ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ ಅಲ್ಲು ಅರ್ಜುನ್ ಪುತ್ರ
Allu Arjun: ಅಲ್ಲು ಅರ್ಜುನ್ ಕುಟುಂಬದಲ್ಲಿ ಬಹುತೇಕರು ಸಿನಿಮಾ ರಂಗದೊಟ್ಟಿಗೆ ನೇರವಾಗಿ ನಂಟು ಹೊಂದಿದ್ದಾರೆ. ಇದೀಗ ಅವರ ಪುತ್ರ ಸಹ ನಟನೆಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.
ಅಲ್ಲು ಅರ್ಜುನ್ (Allu Arjun), ಟಾಲಿವುಡ್ನ ಸ್ಟಾರ್ ನಟ. ಅವರ ಸಹೋದರ ಅಲ್ಲು ಸಿರೀಶ್ ಸಹ ಟಾಲಿವುಡ್ನಲ್ಲಿ ಕೆಲವು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ. ಇನ್ನಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಅಲ್ಲು ಅರ್ಜುನ್ರ ತಂದೆ ಅಲ್ಲು ಅರವಿಂದ್ ತೆಲುಗು ಚಿತ್ರರಂಗದ ಹಿರಿಯ ಮತ್ತು ಯಶಸ್ವಿ ನಿರ್ಮಾಪಕ. ಅಲ್ಲು ಅರ್ಜುನ್ ಪುತ್ರಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯ, ಸಮಂತಾ ಜೊತೆಗೆ ಸಿನಿಮಾದಲ್ಲಿ ನಟಿಸಿದ್ದಾರೆ ಕೂಡ. ಈಗ ಅಲ್ಲು ಅರ್ಜುನ್ ಪುತ್ರ ಸಹ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಅದೂ ಭಾರಿ ಬಜೆಟ್ನ ಸಿನಿಮಾ ಮೂಲಕ ಬರಲಿದ್ದಾರೆ.
ಅಲ್ಲು ಅರ್ಜುನ್ರ ಪುತ್ರ ಅಲ್ಲು ಅಯಾನ್ ‘ಪುಷ್ಪ 2’ನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಹೌದು, ‘ಪುಷ್ಪ 2’ ಸಿನಿಮಾದಲ್ಲಿ ಪುಷ್ಪನ ಮಗನ ಪಾತ್ರದಲ್ಲಿ ಅಲ್ಲು ಅಯಾನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೆ ಬರ್ಲಿನ್ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ನಟ ಅಲ್ಲು ಅರ್ಜುನ್, ‘ಪುಷ್ಪ 3’ ಬರಲಿರುವ ಬಗ್ಗೆ ಮಾತನಾಡಿದ್ದರು. ಈಗ ‘ಪುಷ್ಪ 2’ನಲ್ಲಿ ಅಲ್ಲು ಅಯಾನ್ ಪಾತ್ರವನ್ನು ಇಂಟ್ರೊಡ್ಯೂಸ್ ಮಾಡಿಸಿದ್ದೇ ಆದಲ್ಲಿ, ‘ಪುಷ್ಪ 3’ ಸಿನಿಮಾನಲ್ಲಿ ಸಹಜವಾಗಿಯೇ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ. ಒಂದೊಮ್ಮೆ ‘ಪುಷ್ಪ’ ಸಿನಿಮಾ ಸರಣಿ ಮುಂದುವರೆದಲ್ಲಿ ಅಲ್ಲು ಅಯಾನ್ ನಾಯಕನಾಗಿಯೂ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಇದನ್ನೂ ಓದಿ:ಸುಮ್ಮನೆ ವಿದೇಶಕ್ಕೆ ಹೋಗಿಲ್ಲ ಅಲ್ಲು ಅರ್ಜುನ್; ಇದರ ಹಿಂದಿದೆ ಮಾಸ್ಟರ್ ಪ್ಲ್ಯಾನ್
ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಜನಪ್ರಿಯರು. ಅಲ್ಲು ಅರ್ಹಾ ‘ಅಂಜಲಿ-ಅಂಜಲಿ’ ವಿಡಿಯೋ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಸಮಂತಾ ನಟಿಸಿರುವ ‘ಶಾಕುಂತಲಂ’ ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಇದೀಗ ಅಲ್ಲು ಅಯಾನ್ ಚಿತ್ರರಂಗಕ್ಕೆ ಬರಲು ಸಜ್ಜಾಗುತ್ತಿದ್ದಾರೆ. ಅಲ್ಲು ಅರ್ಜುನ್ ಪ್ರಸ್ತುತ ‘ಪುಷ್ಪ 2’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದಾದ ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ