ಸುಮ್ಮನೆ ವಿದೇಶಕ್ಕೆ ಹೋಗಿಲ್ಲ ಅಲ್ಲು ಅರ್ಜುನ್​; ಇದರ ಹಿಂದಿದೆ ಮಾಸ್ಟರ್​ ಪ್ಲ್ಯಾನ್​

‘ಪುಷ್ಪ 2’ ಸಿನಿಮಾದ ವ್ಯಾಪ್ತಿ ಹಿರಿದಾಗುತ್ತಿದೆ. ಅದಕ್ಕೆ ತಕ್ಕಂತೆಯೇ ಚಿತ್ರತಂಡ ಹೊಸ ಹೊಸ ಪ್ಲ್ಯಾನ್​ಗಳನ್ನು ಮಾಡುತ್ತಿದೆ. ನಟ ಅಲ್ಲು ಅರ್ಜುನ್​ ಅವರು ಕೆಲವೇ ದಿನಗಳ ಹಿಂದೆ ಬರ್ಲಿನ್​ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗಿ ಆಗಿದ್ದರು. ಅವರು ಅಲ್ಲಿಗೆ ತೆರಳಿದ್ದಕ್ಕೆ ಒಂದು ಮುಖ್ಯ ಕಾರಣ ಇದೆ ಎನ್ನಲಾಗುತ್ತಿದೆ. ಸುಕುಮಾರ್​ ಅವರು ನಿರ್ದೇಶನ ಮಾಡುತ್ತಿರುವ ಈ ಚಿತ್ರ ಹೈಪ್​ ಸೃಷ್ಟಿ ಮಾಡಿದೆ.

ಸುಮ್ಮನೆ ವಿದೇಶಕ್ಕೆ ಹೋಗಿಲ್ಲ ಅಲ್ಲು ಅರ್ಜುನ್​; ಇದರ ಹಿಂದಿದೆ ಮಾಸ್ಟರ್​ ಪ್ಲ್ಯಾನ್​
ಅಲ್ಲು ಅರ್ಜುನ್​
Follow us
ಮದನ್​ ಕುಮಾರ್​
|

Updated on: Feb 21, 2024 | 9:42 AM

ಟಾಲಿವುಡ್​ ನಟ ಅಲ್ಲು ಅರ್ಜುನ್​ (Allu Arjun) ಅವರು ಇತ್ತೀಚೆಗೆ ವಿದೇಶಕ್ಕೆ ಹಾರಿದ್ದರು. ಅವರು ಅಭಿನಯಿಸುತ್ತಿರುವ ‘ಪುಷ್ಪ 2’ (Pushpa 2) ಸಿನಿಮಾದ ಶೂಟಿಂಗ್​ ಹೈದರಾಬಾದ್​ನಲ್ಲಿ ಭರದಿಂದ ಸಾಗುತ್ತಿದೆ. ಈ ಕೆಲಸವನ್ನು ಬಿಟ್ಟು ಅವರು ವಿದೇಶಕ್ಕೆ ಹೋಗಿ, ಅಲ್ಲಿನ ಫಿಲ್ಮ್​ ಫೆಸ್ಟಿವಲ್​ನಲ್ಲಿ ಭಾಗಿ ಆಗಿದ್ದರಿಂದ ಅನೇಕರಿಗೆ ಅಚ್ಚರಿ ಆಗಿತ್ತು. ‘ಬರ್ಲಿನ್​ ಫಿಲ್ಮ್​ ಫಿಸ್ಟಿವಲ್​’ನಲ್ಲಿ ಅಲ್ಲು ಅರ್ಜುನ್​ ಹಾಜರಿ ಹಾಕಿದ್ದು ಯಾಕೆ ಎಂಬ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಅಂದಹಾಗೆ, ಸುಮ್​ ಸುಮ್ಮನೆ ಅವರು ಕೆಲಸ ಬಿಟ್ಟು ಅಲ್ಲಿಗೆ ತೆರಳಿಲ್ಲ. ಅವರು ‘ಬರ್ಲಿನ್​ ಫಿಲ್ಮ್​ ಫಿಸ್ಟಿವಲ್​’ಗೆ (Berlin Film Festival) ತೆರಳಿದ್ದರ ಹಿಂದೆ ಒಂದು ಮಾಸ್ಟರ್​ ಪ್ಲ್ಯಾನ್​ ಇದೆ ಎಂದು ಹೇಳಲಾಗುತ್ತಿದೆ.

‘ಪುಷ್ಪ 2’ ಸಿನಿಮಾಗೆ ನಿರ್ದೇಶಕ ಸುಕುಮಾರ್​ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಮೂಡಿಬರುತ್ತಿದೆ. ನೂರಾರು ಕೋಟಿ ರೂಪಾಯಿ ಬಂಡವಾಳ ಸುರಿಯಲಾಗುತ್ತಿದೆ. ಅದಕ್ಕೆ ಸೂಕ್ತ ಪ್ರತಿಫಲ ಸಿಗಬೇಕು ಎಂದರೆ ವಿದೇಶಿ ಮಾರುಕಟ್ಟೆಯ ಮೇಲೆ ಗಮನ ಹರಿಸಬೇಕು. ಆ ಉದ್ದೇಶದಿಂದಲೇ ಅಲ್ಲು ಅರ್ಜುನ್​ ಅವರು ಬರ್ಲಿನ್​ ಫಿಲ್ಮ್​ ಫೆಸ್ಟಿವಲ್​ಗೆ ತೆರಳಿದ್ದರು ಎಂಬ ಮಾಹಿತಿ ಕೇಳಿಬರುತ್ತಿದೆ.

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅಲ್ಲು ಅರ್ಜುನ್​ ಅವರು ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ. ‘ಬರ್ಲಿನ್​ ಫಿಲ್ಮ್​ ಫೆಸ್ಟಿವಲ್​’ನಲ್ಲಿ ಭಾಗಿಯಾದ ಅವರು ಅಲ್ಲಿನ ಸಿನಿಪ್ರಿಯರ ಜೊತೆ ಸಂವಾದ ನಡೆಸಿದ್ದಾರೆ. ಅಲ್ಲಿನ ಸಿನಿಮೋತ್ಸವ ಯಾವ ರೀತಿ ಇರುತ್ತದೆ ಎಂಬುದನ್ನು ಅವರು ಗಮನಿಸಿದ್ದಾರೆ. ಕೆಲವು ವಿತರಕರ ಜೊತೆ ಮಾತುಕಥೆ ಕೂಡ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಗುಂಟೂರು ಖಾರಂ’ ನೋಡಿದ ಬಳಿಕ ಅಲ್ಲು ಅರ್ಜುನ್​ಗೆ ಶುರುವಾಗಿದೆ ಭಯ? ನಡೆಯಿತು ತುರ್ತು ಮಾತುಕತೆ

ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಮಾತ್ರವಲ್ಲದೇ ವಿದೇಶದ ಭಾಷೆಗಳಿಗೂ ‘ಪುಷ್ಪ 2’ ಸಿನಿಮಾವನ್ನು ಡಬ್​ ಮಾಡಿ ರಿಲೀಸ್​ ಮಾಡುವ ಸಾಧ್ಯತೆ ಇದೆ. ಅದಕ್ಕೆ ಅಲ್ಲಿನ ವಿತರಕರು ಮುಂದೆ ಬರಬೇಕು. ಅವರ ಮನವೊಲಿಸುವ ಸಲುವಾಗಿಯೇ ಅಲ್ಲು ಅರ್ಜುನ್​ ಅವರು ಬರ್ಲಿನ್​ ಫಿಲ್ಮ್​ ಫೆಸ್ಟಿವಲ್​ಗೆ ಹೋಗಿದ್ದು ಎಂದು ಸುದ್ದಿ ಹಬ್ಬಿದೆ. ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆಯ ಮೂಲಕ ಈ ಸಿನಿಮಾ ಸಿದ್ಧವಾಗುತ್ತಿದೆ.

ಇದನ್ನೂ ಓದಿ: ‘ಖಂಡಿತವಾಗಿ ನೀವು ‘ಪುಷ್ಪ 3’ ನಿರೀಕ್ಷಿಸಬಹುದು’: ಗುಡ್​ ನ್ಯೂಸ್​ ನೀಡಿದ ಅಲ್ಲು ಅರ್ಜುನ್​

‘ಪುಷ್ಪ 3’ ಸಿನಿಮಾವನ್ನು ಕೂಡ ಪ್ರೇಕ್ಷಕರು ನಿರೀಕ್ಷಿಸಬಹುದು ಎಂದು ಅಲ್ಲು ಅರ್ಜುನ್​ ಅವರು ಇತ್ತೀಚೆಗೆ ಹೇಳಿದ್ದಾರೆ. ಅದರಿಂದ ಅಭಿಮಾನಿಗಳಲ್ಲಿನ ಕ್ರೇಜ್​ ಹೆಚ್ಚಾಗಿದೆ. ‘ಪುಷ್ಪ 2’ ಸಿನಿಮಾಗೆ ಶೂಟಿಂಗ್​ ನಡೆಯುತ್ತಿದೆ. ಅಲ್ಲು ಅರ್ಜುನ್​ ಜೊತೆ ರಶ್ಮಿಕಾ ಮಂದಣ್ಣ, ಫಹಾದ್​ ಫಾಸಿಲ್, ಡಾಲಿ ಧನಂಜಯ್​ ಮುಂತಾದವರು ನಟಿಸುತ್ತಿದ್ದಾರೆ. ಆಗಸ್ಟ್​ 15ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಬಾಕ್ಸ್​ ಆಫೀಸ್​ನಲ್ಲಿ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬ ಕೌತುಕ ಎಲ್ಲರಲ್ಲೂ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.