AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಲ್ಕಿ 2898 ಎಡಿ’ ಬಿಡುಗಡೆ ಮುಂದಕ್ಕೆ ಹೋಗತ್ತೆ ಎಂದವರಿಗೆ ಇಲ್ಲಿದೆ ಖಡಕ್​ ಉತ್ತರ

ಬಹುನಿರೀಕ್ಷಿತ ‘ಕಲ್ಕಿ 2898 ಎಡಿ’ ಚಿತ್ರದ ಹಾಡಿನ ಚಿತ್ರೀಕರಣ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ನಡೆಯುತ್ತಿದೆ. ಅದರಲ್ಲಿ ಪ್ರಭಾಸ್​ ಮತ್ತು ಬಾಲಿವುಡ್​ ನಟಿ ದಿಶಾ ಪಟಾನಿ ಅವರು ಪಾಲ್ಗೊಂಡಿದ್ದಾರೆ. ಮೇ 9ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಈ ನಡುವೆ ಬಿಡುಗಡೆ ದಿನಾಂಕದ ಬಗ್ಗೆ ಕೆಲವರು ಗಾಸಿಪ್​ ಹಬ್ಬಿಸಿದ್ದಾರೆ.

‘ಕಲ್ಕಿ 2898 ಎಡಿ’ ಬಿಡುಗಡೆ ಮುಂದಕ್ಕೆ ಹೋಗತ್ತೆ ಎಂದವರಿಗೆ ಇಲ್ಲಿದೆ ಖಡಕ್​ ಉತ್ತರ
ಪ್ರಭಾಸ್​
ಮದನ್​ ಕುಮಾರ್​
|

Updated on: Feb 25, 2024 | 3:13 PM

Share

ಟಾಲಿವುಡ್​ ನಟ ಪ್ರಭಾಸ್​ (Prabhas) ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ತೆಲುಗಿನ ಕೆಲವು ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್​ ಡೇಟ್​ ಬಗ್ಗೆ ಇಲ್ಲಸಲ್ಲದ ಗಾಸಿಪ್​ಗಳು ಹಬ್ಬಿವೆ. ಬಿಗ್​ ಪ್ರಾಜೆಕ್ಟ್​ಗಳ ಬಗ್ಗೆ ಇಂಥ ಗಾಳಿಸುದ್ದಿ ಹಬ್ಬುವುದು ಕಾಮನ್​. ಆದರೆ ಬಿಡುಗಡೆ ದಿನಾಂಕದ ಬಗ್ಗೆ ಗಾಸಿಪ್​ ಹರಿದಾಡಿದರೆ ಇನ್ನುಳಿದ ಚಿತ್ರಗಳ ಮೇಲೆ ಕೂಡ ಪರಿಣಾಮ ಬೀರುತ್ತದೆ. ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತೆ ಎಂದು ಕೆಲವರು ಗಾಸಿಪ್​ ಹಬ್ಬಿಸಿದ್ದಾರೆ. ಅಂಥವರಿಗೆ ನಿರ್ಮಾಪಕರ ಕಡೆಯಿಂದ ಖಡಕ್​ ಉತ್ತರ ಸಿಕ್ಕಿದೆ.

ಮೇ 9ರಂದು ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಪ್ರಭಾಸ್​ ಜೊತೆ ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಅಮಿತಾಭ್​ ಬಚ್ಚನ್​, ಕಮಲ್​ ಹಾಸನ್​ ಮುಂತಾದ ಘಟಾನುಘಟಿಗಳು ನಟಿಸುತ್ತಿದ್ದಾರೆ. ಹಾಗಾಗಿ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಅಬ್ಬರಿಸಲಿದೆ. ಸದ್ಯಕ್ಕೆ ಹಾಡಿನ ಶೂಟಿಂಗ್​ ನಡೆಯುತ್ತಿದ್ದು, ಅದರ ಬಗ್ಗೆ ನಿರ್ಮಾಣ ಸಂಸ್ಥೆ ‘ವೈಜಯಂತಿ ಮೂವೀಸ್​’ ಮೂಲಕ ಅಪ್​ಡೇಟ್​ ಸಿಕ್ಕಿದೆ.

ಎಷ್ಟೇ ಎಚ್ಚರಿಕೆ ವಹಿಸಿದರೂ ‘ಕಲ್ಕಿ 2898 ಎಡಿ’ ಶೂಟಿಂಗ್​ ಸೆಟ್​ನಿಂದ ಫೋಟೋ ಲೀಕ್​

ರಾಮೋಜಿ ಫಿಲ್ಮ್​ ಸಿಟಿಯಲ್ಲಿ ನಡೆಯುತ್ತಿರುವ ‘ಕಲ್ಕಿ 2898 ಎಡಿ’ ಸಿನಿಮಾದ ಹಾಡಿನ ಶೂಟಿಂಗ್​ನಲ್ಲಿ ಪ್ರಭಾಸ್​ ಮತ್ತು ದಿಶಾ ಪಟಾನಿ ಪಾಲ್ಗೊಂಡಿದ್ದಾರೆ. ಈ ವೇಳೆ ಪ್ರಭಾಸ್​ ಅವರು ಹಾಡಿನ ತಾಳಕ್ಕೆ ತಕ್ಕಂತೆ ಕಾಲು ಕುಣಿಸುತ್ತಿರುವ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ನಿರ್ಮಾಪಕರು ಶೇರ್​ ಮಾಡಿಕೊಂಡಿದ್ದಾರೆ. ಆ ಪೋಸ್ಟ್​ಗೆ ನೀಡಿದ ಕ್ಯಾಪ್ಷನ್​ನಲ್ಲಿ ಬಿಡುಗಡೆ ದಿನಾಂಕ ಮೇ 9 ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಲಾಗಿದೆ.

‘ವೈಜಯಂತಿ ಮೂವೀಸ್​’ ಎಕ್ಸ್​ (ಟ್ವಿಟರ್​) ಪೋಸ್ಟ್​:

ಕೆಲವೇ ದಿನಗಳ ಹಿಂದೆ ‘ಪುಷ್ಪ 2’ ಸಿನಿಮಾದ ರಿಲೀಸ್​ ಡೇಟ್​ ಬಗ್ಗೆಯೂ ಗಾಸಿಪ್​ ಹಬ್ಬಿತ್ತು. ಆದರೆ ಆ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗುವುದು ಸಾಧ್ಯವೇ ಇಲ್ಲ ಎಂದು ಚಿತ್ರತಂಡದವರು ಖಚಿತಪಡಿಸಿದ್ದರು. ಈಗ ‘ಕಲ್ಕಿ 2898 ಎಡಿ’ ಸಿನಿಮಾದವರು ಕೂಡ ತಮ್ಮ ರಿಲೀಸ್​ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಈ ಮೂಲಕ ತಿಳಿಸಿದ್ದಾರೆ. ಪ್ರಭಾಸ್​ ಅಭಿಮಾನಿಗಳು ‘ಕಲ್ಕಿ 2898 ಎಡಿ’ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ಸೈನ್​ ಫಿಕ್ಷನ್​ ಸಿನಿಮಾ ಆದ್ದರಿಂದ ಪ್ರಭಾಸ್​ ಅವರ ವೃತ್ತಿಜೀವನದಲ್ಲಿ ಡಿಫರೆಂಟ್​ ಪ್ರಯತ್ನವಾಗಿ ಗಮನ ಸೆಳೆಯಲಿದೆ. ‘ಮಹಾನಟಿ’ ಖ್ಯಾತಿಯ ನಾಗ್​ ಅಶ್ವಿನ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ‘ಕಲ್ಕಿ 2898 ಎಡಿ’ ನಿರ್ಮಾಣ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ