AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ಉದ್ದೇಶಕ್ಕೆ ತ್ರಿಶಾರನ್ನು 25 ಲಕ್ಷ ರೂಪಾಯಿಗೆ ಕೇಳಿದ್ರು’ ಎಂದ ಎ.ವಿ. ರಾಜು ವಿರುದ್ಧ ನಟಿ ಗರಂ

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್​ ಬಗ್ಗೆ ಎ.ವಿ. ರಾಜು ಕೆಟ್ಟದಾಗಿ ಮಾತನಾಡಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದೆ. ಅದನ್ನು ನೋಡಿ ನಟಿಯ ಅಭಿಮಾನಿಗಳು ಗರಂ ಆಗಿದ್ದಾರೆ. ತ್ರಿಶಾ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಬಗ್ಗೆ ಮಾನಹಾನಿ ಆಗುವಂತೆ ಮಾತನಾಡಿದವರಿಗೆ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಲು ತ್ರಿಶಾ ಮುಂದಾಗಿದ್ದಾರೆ.

‘ಆ ಉದ್ದೇಶಕ್ಕೆ ತ್ರಿಶಾರನ್ನು 25 ಲಕ್ಷ ರೂಪಾಯಿಗೆ ಕೇಳಿದ್ರು’ ಎಂದ ಎ.ವಿ. ರಾಜು ವಿರುದ್ಧ ನಟಿ ಗರಂ
ಎ.ವಿ. ರಾಜು, ತ್ರಿಶಾ ಕೃಷ್ಣನ್​
TV9 Web
| Updated By: ಮದನ್​ ಕುಮಾರ್​|

Updated on:Feb 21, 2024 | 7:38 AM

Share

ನಟಿಯರನ್ನು ಬಹಳ ಸುಲಭವಾಗಿ ಟಾರ್ಗೆಟ್​ ಮಾಡಲಾಗುತ್ತದೆ. ಸಿನಿಮಾ ಕಲಾವಿದೆಯರ ಬಗ್ಗೆ ಅನೇಕರು ಕೆಟ್ಟದಾಗಿ ಮಾತನಾಡುತ್ತಾರೆ. ಒಂದಷ್ಟು ದಿನಗಳ ಹಿಂದೆ ಖ್ಯಾತ ನಟಿ ತ್ರಿಶಾ ಕೃಷ್ಣನ್​ (Trisha Krishnan) ಬಗ್ಗೆ ನಟ ಮನ್ಸೂರ್​ ಅಲಿ ಖಾನ್​ ಅಸಭ್ಯವಾಗಿ ಮಾತನಾಡಿದ್ದರು. ಈಗ ತಮಿಳುನಾಡಿನಲ್ಲಿ ರಾಜಕೀಯ ಮುಖಂಡ ಎ.ವಿ. ರಾಜು ಕೂಡ ತ್ರಿಶಾ ಕೃಷ್ಣನ್​ ಬಗ್ಗೆ ಕೆಟ್ಟದಾಗಿ ಹೇಳಿಕೆ ನೀಡಿದ್ದಾರೆ. ಮಾನಹಾನಿ ಆಗುವಂತೆ ಮಾತನಾಡಿದ ಎ.ವಿ. ರಾಜು ವಿರುದ್ಧ ಈಗ ತ್ರಿಶಾ ಗುಡುಗಿದ್ದಾರೆ. ಕಾನೂನಿನ ಕ್ರಮ ಕೈಗೊಳ್ಳುವುದಾಗಿ ತ್ರಿಶಾ ಹೇಳಿದ್ದಾರೆ. ಅಷ್ಟಕ್ಕೂ ತ್ರಿಶಾ ಬಗ್ಗೆ ಎ.ವಿ. ರಾಜು (AV Raju) ಹೇಳಿದ್ದೇನು? ಇಲ್ಲಿದೆ ವಿವರ..

ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡುವಾಗ ಎ.ವಿ. ರಾಜು ಅವರು ತ್ರಿಶಾ ಹೆಸರನ್ನು ಎಳೆದು ತಂದಿದ್ದರು. ‘ಲೈಂಗಿಕ ಬಯಕೆಗಾಗಿ ಎ. ವೆಂಕಟಾಚಲಂ ಅವರು ತ್ರಿಶಾರನ್ನು 25 ಲಕ್ಷ ರೂಪಾಯಿಗೆ ಕೇಳಿದ್ದರು. ಅದನ್ನು ಶಾಸಕ ಕರುಣಾಸ್​ ವ್ಯವಸ್ಥೆ ಮಾಡಿಸಿದ್ದರು. ಅದಕ್ಕಾಗಿ ಹಲವು ನಟಿಯರು ಇದ್ದಾರೆ’ ಎಂದು ಎ.ವಿ. ರಾಜು ಹೇಳಿರುವ ವಿಡಿಯೋ ವೈರಲ್​ ಆಗಿದೆ. ಅದನ್ನು ಅನೇಕರು ಖಂಡಿಸಿದ್ದಾರೆ.

ತ್ರಿಶಾ ಕೃಷ್ಣನ್​ ಬಗ್ಗೆ ಎ.ವಿ. ರಾಜು ಮಾತನಾಡಿದ ವಿಡಿಯೋ:

ತ್ರಿಶಾ ತಿರುಗೇಟು:

ಎ.ವಿ. ರಾಜು ಹೇಳಿಕೆಗೆ ಸೋಶಿಯಲ್​ ಮೀಡಿಯಾದಲ್ಲಿ ತ್ರಿಶಾ ತಿರುಗೇಟು ನೀಡಿದ್ದಾರೆ. ‘ಪ್ರಚಾರ ಪಡೆಯಲು ಕೀಳು ವ್ಯಕ್ತಿಗಳು ಎಂಥ ಕೆಳಮಟ್ಟಕ್ಕೆ ಬೇಕಾದರು ಇಳಿಯುವುದನ್ನು ಪದೇಪದೇ ನೋಡಲು ಅಸಹ್ಯ ಎನಿಸುತ್ತೆ. ಖಂಡಿತವಾಗಿಯೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನನ್ನ ಲೀಗಲ್​ ಡಿಪಾರ್ಟ್​ಮೆಂಟ್​ನವರು ಎಲ್ಲವನ್ನೂ ನೋಡಿಕೊಳ್ಳಲಿದ್ದಾರೆ’ ಎಂದು ತ್ರಿಶಾ ಟ್ವೀಟ್​ ಮಾಡಿದ್ದಾರೆ. ಎಲ್ಲಿಯೂ ಅವರು ಎ.ವಿ. ರಾಜು ಹೆಸರು ಪ್ರಸ್ತಾಪ ಮಾಡಿದ್ದರು.

ತ್ರಿಶಾ ಕೃಷ್ಣನ್​ ಎಕ್ಸ್​ (ಟ್ವಿಟರ್​) ಪೋಸ್ಟ್​:

ಇತ್ತೀಚೆಗೆ ಕೀಳಾಗಿ ಮಾತನಾಡುವವರ ಸಂಖ್ಯೆ ಜಾಸ್ತಿ ಆಗಿದೆ. ಅಂಥವರ ವಿರುದ್ಧ ತ್ರಿಶಾ ಖಂಡಿತವಾಗಿಯೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಈ ಮೊದಲು ಕಾಲಿವುಡ್​ ನಟ ಮನ್ಸೂರ್​ ಅಲಿ ಖಾನ್​ ಅವರು ತ್ರಿಶಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಅವರ ವಿರುದ್ಧ ತ್ರಿಶಾ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು. ಈಗ ಎ.ವಿ. ರಾಜು ವಿರುದ್ಧ ಅವರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ: ಎಂಗೇಜ್​ಮೆಂಟ್ ಮುರಿದುಕೊಂಡಿದ್ದ ತ್ರಿಶಾ ಕೊನೆಗೂ ಮದುವೆ ಆಗುತ್ತಿದ್ದಾರೆ; ಉದ್ಯಮಿ ಜೊತೆ ವಿವಾಹ?

ತ್ರಿಶಾ ಅವರಿಗೆ ಈಗ 40 ವರ್ಷ ವಯಸ್ಸು. ಹಲವು ವರ್ಷಗಳಿಂದ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಇಂದಿಗೂ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ಈಗಲೂ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಅನೇಕ ಸ್ಟಾರ್​ ನಟರ ಜೊತೆ ನಟಿಸಿ ತ್ರಿಶಾ ಸೈ ಎನಿಸಿಕೊಂಡಿದ್ದಾರೆ. ಅವರ ಬಗ್ಗೆ ಕೆಲವರು ಕೆಟ್ಟದಾಗಿ ಮಾತನಾಡಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ. ಎ.ವಿ. ರಾಜು ಮಾತನಾಡಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:35 am, Wed, 21 February 24