ಎಷ್ಟೇ ಎಚ್ಚರಿಕೆ ವಹಿಸಿದರೂ ‘ಕಲ್ಕಿ 2898 ಎಡಿ’ ಶೂಟಿಂಗ್ ಸೆಟ್ನಿಂದ ಫೋಟೋ ಲೀಕ್
2024ರ ಬಹುನಿರೀಕ್ಷಿತ ಚಿತ್ರಗಳಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಸಹ ಇದೆ. ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಚಿತ್ರ ನಿರ್ಮಾಣ ಆಗುತ್ತಿದೆ. ಶೂಟಿಂಗ್ ಸೆಟ್ನಿಂದ ಕೆಲವು ಫೋಟೋಗಳು ಲೀಕ್ ಆಗಿರುವುದು ಬೇಸರದ ಸಂಗತಿ. ಇದರಿಂದ ಚಿತ್ರತಂಡಕ್ಕೆ ಚಿಂತೆ ಉಂಟಾಗಿದೆ. ಫೋಟೋಗಳು ಲೀಕ್ ಆಗಿದ್ದಕ್ಕೆ ಪ್ರಭಾಸ್ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟ ಪ್ರಭಾಸ್ (Prabhas) ಅವರು ಬ್ಯುಸಿ ಆಗಿದ್ದಾರೆ. ‘ಸಲಾರ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಅವರ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸದ್ಯ ಅವರು ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾಗೆ ಹೈಪ್ ಸಿಗಲು ಸಾಕಷ್ಟು ಕಾರಣಗಳಿವೆ. ಆದರೆ ಚಿತ್ರತಂಡಕ್ಕೆ ನಿರಾಸೆ ಆಗುವಂತಹ ಕೆಲವು ಘಟನೆಗಳು ನಡೆಯುತ್ತಿವೆ. ‘ಕಲ್ಕಿ 2898 ಎಡಿ’ ಸಿನಿಮಾದ ಶೂಟಿಂಗ್ ಸೆಟ್ನಿಂದ ಕೆಲವು ಫೋಟೋಗಳು ಲೀಕ್ (Kalki 2898 AD Photo leak) ಆಗಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿವೆ.
ಸಿನಿಮಾದ ಶೂಟಿಂಗ್ ವೇಳೆ ಫೋಟೋ ಅಥವಾ ವಿಡಿಯೋ ಲೀಕ್ ಆಗಬಾರದು ಎಂದು ಚಿತ್ರತಂಡದವರು ಸಾಕಷ್ಟು ಎಚ್ಚರಿಕೆ ವಹಿಸುತ್ತಾರೆ. ಆ ರೀತಿ ಲೀಕ್ ಆದರೆ ಸಿನಿಮಾದ ಮೇಲೆ ಜನರಿಗೆ ಇರುವ ನಿರೀಕ್ಷೆ ಕಡಿಮೆ ಆಗುತ್ತದೆ. ಚಿತ್ರದಲ್ಲಿನ ಸಸ್ಪೆನ್ಸ್ ಕಾಪಾಡಿಕೊಳ್ಳಲು ಚಿತ್ರತಂಡ ವಿಫಲ ಆದಂತಾಗುತ್ತದೆ. ಆದ್ದರಿಂದ ತುಂಬ ಕಟ್ಟುನಿಟ್ಟಾಗಿ ಶೂಟಿಂಗ್ ಮಾಡಲಾಗುತ್ತದೆ. ಹಾಗಿದ್ದರೂ ಕೂಡ ಕೆಲವೊಮ್ಮೆ ಲೀಕ್ ಸಮಸ್ಯೆ ಎದುರಾಗುತ್ತದೆ. ಸದ್ಯ ‘ಕಲ್ಕಿ 2898 ಎಡಿ’ ಸಿನಿಮಾ ತಂಡ ಕೂಡ ಇದೇ ಕಾಟ ಅನುಭವಿಸುತ್ತಿದೆ.
ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ರಾಜಮೌಳಿ ನಟನೆ? ಹಿರಿದಾಗುತ್ತಿದೆ ಪ್ರಭಾಸ್ ಸಿನಿಮಾದ ಪಾತ್ರವರ್ಗ
‘ಕಲ್ಕಿ 2898 ಎಡಿ’ ಸಿನಿಮಾಗೆ ನಾಗ್ ಅಶ್ವಿನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದು ಸೈನ್ಸ್ ಫಿಕ್ಷನ್ ಸಿನಿಮಾ ಆದ್ದರಿಂದ ಸೆಟ್ಗಳು ಹಾಗೂ ಪಾತ್ರಗಳ ಗೆಟಪ್ಗಳು ಭಿನ್ನವಾಗಿವೆ. ಅದೆಲ್ಲವೂ ಮೊದಲೇ ಲೀಕ್ ಆದರೆ ಪ್ರೇಕ್ಷಕರ ಕೌತುಕ ಕಡಿಮೆ ಆಗುತ್ತದೆ. ಹಾಗಾಗಿ ಚಿತ್ರತಂಡಕ್ಕೆ ಇದು ತಲೆ ನೋವಾಗಿ ಪರಿಣಮಿಸಿದೆ. ಈ ಮೊದಲು ಕೂಡ ‘ಕಲ್ಕಿ 2898 ಎಡಿ’ ಸಿನಿಮಾದ ಕೆಲವು ಫೋಟೋಗಳು ಲೀಕ್ ಆಗಿದ್ದರಿಂದ ವಿಎಫ್ಎಕ್ಸ್ ಕಂಪನಿ ವಿರುದ್ಧ ಚಿತ್ರತಂಡ ಕಾನೂನು ಹೋರಾಟ ಮಾಡಲು ಮುಂದಾಗಿತ್ತು.
ಇದನ್ನೂ ಓದಿ: ‘ಕಲ್ಕಿ 2898 ಎಡಿ’ ರಿಲೀಸ್ ದಿನಾಂಕ ತಿಳಿಸಿದ ತಂಡ; ಈ ಡೇಟ್ ಆಯ್ಕೆಗೆ ಇದೆ ವಿಶೇಷ ಕಾರಣ
ಪ್ರಭಾಸ್ ಮುಖ್ಯ ಭೂಮಿಕೆ ನಿಭಾಯಿಸುತ್ತಿರುವ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಅನೇಕ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಕಾಲಿವುಡ್ನ ಲೆಜೆಂಡರಿ ನಟ ಕಮಲ್ ಹಾಸನ್, ಬಾಲಿವುಡ್ನ ದಿಗ್ಗಜ ಕಲಾವಿದ ಅಮಿತಾಭ್ ಬಚ್ಚನ್, ಬಿ-ಟೌನ್ ಬೆಡಗಿಯರಾದ ದೀಪಿಕಾ ಪಡುಕೋಣೆ, ದಿಶಾ ಪಟಾನಿ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪಾತ್ರವರ್ಗದ ಕಾರಣದಿಂದಲೇ ಸಿನಿಮಾದ ಕ್ರೇಜ್ ಜೋರಾಗಿದೆ.
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಕೂಡ ಇದೆ. ಭಾರಿ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಮೇ 9ರಂದು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ. ಸಿನಿಮಾದ ಕೆಲಸಗಳು ಬಿರುಸಿನಿಂದ ನಡೆಯುತ್ತಿವೆ. ಈ ವೇಳೆ ಶೂಟಿಂಗ್ ಸೆಟ್ನಿಂದ ಫೋಟೋಗಳು ಲೀಕ್ ಆಗಿರುವುದು ಬೇಸರದ ಸಂಗತಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.