು’ ಎಂದಿದ್ದಾರೆ ಅಲ್ಲು ಅರ್ಜುನ್.

‘ಪುಷ್ಪ; ದಿ ರೈಸ್’ ಬಳಿಕ ಈಗ ‘ಪುಷ್ಪ: ದಿ ರೂಲ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ರೈಸ್’, ‘ರೂಲ್’ ಭಾರತದ ಪ್ರಸ್ತುತ ವಾಸ್ತವ ಹಾಗೂ ಭವಿಷ್ಯವನ್ನು ಸೂಚಿಸುತ್ತವೆ. ಯಾವುದೇ ಬಂದರೂ ‘ತಗ್ಗದೇ ಇರುವ’ ಪುಷ್ಪನದ್ದು ಭಾರತದ ಮನಸ್ಥಿತಿಯೇ ಆಗಿದೆ. ‘ಪುಷ್ಪ’ ಪಾತ್ರದಲ್ಲಿ ನಟಿಸುತ್ತಿರುವ ಅಲ್ಲು ಅರ್ಜುನ್​ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಇದೂ ಸಹ ಕಾರಣವಾಗಿರುವ ಸಾಧ್ಯತೆ ದಟ್ಟ.

ಅಲ್ಲು ಅರ್ಜುನ್ ಪ್ರಸ್ತುತ ಲಂಡನ್​ನಲ್ಲಿದ್ದು, ‘ಪುಷ್ಪ 2’ ಸಿನಿಮಾದ ತಾಂತ್ರಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ‘ನಕ್ಷತ್ರ ಸಮ್ಮಾನ್’ ಪ್ರಶಸ್ತಿ ಸ್ವೀಕರಿಸಲು ಬರಲಾಗಲಿಲ್ಲ. ‘ಪುಷ್ಪ 2’ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡದ ನಟ ಡಾಲಿ ಧನಂಜಯ್ ಸಹ ಸಿನಿಮಾದಲ್ಲಿದ್ದು, ಇವರ ಹೊರತಾಗಿ ಖ್ಯಾತ ನಟರಾದ ಫಹಾದ್ ಫಾಸಿಲ್, ಸುನಿಲ್, ರಾವ್ ರಮೇಶ್, ಜಗಪತಿ ಬಾಬು ಇನ್ನೂ ಹಲವರು ಸಿನಿಮಾದಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!